ಕಾಂತಾರ ನಟನ ಮನೆಯಲ್ಲಿ ಅದ್ಧೂರಿ ದೀಪಾವಳಿ; ಶೆಟ್ರು ಹೇರ್‌ಸ್ಟೈಲ್‌ ಮೇಲೆ ನೆಟ್ಟಿಗರ ಕಣ್ಣು!

First Published | Nov 2, 2024, 11:22 AM IST

ಅದ್ಧೂರಿಯಾಗಿ ದೀಪಾವಳಿ ಆಚರಿಸಿದ ಶೆಟ್ರು ಫ್ಯಾಮಿಲಿ. ಪೂಜೆಗೆ ಕುಳಿತಿರುವಾಗ ಕಂಡ ರಿಯಲ್ ಹೇರ್‌ಸ್ಟೈಲ್ ನೋಡಿ ನೆಟ್ಟಿಗರು ಶಾಕ್....

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್, ಆಕ್ಟರ್ ಹಾಗೂ ಪ್ರಡ್ಯೂಸರ್ ರಿಷಬ್ ಶೆಟ್ಟಿ ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಫ್ಯಾಮಿಲಿ ಜೊತೆ ಆಚರಿಸಿದ್ದಾರೆ. 

ರಿಕ್ಕಿ ಚಿತ್ರದ ಮೂಲಕ ಡೈರೆಕ್ಟ್ ಆಗಿದ ಜರ್ನಿ ಆರಂಭಿಸಿದ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರ ಅವರ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು.ಬಹುತೇಕ ಚಿತ್ರಗಳಿಗೆ ರಿಷಬ್ ಡೈರೆಕ್ಟರ್ ಹಾಗೂ ರೈಟರ್ ಆಗಿರುತ್ತಾರೆ.

Tap to resize

ಕಾಂತಾರ ಚಿತ್ರದ ಸೀಕ್ವೆಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಫ್ಯಾಮಿಲಿ ಜೊತ ಮನೆಯಲ್ಲಿ ಪೂಜೆ ಹಮ್ಮಿಕೊಂಡು ದೀಪಾವಳಿ ಆಚರಿಸಿದ್ದಾರೆ.

ಆರೆಂಜ್ ಆಂಡ್ ಪಿಂಕ್ ಕಾಂಬಿನೇಷನ್‌ ಸೀರೆಯಲ್ಲಿ ಪ್ರಗತಿ ಕಾಣಿಸಿಕೊಂಡಿದ್ದಾರೆ, ಹಳದಿ ಜುಬ್ಬ ಮತ್ತು ಪಂಚೆಯಲ್ಲಿ ರಿಷಬ್ ಶೆಟ್ಟಿ ಮಿಂಚಿದ್ದಾರೆ. 

ದೀಪಾವಳಿ ಆಚರಣೆಯ ಪ್ಯಾಮಿಲಿ ಫೋಟೋವನ್ನು ಪ್ರಗತಿ ಶೆಟ್ಟಿ ಅಪ್ಲೋಡ್ ಮಾಡಿದ್ದು, ದೀಪದ ಹೊಳಪು ನಿಮ್ಮ ಜೀವನಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ!ದೀಪಾವಳಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಕುಟುಂಬ ಸಮೇತರಾಗಿ ಕುಳಿತು ಪೂಜೆ ಮಾಡಿಸುತ್ತಿರುವಾಗ ರಿಷಬ್ ಶೆಟ್ಟಿ ನಿಜವಾದ ಹೇರ್ ಸ್ಟೈಲ್ ನೋಡಬಹುದು. ಈ ಲುಕ್‌ನ ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ. 

Latest Videos

click me!