ಯೆಲ್ಲೋ​ ಡ್ರೆಸ್​ನಲ್ಲಿ ಕಾಂತಾರ ಬ್ಯೂಟಿಯ ಸ್ಟೈಲಿಶ್​ ಲುಕ್​: ಲೀಲಾ ಮೂಗೂತಿ ಎಲ್ಲಿ ಎಂದ ಫ್ಯಾನ್ಸ್‌!

First Published Nov 25, 2023, 3:00 AM IST

ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಲೀಲಾಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಇದೀಗ ನಟಿ ಯೆಲ್ಲೋ ಡ್ರೆಸ್‌ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಪ್ತಮಿ ಗೌಡ ಈ ಚೆಲುವೆಯ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. 'ಕಾಂತಾರ' ಹೆಸರೊಂದೇ ಸಾಕು. ಲೀಲಾ ಪಾತ್ರಧಾರಿಯಾಗಿ ಮಿಂಚಿ, ಕನ್ನಡಿಗರ ಮನೆ ಮಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಿನಿಮಾದ ನಂತರ ಕೈ ತುಂಬಾ ಆಫರ್​ ಗಿಟ್ಟಿಸಿಕೊಂಡಿರುವ ಬೆಡಗಿಗೆ ಫೋಟೋಶೂಟ್​ನಲ್ಲೂ ಸಖತ್​ ಕ್ರೇಜ್​ ಇದೆ. 

ಸ್ಟೈಲಿಶ್​ ಲುಕ್​ನಲ್ಲಿ ಕ್ಯಾಮರಾ ಮುಂದೆ ನಿಂತು ಮೈ ಬಳುಕಿಸೋದು ಅಂದ್ರೆ ಎಲ್ಲಿಲ್ಲದ ಖುಷಿ. ಇವರ ಇನ್​ಸ್ಟಾ ಓಪನ್​ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು. ತಮ್ಮ ಅಮೋಘ ಫ್ಯಾಷನ್​ ಸೆನ್ಸ್​ ಅನ್ನು ಫೋಟೋಶೂಟ್​ ಮೂಲಕವೇ ರಿವೀಲ್​ ಮಾಡುತ್ತಾರೆ. 

Latest Videos


ಇದೀಗ ಯೆಲ್ಲೋ ಡ್ರೆಸ್‌ನಲ್ಲಿ ಕಾಂತಾರ ಲೀಲಾ ಫೋಟೋಗೆ ಚೆಂದದ ಪೋಸ್ ಕೊಟ್ಟಿದ್ದಾರೆ. ಸದ್ಯ ಕಾಂತಾರ ಲೀಲಾ ಕಂಡು ಅಭಿಮಾನಿಗಳು ಸಖತ್ ಫಿದಾ ಆಗಿದ್ದಾರೆ. ನಟಿಯ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.

ಕಾಂತಾರ ಬೆಡಗಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಸಪ್ತಮಿ ಗೌಡ ಫೋಟೋಸ್‌ ಹಂಚಿಕೊಂಡಿದ್ದಾರೆ. ನಟಿಯ ಫೋಟೋ ನೋಡಿದ ನೆಟ್ಟಿಗರು ಬ್ಯೂಟಿಫುಲ್, ಲವ್ಲಿ, ಕ್ಯೂಟ್, ಸೂಪರ್ ಹಾಗೂ ನಿಮ್ಮ ಮೂಗೂತಿ ಎಲ್ಲಿ ಸೇರಿದಂತೆ ತರೇಹವಾರಿ ಕಮೆಂಟ್ ಮಾಡ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್​ ಬ್ಯುಸಿ ಆಗಿದ್ದಾರೆ. ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದು, ಅಭಿಷೇಕ್ ಅಂಬರೀಶ್ ಜೊತೆಗೆ ಕಾಳಿ ಸಿನಿಮಾ ಕೂಡಾ ಮಾಡುತ್ತಿದ್ದಾರೆ.

ಕಾಂತಾರ ಸಿನಿಮಾ ಬಳಿಕ ನೇರವಾಗಿ ಬಾಲಿವುಡ್‌ಗೆ ಜಿಗಿದ ಸಪ್ತಮಿ 'ದಿ ವ್ಯಾಕ್ಸಿನ್‌ ವಾರ್‌' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ನ ಯುವ ಸಿನಿಮಾದಲ್ಲಿಯೂ ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿದ್ದಾರೆ ಈ ನಟಿ. 

ಸಪ್ತಮಿ ಗೌಡ ಹೊಸ ರೀತಿಯ ಸಿನಿಮಾ ಒಪ್ಪಿಕೊಳ್ತಾನೇ ಇರ್ತಾರೆ. ಅದೇ ರೀತಿ ಪಾಪ್‌ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ ಖಡಕ್ ಪಾತ್ರವನ್ನೆ ಮಾಡಿದ್ರು. ಆದರೆ ಅದು ಹೆಚ್ಚಿನ ಜನಕ್ಕೆ ರೀಚ್ ಆಗಲೇ ಇಲ್ಲ ಅನಿಸುತ್ತದೆ.

click me!