ಖ್ಯಾತ ನಾಯಕ ನಟನ ಜೊತೆ ತಬಲಾ ನಾಣಿ ಪುತ್ರಿ ಅದ್ಧೂರಿ ನಿಶ್ಚಿತಾರ್ಥ; ಫೋಟೋ ವೈರಲ್

First Published | Nov 24, 2023, 10:34 AM IST

ನಿಶ್ಚಿತಾರ್ಥದಲ್ಲಿ ನೆಚ್ಚಿನ ಶ್ವಾನವೂ ಮ್ಯಾಚಿಂಗ್ ಔಟ್‌ಫಿಟ್‌. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಚಿತ್ರಾ.

ರಂಗಭೂಮಿ ಕಲಾವಿದ, ಹಾಸ್ಯ ನಟ ತಬಲಾ ನಾಣಿ ಅವರ ಮುದ್ದಿನ ಪುತ್ರಿ ಚೈತ್ರಾ ಅದ್ಧೂರಿ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಚೈತ್ರಾ ಎಂಗೇಜ್ಡ್‌ ಎಂದು ಫೋಟೋ ಹಾಕಿಕೊಂಡು. 16.11.2023 ಎಂದು ದಿನಾಂಕಾ ಬರೆದುಕೊಂಡಿದ್ದಾರೆ.

Tap to resize

ರಾಮ್ ಚೇತನ್‌ ಎಂಬುವವರ ಜೊತೆ ಚಿತ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ಅದ್ಧೂರಿಯಾಗಿ ಈ ಕಾರ್ಯಕ್ರಮ ನಡೆದಿದೆ. 

ರಾಮ್ ಚೇತನ್ ವೀಲ್ ಚೇರ್ ರೋಮಿಯೋ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಆಸಕ್ತಿ ಇರುವ ವ್ಯಕ್ತಿ.

ಹಳದಿ ಮತ್ತು ಹಸಿರು ಕಾಂಬಿನೇಷನ್‌ ಸೀರೆಯಲ್ಲಿ ಚಿತ್ರಾ ಕಾಣಿಸಿಕೊಂಡರೆ, ನೀಲಿ ಬಣ್ಣದ ಸೂಟ್‌ನಲ್ಲಿ ರಾಮ್ ಚೇತನ್ ಮಿಂಚಿದ್ದಾರೆ. ನಿಶ್ಚಿತಾರ್ಥಕ್ಕೆ ಎರಡು ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ.

 ಮತ್ತೊಂದು ವಿಶೇಷ ಏನೆಂದರೆ ನಿಶ್ಚಿತಾರ್ಥದಲ್ಲಿ ಚೈತ್ರಾ ತಮ್ಮ ನೆಚ್ಚಿನ ಶ್ವಾನಕ್ಕೂ ಕಾಲರ್‌ ಹಾಕಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ನಾಣಿ ಪುತ್ರಿ ಕೂಡ ಗಾಯಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್‌. ಆಗಾಗ ತಾನು ಹಾಡಿರುವ ಹಾಡುಗಳನ್ನು ಅಪ್ಲೋಡ್ ಮಾಡಿ ಜನಪ್ರಿಯತೆ ಗಳಿಸಿದ್ದಾರೆ.

Latest Videos

click me!