ಬ್ಲ್ಯಾಕ್​ ಡ್ರೆಸ್​ನಲ್ಲಿ ಬೋಲ್ಡ್ ಆದ ಮೇಘಾ ಶೆಟ್ಟಿ: ನಿಮ್ಮನ್ನ ನೋಡಿದ್ರೆ ಬೇಲೂರ ಶಿಲಾಬಾಲಿಕೆಯು ನಾಚುತ್ತೆ ಎಂದ ಫ್ಯಾನ್ಸ್!

First Published Dec 5, 2023, 3:00 AM IST

ಜೊತೆ ಜೊತೆಯಲಿ ಸೀರಿಯಲ್‌ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಕಳೆದ ಒಂದು ವರ್ಷದ ಹಿಂದೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ, ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿಯ ಸ್ಟೈಲಿಶ್ ಫೋಟೋಸ್​ ವೈರಲ್ ಆಗಿದೆ. ​
 

ಮಂಗಳೂರ್ ಬ್ಯೂಟಿ ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಇದೀಗ ಬ್ಲ್ಯಾಕ್​ ಡ್ರೆಸ್​ ಫೋಟೋಶೂಟ್‌ನಲ್ಲಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.

ನಟಿಯ ಸ್ಟನ್ನಿಂಗ್​ ಲುಕ್​ಗೆ ಫ್ಯಾನ್ಸ್ ಕ್ಲಿನ್ ಬೋಲ್ಡ್​ ಆಗಿದ್ದಾರೆ. ಚಂದನವನದ ಮುದ್ದು ರಾಕ್ಷಸಿ, ಹಾಟ್, ಬೆಂಕಿ ಹಚ್ಚುವ ನೋಟ, ನಿಮ್ಮನ್ನ ನೋಡಿದ್ರೆ ಬೇಲೂರ ಶಿಲಾಬಾಲಿಕೆಯು ನಾಚುತ್ತೆ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಟಿಯ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ.

ಬಜಾರ್ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಧನ್ವೀರ್ ಅಭಿನಯದ ಕೈವ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಇದೇ‌ ಡಿಸೆಂಬರ್ 8ರಂದು ತೆರೆಕಾಣುತ್ತಿದ್ದು, ಈಕೆ ಸಲ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ.

ನಟಿ ಮೇಫಾ ಶೆಟ್ಟಿ ಅಭಿನಯದ ತ್ರಿಬಲ್‌ ರೈಡಿಂಗ್‌, ದಿಲ್‌ಪಸಂದ್‌ ಸಿನಿಮಾ ಈಗಾಗಲೇ ತೆರೆಕಂಡು, ಇದೀಗ ಗ್ರಾಮಾಯಣ, ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ ಸಿನಿಮಾ ಕೆಲಸಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

ದೊಡ್ಮನೆ ಹುಡುಗ ವಿನಯ್​ ರಾಜ್​ಕುಮಾರ್​ ಜೊತೆ ನಟಿಸುವ ಅವಕಾಶ ಮೇಘಾ ಶೆಟ್ಟಿಯ ಪಾಲಾಗಿದೆ. ಗ್ರಾಮಾಯಣ ಸಿನಿಮಾಗೆ ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್‌ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದಾರೆ.

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್​ ಆ್ಯಕ್ಟಿವ್​ ಆಗಿದ್ದಾರೆ.

ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ನೆಟ್ಟಿಗರು ಕೂಡ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ.

click me!