ಕಾಂತಾರ 2 ಸಿನಿಮಾಗಾಗಿ ಗೆಟಪ್‌ ಬದಲಿಸಿದ ರಿಷಭ್‌ ಶೆಟ್ಟಿ: ದೀಪಾವಳಿ ಸಂಭ್ರಮದಲ್ಲಿ ಹೊಸ ಗೆಟಪ್‌ ರಿವೀಲ್‌!

Published : Nov 14, 2023, 08:44 PM ISTUpdated : Nov 14, 2023, 08:45 PM IST

ಕನ್ನಡದ ಪ್ರಾದೇಶಿಕ ದೈವಭಕ್ತಿಯ ಸಿನಿಮಾವನ್ನು ಮಾಡಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ರಿಷಭ್‌ ಶೆಟ್ಟಿ ಅವರು ಕಾಂತಾರ-2 ಸಿನಿಮಾಗಾಗಿ ತಮ್ಮ ಗೆಟಪ್‌ ಅನ್ನು ಬದಲಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿ ಹಂಚಿಕೊಂಡ ಫೋಟೋದಲ್ಲಿ ಹೊಸ ಗೆಟಪ್‌ ರಿವೀಲ್‌ ಆಗಿದೆ.

PREV
19
ಕಾಂತಾರ 2 ಸಿನಿಮಾಗಾಗಿ ಗೆಟಪ್‌ ಬದಲಿಸಿದ ರಿಷಭ್‌ ಶೆಟ್ಟಿ: ದೀಪಾವಳಿ ಸಂಭ್ರಮದಲ್ಲಿ ಹೊಸ ಗೆಟಪ್‌ ರಿವೀಲ್‌!

ಕರ್ನಾಟಕ ರಾಜ್ಯದ ಪ್ರಾದೇಶಿಕ ದೈವಾಚರಣೆಯ ಕುರಿತಾದ ಕಾಂತಾರ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ಭಾರಿ ಯಶಸ್ಸು ಗಳಿಸಿದೆ.

29

ರಾಷ್ಟ್ರಿಯ ಮಟ್ಟದಲ್ಲಿ ವಿವಿಧ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇನ್ನು ಕಾಂತಾರ 2 ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದ ರಿಷಭ್‌ ಶೆಟ್ಟಿ ಇದೀಗ ಚಿತ್ರೀಕರಣವನ್ನೂ ಆರಂಭಿಸಿದ್ದಾರೆ ಎಂದು ಕೇಳಿಬಂದಿದೆ.

39

ಆದರೆ, ದೀಪಾವಳಿ ಸಂಭ್ರಮದಲ್ಲಿರುವ ರಿಷಭ್‌ ಕುಟುಂಬದಿಂದ ಕಾಂತಾರ2 ಸಿನಿಮಾದಲ್ಲಿ ನಾಯಕ ರಿಷಭ್‌ ಶೆಟ್ಟಿ ಪಾತ್ರ ಹೇಗಿರಲಿದೆ ಎಂಬ ಸುಳಿವು ಪ್ರೇಕ್ಷಕರಿಗೆ ಲಭ್ಯವಾಗಿದೆ. 
 

49

ಭರ್ಜರಿಯಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದ ರಿಷಭ್‌ ಶೆಟ್ಟಿ ಕುಟುಂಬದ ಫೋಟೋವನ್ನು ಅವರ ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

59

ದೀಪಾವಳಿ ಸಂಭ್ರಮದ ಫ್ಯಾಮಿಲಿ ಫೋಟೋದಲ್ಲಿ ರಿಷಭ್‌ ಶೆಟ್ಟಿಯ ಹೊಸ ಗೆಟಪ್‌ ರಿವೀಲ್‌ ಆಗಿದೆ. ಈ ಮೂಲಕ ಕಾಂತಾರ2 ಸಿನಿಮಾದ ಗೆಟಪ್‌ ಏನೆಂಬುದನ್ನು ಅಭಿಮಾನಿಗಳು ಊಹಿಸಬಹುದು.

69

ಕಾಂತಾರ ಸಿನಿಮಾ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿಸಿದೆ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈಗ ಕಾಂತಾರ ಕಥೆಯನ್ನು ಮತ್ತಷ್ಟು ಹಿಗ್ಗಿಸಿದ ರಿಷಭ್‌ ಕಾಂತಾರ-2 ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ.

79

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದ್ದು, ರಿಷಬ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

89

ಕಾಂತಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೆಳ್ಳನೆಯ ಗಡ್ಡವನ್ನು ಬಿಟ್ಟಿದ್ದ ರಿಷಬ್ ಶೆಟ್ಟಿ, ಕಾಂತಾರ2 ಚಿತ್ರಕ್ಕೆ ಉದ್ದನೆಯ ಗಡ್ಡವನ್ನು ಬಿಟ್ಟಿದ್ದಾರೆ. 

99

ಇನ್ನು ಹೊಂಬಾಳೆ ಫಿಲಮ್ಸ್ ವತಿಯಿಂದ ಕಾಂತಾರ ಸಿನಿಮಾಕ್ಕೆ ಹೂಡಿಕೆ ಮಾಡಿದ್ದ ಬಂಡವಾಳದ 3 ಪಟ್ಟು ಬಂಡವಾಳವನ್ನು ಕಾಂತಾರ 2 ಸಿನಿಮಾಕ್ಕೆ  ಹೂಡುತ್ತಿದೆ.

Read more Photos on
click me!

Recommended Stories