ಶೇಕ್ ಇಟ್ ಫುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಿಮಿಕಾ ಎಂಜಿನೀಯರ್!

First Published | Nov 14, 2023, 5:15 PM IST

ಬಹುಶಃ ನಿಮಿತಾ ರತ್ನಾಕರ್ ಅಂದ್ರೆ ಜನಕ್ಕೆ ಗುರುತಿಸೋದು ಕಷ್ಟ. ಯಾಕಂದ್ರೆ ಇವರು ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್ ಆಗಿರೋದೇ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ. ಅಷ್ಟಕ್ಕೂ ಯಾರೀಕೆ? ಏನೀವರ ವಿಶೇಷತೆ? 
 

ಸಣ್ಣ ಮಕ್ಕಳಿರಲಿ, ಹಿರಿಯರೇ ಇರಲಿ ಕಳೆದ ಕೆಲ ಸಮಯದಲ್ಲಿ ಎಲ್ಲರ ಬಾಯಲ್ಲೂ ಸಿಕ್ಕಾಪಟ್ಟ ಓಡಾಡ್ತ ಇರೋ ಹಾಡು ಎಂದರೆ ಅದು ಶೇಕ್ ಇಟ್ ಪುಷ್ಪವತಿ (Shake it pushpavathi) ಹಾಡು. ಕ್ರಾಂತಿ ಚಿತ್ರದ ಈ ಹಾಡು ಭಾರಿ ಕ್ರೇಜ್ ಹುಟ್ಟು ಹಾಕಿತ್ತು. 
 

ನಿಮಿಕಾ ರತ್ನಾಕರ್ (Nimika ratnakar) ಅಂದ್ರೆ ಯಾರಪ್ಪ ಇವರು, ಎಲ್ಲೋ ಕೇಳಿದ ಹಾಗಿದೆ ಎಂದು ಅನಿಸಬಹುದು. ಆದ್ರೆ ಶೇಕ್ ಇಟ್ ಪುಷ್ಫವತಿಯ ಚೆಲುವೆ ಎಂದರೆ ಖಂಡಿತವಾಗಿಯೂ ತಿಳಿಯಬಹುದು. ಹೌದು ದರ್ಶನ್ ಜೊತೆಗೆ ಶೇಕ್ ಇಟ್ ಪುಷ್ಪವತಿ ಹಾಡಿಗೆ ಸೊಂಟ ಬಳುಕಿಸಿದ ನೀಳ ಚೆಲುವೆ ನಿಮಿಕಾ ರತ್ನಾಕರ್. 
 

Tap to resize

ನಿಮಿಕಾ ರತ್ನಾಕರ್ ಕನ್ನಡ ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಸಕ್ರಿಯವಾಗಿರುವ ನಟಿ.  ಮಂಗಳೂರು ಮೂಲದ ನಿಮಿಕಾ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲ್ ಹಾಗೂ ಗಾಯಕಿಯಾಗಿರುವ ಇವರು, ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ (Miss India Super Talent) 2017ರ ವಿನ್ನರ್ ಕೂಡ ಹೌದು.
 

ನಿಮಿಕಾ 2018ರಲ್ಲಿ ರಾಮಧಾನ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ರವಿಚಂದ್ರ, ಅಬ್ಬರ ಮತ್ತು ಮಿ.ಬ್ಯಾಚುಲರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇವರನ್ನು ಜನರು ಗುರುತಿಸಿದ್ದು ಮಾತ್ರ ಪುಷ್ಪವತಿಯಾಗಿ. 
 

ನಿಮಿಕಾ ಅವರೇ ಹೇಳುವಂತೆ ನಾನು ಮೊದಲು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರೂ ಕನ್ನಡ ಇಂಡಷ್ಟ್ರಿಯಲ್ಲಿ ನಿಮಿಕಾ ರತ್ನಾಕರ್ ಅನ್ನೋರು ಇದ್ದಾರೆ ಅನ್ನೋದನ್ನು ತೋರಿಸಿದ್ದು ಮಾತ್ರ ಶೇಕ್ ಇಟ್ ಪುಷ್ಪವತಿ ಹಾಡು. ಈ ಅವಕಾಶಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. 
 

ಈ ಹಾಡಿನ ನಂತರ ಚಿತ್ರರಂಗದಲ್ಲಿ ನಟಿಯ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಹುಡುಗರಂತೂ ನಿಮಿಕಾ ಬ್ಯೂಟಿ, ಹೈಟ್, ಡ್ಯಾನ್ಸ್ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಝೀ ಕುಟುಂಬ ಅವಾರ್ಡ್ಸ್ ಸಂದರ್ಭದಲ್ಲಿ ಮತ್ತೆ ಅದೇ ಹಾಡಿಗೆ ಹೆಜ್ಜೆ ಹಾಕಿ ಮತ್ತಷ್ಟು ಕ್ರೇಜ್ ಹುಟ್ಟು ಹಾಕಿದ್ದರು ನಟಿ. 
 

ಇಂಜಿನಿಯರ್ ಆಗಿರುವ ನಿಮಿಕಾ, ಮಾಡೆಲಿಂಗ್ (Modeling) ಮಾಡುತ್ತಾ ನಂತರ ನಟನೆಯಲ್ಲಿನ ಆಸಕ್ತಿಯಿಂದಾಗಿ ಸಿನಿಮಾಗೂ ಎಂಟ್ರಿ ಕೊಟ್ಟರು. ಸದ್ಯ ಓಂಪ್ರಕಾಶ್ ಅವರ ಫೀನಿಕ್ಸ್ ಸಿನಿಮಾ, ಉಪೇಂದ್ರ ಜೊತೆಗೆ ತ್ರಿಶೂಲಂ ಸಿನಿಮಾದಲ್ಲೂ ನಿಮಿಕಾ ನಟಿಸುತ್ತಿದ್ದಾರೆ. 
 

ಹೊಸ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ ಜೊತೆ ನಟಿಸಲು ಅವಕಾಶ ಸಿಕ್ಕಿರೋದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ನಿಮಿಕಾ. ಮಾಡೆಲಿಂಗ್, ಫಿಟ್ನೆಸ್ (Fitness), ಸಂಗೀತ (Music), ನಟನೆ (Acting) ಎಲ್ಲದಕ್ಕೂ ಸೈ ಎನ್ನುವ ನಿಮಿಕಾಗೆ ಕನ್ನಡದಲ್ಲಿ ಮತ್ತಷ್ಟು ಆಫರ್ ಗಳು ಸಿಗಲಿ ಎಂದು ಹಾರೈಸೋಣ. 
 

Latest Videos

click me!