'ಮೇಡಂ ದಯವಿಟ್ಟು ಮದುವೆಯಾಗಬೇಡಿ...': ಕಾಂತಾರ ಸುಂದರಿ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

Published : Dec 05, 2023, 03:06 AM IST

'ಸಪ್ತಮಿ ಗೌಡ..' ಈ ಚೆಲುವೆಯ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. 'ಕಾಂತಾರ' ಹೆಸರೊಂದೇ ಸಾಕು. ಲೀಲಾ ಪಾತ್ರಧಾರಿಯಾಗಿ ಮಿಂಚಿ, ಕನ್ನಡಿಗರ ಮನೆ ಮಗಳಾಗಿ ಸ್ಥಾನ ಪಡೆದುಕೊಂಡಿದ್ದು, ಇದೀಗ ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ.

PREV
18
'ಮೇಡಂ ದಯವಿಟ್ಟು ಮದುವೆಯಾಗಬೇಡಿ...': ಕಾಂತಾರ ಸುಂದರಿ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಲೀಲಾಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಇದೀಗ ನಟಿ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

28

ಕಾಂತಾರ ಬೆಡಗಿ ಸೀರೆಯಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದು. ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಸಪ್ತಮಿ ಗೌಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಚ್ಚಿನ ನಟಿಯ ಫೋಟೋ ನೋಡಿದ ನೆಟ್ಟಿಗರು ಸೋ ಬ್ಯೂಟಿಫುಲ್‌... ಸೋ ಎಲಿಗೆಂಟ್‌... ಜಸ್ಟ್‌ ವ್ಹಾವ್‌ ಎಂದು ತರೇಹವಾರಿ ಕಮೆಂಟ್ ಮಾಡ್ತಿದ್ದಾರೆ.

38

ಸಪ್ತಮಿ ಗೌಡ ಫೋಟೋಗಳನ್ನು ನೋಡಿದ ನೆಟ್ಟಿಗನೊಬ್ಬ ತನ್ನದೇ ಆದ ಸ್ಟೈಲ್‌ನಲ್ಲಿ, 'ಮೇಡಂ ದಯವಿಟ್ಟು ಮದುವೆಯಾಗಬೇಡಿ ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾನೆ.

48

ಕಾಂತಾರ 2 ಸಿನಿಮಾಗೂ ನೀವೇ ನಾಯಕ ನಟಿಯಾಗ್ಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸದ್ಯ ಸಪ್ತಮಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

58

ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್​ ಬ್ಯುಸಿ ಆಗಿದ್ದಾರೆ. ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದು, ಬಾಲಿವುಡ್‌ನ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸಿದ್ದರು.

68

ಸಪ್ತಮಿ ಗೌಡ ಅವರು ಕನ್ನಡದ ಯುವ ಸಿನಿಮಾದಲ್ಲೂ ಅವಕಾಶ ಪಡೆದಿದ್ದಾರೆ. ಈ ಚಿತ್ರವು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಕನ್ನಡ ನಟ ಯುವ ರಾಜ್‌ಕುಮಾರ್‌ ನಾಯಕ. 

78

ಈ ಸಿನಿಮಾದಲ್ಲಿ ಸಪ್ತಮಿ ಗೌಡ ಅವಕಾಶ ಪಡೆದದ್ದು ಕುತೂಹಲಕಾರಿಯಾಗಿತ್ತು. ವರದಿಗಳ ಪ್ರಕಾರ, ಸಪ್ತಮಿ ಗೌಡ ತನ್ನ ತಾಯಿ ಜತೆ ಕೆಸಿಸಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದರಂತೆ. ಆ ಸಮಯದಲ್ಲಿ ಹೊಂಬಾಳೆ ಫಿಲ್ಮ್ಸ್‌ ಕಡೆಯಿಂದ ಇವರಿಗೆ ಕರೆ ಬಂದಿತ್ತು. ಕಚೇರಿಗೆ ಬನ್ನಿ, ಮಾತನಾಡೋದು ಇದೆ ಎಂದು ಕರೆದಿದ್ದಾರೆ. 

88

ಇದಾದ ಬಳಿಕ ಸಪ್ತಮಿ ಗೌಡ ಭೇಟಿ ನೀಡಿದಾಗ ನಿಜಕ್ಕೂ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಇವರನ್ನು ನಟ ಯುವರಾಜ್‌ಕುಮಾರ್‌ ಪಕ್ಕ ನಿಲ್ಲಿಸಿ ಫೋಟೋ ತೆಗೆಸಿದ್ದಾರೆ. ನಂತರ 'ಯುವ' ಚಿತ್ರಕ್ಕೆ ನೀವೇ ಹೀರೋಯಿನ್ ಎಂದು ಸರ್ಪ್ರೈಸ್ ನೀಡಿದ್ದಾರೆ.

Read more Photos on
click me!

Recommended Stories