ಯಾರ ಸಿಂಪತಿನೂ ಬೇಡ, ಜೋಪಡಿಯಲ್ಲಿ ಜೀವನ ಮಾಡೋಕೆ ರೆಡಿ: ಮಾನ್ವಿತಾ ಕಾಮತ್ ಭಾವುಕ

First Published | Nov 24, 2023, 2:06 PM IST

ತಾಯಿ ನೆನೆದು ಭಾವುಕರಾದ ನಟಿ ಮಾನ್ವಿತಾ. ಯಾರಿಗೋಸ್ಕರ ಬದುಕಬೇಕು ಅನ್ನೋ ಯೋಚನೆ ಬಂದಿತ್ತು ಎಂದ ನಟಿ....
 

ಕನ್ನಡ ಚಿತ್ರರಂಗದ ಟಗರು ಪುಟಿ ಮಾನ್ವಿತಾ ಹರೀಶ್ ಕಾಮತ್ ಕೆಲವು ತಿಂಗಳುಗಳ ಹಿಂದೆ ತಾಯಿಯನ್ನು ಕಳೆದುಕೊಂಡಿರು. ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾಯಿ ನೆನೆದು ಭಾವುಕರಾಗಿದ್ದಾರೆ.

'ನನ್ನ ತಾಯಿ ಡಿಸೆಂಬರ್- ಜನವರಿ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾದವರು ತಿಂಗಳಿಗೆ ಸುಮಾರು 15 ದಿನ ಆಸ್ಪತ್ರೆಯಲ್ಲಿ ಇರುತ್ತಿದ್ದರು. ಹೀಗೆ ಏಪ್ರಿಲ್ಸ್‌ವರೆಗೂ ಆಸ್ಪತ್ರೆ ಸುತ್ತಾಟ ನಡೆದಿದೆ.'

Tap to resize

 'ಬೆಳಗ್ಗೆ ಜಿಮ್‌ಗೆ ಹೋಗಿ ಅಲ್ಲಿಂದ ಆಸ್ಪತ್ರೆಗೆ ಬಂದು ಕಥೆ ಬರೆಯುತ್ತಿದ್ದೆ, ಐಸಿಯುನಲ್ಲಿದ್ದಾಗ ಉಳಿದುಕೊಳ್ಳಲು ರೂಮ್‌ ಇರುತ್ತಿರಲಿಲ್ಲ ಆಗ ಹೊರಗಡೆ ಕುಳಿತುಕೊಂಡು ಕಥೆ ಬರೆಯುತ್ತಿದ್ದೆ.'

'ಇಷ್ಟು ಚಿಕ್ಕ ವಯಸ್ಸಿಗೆ ನಾನು ಲೈಫ್‌ನ ಜಾಸ್ತಿನೇ ನೋಡಿ ಬಿಟ್ಟೆ. ಈಗ ಜೀವನದಲ್ಲಿ ಯಾವುದಕ್ಕೂ ಉತ್ಸಾಹ ಇಲ್ಲ. ಈಗ ಒಬ್ರು ಬಂದು ಒಂದು ಕೋಟಿ ಕೊಡ್ತೀನಿ ಅಂದ್ರು ನನಗೆ ಖುಷಿ ಇಲ್ಲ'

 'ತಾಯಿಯನ್ನು ಕಳೆದುಕೊಂಡ ಮೇಲೆ ಜೀವನದಲ್ಲಿ ಕಳೆದುಕೊಳ್ಳಲು ಏನೂ ಇಲ್ಲ. ಅವರಿಗಿಂತ ಅತಿ ಹೆಚ್ಚು ಮೌಲ್ಯವಾದದ್ದು ಏನೂ ಇಲ್ಲ. ಎಲ್ಲಾ ಕಳೆದುಕೊಂಡಿರುವ ಜೀವನದಲ್ಲಿ ಈಗ ಜೋಪಡಿಯಲ್ಲಿ ಜೀವನ ಮಾಡಬೇಕು ಅಂದ್ರೂ ತುಂಬಾ ಮರ್ಯಾದೆಯಿಂದ ಇರುತ್ತೀನಿ'

'ದೇವರ ಮೇಲೆ ನಂಬಿಕೆ ಇದೆ ಸಾಧನೆ ಮಾಡುತ್ತೀನಿ. ತಾಯಿನೇ ಆಕೆ ಶಕ್ತಿ ಆಗಿದ್ದರು ಈಗ ಆಕೆ ಏನ್ ಮಾಡ್ತಾಳೆ ನೋಡೋಣ ಎಂದು ತುಂಬಾ ಹತ್ತಿರದವರು ಮಾತನಾಡಿದ್ದಾರೆ'

 'ನನ್ನ ಜೀವನದಲ್ಲಿ ಹೀಗೆ ಆಗಿದೆ ಎಂದು ಎಲ್ಲರೂ ಕರುಣೆ ತೋರಿಸುತ್ತಾರೆ. ನನಗೆ ಯಾರ ಸಿಂಪತಿ ಮತ್ತು ಎಂಪತಿನೂ ಬೇಡ. ಗೌರವ ಕೊಡಿ ಸಾಕು. ಅಮ್ಮ ಇಲ್ಲ ಅನ್ನೋ ಕ್ಷಣ ನೆನಪು ಮಾಡಿಕೊಳ್ಳುವುದು ಕಷ್ಟ'

 'ಪ್ರತಿ ದಿನ ಮಲಗುವ ಮುನ್ನ ನಾನು ಯಾಕೆ ಬದುಕಿದ್ದೀನಿ ಜೀವನದ ಉದ್ದೇಶ ಏನೂ ಅನ್ನೋ ಯೋಚನೆ ಶುರುವಾಗುತ್ತದೆ. ನನ್ನ ಫ್ಯೂಚರ್ ಬಗ್ಗೆ ಕ್ಯೂರಿಯಾಸಿಟಿ ಇಲ್ಲ'
 

'ಅಮ್ಮ ಇಲ್ಲದೆ ಜೀವನ ಹೇಗಿರುತ್ತದೆ ಅನ್ನೋ ಯೋಚನೆಯಲ್ಲಿ ಇದ್ದೀನಿ. 24 ಗಂಟೆ ಅಮ್ಮ ನನ್ನ ಜೊತೆ ಇದ್ದವರು ಅವರಿಲ್ಲದೆ ಬದುಕುವುದು ಕಷ್ಟ. ತುಂಬಾ ಸ್ಟ್ರಾಂಗ್‌ ಆಗಿ ಕಮ್ ಬ್ಯಾಕ್ ಮಾಡುತ್ತೀನಿ. ಯಾವತ್ತೂ ಹಿಂತಿರುಗಿ ನೋಡುವುದಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಮಾನ್ವಿತಾ.

Latest Videos

click me!