ಕಾಸ್ಟ್ಯೂಮ್ ಡಿಸೈನರ್‌ ಆಗಿ ಬದಲಾದ ರೇಖಾ ದಾಸ್ ಪುತ್ರಿ; ಫೋಟೋ ವೈರಲ್!

Published : Dec 04, 2023, 02:58 PM ISTUpdated : Dec 04, 2023, 02:59 PM IST

ಡಿಸೆಂಬರ್ 15ರಂದು ಮಾಯಾ ನಗರಿ ಸಿನಿಮಾ ರಿಲೀಸ್. ನಟನೆ ಜೊತೆ ವಸ್ತ್ರ ವಿನ್ಯಾಸ ಮಾಡಿದ ಶ್ರಾವ್ಯ....  

PREV
17
ಕಾಸ್ಟ್ಯೂಮ್ ಡಿಸೈನರ್‌ ಆಗಿ ಬದಲಾದ ರೇಖಾ ದಾಸ್ ಪುತ್ರಿ; ಫೋಟೋ ವೈರಲ್!

ಸಾತ್ವಿಕಾ ಎಂದು ಹೆಸರು ಬದಲಿಸಿಕೊಂಡಿರುವ ಶ್ರಾವ್ಯ ರಾವ್ ನಟಿಸಿರುವ ಹೊಸ ಸಿನಿಮಾ ‘ಮಾಯಾ ನಗರಿ’. ಡಿ.15ರಂದು ಬಿಡುಗಡೆಯಾಗುತ್ತಿದೆ.

27

ಈ ಸಿನಿಮಾದಲ್ಲಿ ಶ್ರಾವ್ಯ ನಾಯಕಿಯಾಗಿ ನಟಿಸುವ ಜೊತೆಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಜೊತೆಯೂ ಕೆಲಸ ಮಾಡಿದ್ದಾರೆ.

37

ಶ್ರಾವ್ಯಾ ಅವರಿಗೆ ಕಾಸ್ಟ್ಯೂಮ್ ಡಿಸೈನಿಂಗ್‌ನಲ್ಲಿ ಆಸಕ್ತಿ. ಅದಕ್ಕೆ ಪೂರಕವಾಗಿ ಅವರು ಶಂಕರ್‌ ಆರಾಧ್ಯ ನಿರ್ದೇಶನ, ನಿರ್ಮಾಣದ ‘ಮಾಯಾ ನಗರಿ’ ಚಿತ್ರದಲ್ಲಿ ಒಂದು ಹಾಡಿಗೆ ತಾವೇ ಆಸಕ್ತಿಯಿಂದ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

47

ಈ ಕುರಿತು ಮಾತನಾಡುವ ಶ್ರಾವ್ಯ, ‘ಚಿತ್ರದ ಲಚ್ಚಿ ಲಚ್ಚಿ ಹಾಡಿಗೆ ನಾನು ನಿರ್ದೇಶಕರ ಬಳಿ ಕೇಳಿ, ಪ್ರೀತಿಯಿಂದ ಮತ್ತು ಖುಷಿಯಿಂದ ಕಾಸ್ಟ್ಯೂಮ್‌ ಡಿಸೈನ್ ಮಾಡಿದ್ದೇನೆ’ ಎನ್ನುತ್ತಾರೆ. 

57

ಈ ಚಿತ್ರದ ಕುರಿತು ಅವರು, ‘ಚಿತ್ರದಲ್ಲಿ ಮಲ್ಲಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಟನೆಗೆ ಅವಕಾಶ ಇರುವ ವಿಭಿನ್ನ ಪಾತ್ರ. ನನ್ನ ಕರಿಯರ್‌ನಲ್ಲಿ ನನಗೆ ಸಿಕ್ಕಿದೆ ಅತ್ಯುತ್ತಮ ಪಾತ್ರ. 

67

ಈ ಪಾತ್ರದಿಂದ ನನಗೆ ಮತ್ತಷ್ಟು ಉತ್ತಮ ಅವಕಾಶಗಳು ಸಿಗಲಿದೆ ಎಂಬ ನಂಬಿಕೆ ಇದೆ. ಈ ಪಾತ್ರಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದೆ. ಸಾಹಸ ದೃಶ್ಯದಲ್ಲಿಯೂ ನಾನು ಪಾಲ್ಗೊಳ್ಳಬೇಕಾಗಿತ್ತು. ಕಾಲದ ಹಂಗನ್ನು ಮೀರಿ ನಿಂತಿರುವ ಕತೆಯುಳ್ಳ ಈ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ’ ಎನ್ನುತ್ತಾರೆ.

77

ಶಂಕರ್‌ ಆರಾಧ್ಯ ನಿರ್ದೇಶನದ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿದ್ದಾರೆ. ತೇಜು, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. 

Read more Photos on
click me!

Recommended Stories