ರಿಷಬ್​ ಶೆಟ್ಟಿ ಮನೆಯಲ್ಲಿ ದೀಪಾವಳಿ ಬಲು ಜೋರು: ಪೋಟೋಸ್ ನೋಡಿದ ಫ್ಯಾನ್ಸ್ ಹೀಗೆ ಅನ್ನೋದಾ!

First Published Nov 15, 2023, 8:36 AM IST

ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ರಿಷಬ್​ ಶೆಟ್ಟಿ ದೀಪಾವಳಿಯನ್ನು ಫ್ಯಾಮಿಲಿ ಜೊತೆ ಆಚರಿಸಿದ್ದಾರೆ. ಟ್ರೆಡಿಷನಲ್​ ಲುಕ್​ನಲ್ಲಿ ರಿಷಬ್​ ಫ್ಯಾಮಿಲಿ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ.

ರಿಷಬ್​ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಮಕ್ಕಳ ಜೊತೆ ಜೊತೆ ರಿಷಬ್ ದೀಪ ಹಚ್ಚಿ ಸಂಭ್ರಮಿಸಿದರು. ಶೂಟಿಂಗ್ ಬ್ಯುಸಿ ನಡುವೆ ಕಾಂತಾರ ನಟ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದ ಖುಷಿಯಲ್ಲಿದ್ದಾರೆ.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಮಕ್ಕಳ ಜೊತೆ ಬೆಳಕಿನ ಹಬ್ಬ ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಿಕೊಂಡಿದ್ದು, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಮನೆಯಲ್ಲೂ ಹಬ್ಬ ಮಕ್ಕಳೊಂದಿಗೆ ಕಳೆಗಟ್ಟಿದೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಗೆ ರಣ್ವಿತ್ ಶೆಟ್ಟಿ ಹಾಗೂ ರಾಧ್ಯಾ ಶೆಟ್ಟಿ ಎಂಬ ಮುದ್ದಾದ ಮಕ್ಕಳಿದ್ದಾರೆ.

ಫೋಟೋಸ್ ನೋಡಿದ ನೆಟ್ಟಿಗರು ರಿಷಬ್​ ಶೆಟ್ಟಿ ಅವರಿಗೆ ಹ್ಯಾಪಿ ದೀಪಾವಳಿ, ಸಂಪ್ರದಾಯ ಅಂದ್ರೆ ಹೀಗಿರಬೇಕು ಶೆಟ್ರೆ, ಬ್ಯೂಟಿಫುಲ್ ಫ್ಯಾಮಿಲಿ ಅಂತೆಲ್ಲಾ ಕಾಮೆಂಟ್ ಹಾಕುವುದರ ಜೊತೆಗೆ ಕಾಂತರಾ 2 ಯಾವಾಗ ಬರುತ್ತೆ ಎಂದು ಕೇಳಿದ್ದಾರೆ.

ಕಾಂತಾರ ಪ್ರೀಕ್ವೆಲ್​ ಕೆಲಸದಲ್ಲಿ ನಟ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಕಾಂತಾರ ಸಿನಿಮಾವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ರಿಷಬ್ ಶೆಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಎರಡು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕಾಂತಾರ 2’ ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಬಹಳ ಗುಟ್ಟಾಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಬಗ್ಗೆ ಸಿನಿಮಾದ ಕತೆಯ ಬಗ್ಗೆ ಗುಟ್ಟನ್ನು ಬಿಟ್ಟುಕೊಡದೆ ಚಿತ್ರೀಕರಣ ಮಾಡುತ್ತಿದ್ದಾರೆ ರಿಷಬ್.

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕೂಡ ಇತ್ತೀಚಿಗೆ ಸಖತ್ ಸುದ್ದಿಯಲ್ಲಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿ ಕೂಡ ರಿಷಬ್ ಶೆಟ್ಟಿಯ ಅನೇಕ ಸಿನಿಮಾಗಳಿಗೂ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.

click me!