ಫ್ಯಾಮಿಲಿ ಜೊತೆ ರಾಕಿಂಗ್ ಸ್ಟಾರ್ ಯಶ್ ಸಂಭ್ರಮದ ದೀಪಾವಳಿ… ಯಶ್-ರಾಧಿಕಾ ಸೆಲ್ಫಿ ನೋಡಿ ಫ್ಯಾನ್ಸ್ ಖುಷ್

Published : Nov 02, 2024, 11:12 AM ISTUpdated : Nov 02, 2024, 02:39 PM IST

ಟಾಕ್ಸಿಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ದೀಪಾವಳಿ ಸೆಲೆಬ್ರೇಟ್ ಮಾಡಿದ್ದಾರೆ.   

PREV
17
ಫ್ಯಾಮಿಲಿ ಜೊತೆ ರಾಕಿಂಗ್ ಸ್ಟಾರ್ ಯಶ್ ಸಂಭ್ರಮದ ದೀಪಾವಳಿ… ಯಶ್-ರಾಧಿಕಾ ಸೆಲ್ಫಿ ನೋಡಿ ಫ್ಯಾನ್ಸ್ ಖುಷ್

ರಾಕಿಂಗ್ ಸ್ಟಾರ್ ಯಶ್ (Rocking Star Yash) ತಮ್ಮ ಟಾಕ್ಸಿಕ್ ಸಿನಿಮಾದಿಂದ ಸದ್ಯ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗೂ ತಮ್ಮ ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಗನ ಬರ್ತ್ ಡೇ ಸಮಾರಂಭದಲ್ಲಿ ಯಶ್ ಫ್ಯಾಮಿಲಿ ಜೊತೆ ಸಮಯ ಕಳೆದಿದ್ದರು. 

27

ಯಶ್ ಹಾಗೂ ರಾಧಿಕಾ (Radhika Pandit) ಟಗರು ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಯಶ್ ತಮ್ಮ ಕುಟುಂಬಕ್ಕೆ ಎಷ್ಟೊಂದು ಇಂಪಾರ್ಟನ್ಸ್ ಕೊಡುವುದು ಮುಖ್ಯ ಅನ್ನೋದನ್ನು ಯಶ್ ತೋರಿಸಿದ್ದರು. 
 

37

ಇದೀಗ ಮತ್ತೆ ಯಶ್ ತಮ್ಮ ಫ್ಯಾಮಿಲಿ ಜೊತೆ ದೀಪಾವಳಿ ಹಬ್ಬವನ್ನು (Deepavali Celebration)ಸಂಭ್ರಮದಿಂದ ಆಚರಿಸುತ್ತಿರುವ ಫೋಟೊ ವೈರಲ್ ಆಗುತ್ತಿದೆ. ಯಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಮತ್ತು ಮಕ್ಕಳ ಜೊತೆ ದೀಪ ಹಚ್ಚಿ ,ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 
 

47

ಸಾಂಪ್ರದಾಯಿಕ ಧಿರಿಸು ಧರಿಸಿರುವ ಯಶ್, ಪತ್ನಿ ರಾಧಿಕಾ ಹಾಗೂ ಮಗ ಯಥರ್ವ್ ಹಾಗೂ ಮಗಳು ಐರಾ ಜೊತೆ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಯಶ್ ಬಿಳಿ ಬಣ್ಣದ ಕುರ್ತಾ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮಗ ಯಥರ್ವ್ ಕೂಡ ಬಿಳಿ ಬಣ್ಣದ ಕುರ್ತಾ ಪಜಾಮ ಧರಿಸಿದ್ದಾನೆ. 
 

57

ಇನ್ನು ರಾಧಿಕಾ ಪಂಡಿತ್ ಪಿಂಕ್ ಬಣ್ಣದ ಸುಂದರವಾದ ಕುರ್ತಾ ಪ್ಯಾಂಟ್ ಧರಿಸಿದ್ದು, ಐರಾ ಪಿಂಕ್ ಬಣ್ಣದ ಮುದ್ದಾದ ಫ್ರಾಕ್ ಧರಿಸಿದ್ದಾರೆ. ಯಶ್ ರಾಧಿಕಾ ಜೊತೆಯಾಗಿ ಸೆಲ್ಪಿ ಕೂಡ ತೆಗೆದುಕೊಂಡಿದ್ದು, ಇಬ್ಬರ ಫೋಟೊ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ತುಂಬಾ ಸಮಯದ ನಂತರ ಜೋಡಿಯ ಸೆಲ್ಫಿ ನೋಡಿ ಸಂಭ್ರಮಿಸಿದ್ದಾರೆ. 
 

67

ಯಶ್ ಫೋಟೋಗಳನ್ನು ಪೋಸ್ಟ್ ಮಾಡಿ ಅದರ ಜೊತೆಗೆ ಈ ದೀಪಾವಳಿಯನ್ನು ಪ್ರೀತಿ, ಬೆಳಕು ಮತ್ತು ಜೊತೆಯಾಗಿ ಆಚರಿಸೋಣ. ನಮ್ಮ ಕುಟುಂಬದಿಂದ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. 
 

77

ಅಭಿಮಾನಿಗಳು ಕಾಮೆಂಟ್ ಮಾಡಿ ಯಶ್ ಅವರಿಗೆ ಟಾಕ್ಸಿಕ್ ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದೇವೆ, ಆದಷ್ಟು ಬೇಗ ಅಪ್ ಡೇಟ್ಸ್ ಬರಲಿ ಎಂದು ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಲುಕ್ ತುಂಬಾನೆ ಚೆನ್ನಾಗಿದೆ, ರಾವಣನ ದೀಪಾವಳಿ ಸೆಲೆಬ್ರೇಶನ್ ಸಖತ್ತಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories