Published : Apr 04, 2025, 05:05 PM ISTUpdated : Apr 04, 2025, 05:08 PM IST
‘ಜಾಕಿ 42’ ಹೆಸರಿನ ಈ ಸಿನಿಮಾ ಸದ್ಯ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಕುದುರೆ ರೇಸ್‌ನ ಹೆಸರಿನಲ್ಲಿ ನಡೆಯುವ ರಾಜಕೀಯ, ಹಣದ ಮೇಲಾಟ, ಈ ಜಾಲದಲ್ಲಿ ಸಿಲುಕುವ ಸಾಮಾನ್ಯನೊಬ್ಬನ ಪಾಡನ್ನು ಸಿನಿಮಾ ಕಟ್ಟಿಕೊಡಲಿದೆ.
‘ಕನ್ನಡತಿ’ ಖ್ಯಾತಿಯ ನಟ ಕಿರಣ್ ರಾಜ್ ತನ್ನ ಹೊಸ ಸಿನಿಮಾ ಘೋಷಿಸಿದ್ದಾರೆ. ‘ಜಾಕಿ 42’ ಹೆಸರಿನ ಈ ಸಿನಿಮಾ ಸದ್ಯ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಕುದುರೆ ರೇಸ್‌ನ ಹೆಸರಿನಲ್ಲಿ ನಡೆಯುವ ರಾಜಕೀಯ, ಹಣದ ಮೇಲಾಟ, ಈ ಜಾಲದಲ್ಲಿ ಸಿಲುಕುವ ಸಾಮಾನ್ಯನೊಬ್ಬನ ಪಾಡನ್ನು ಸಿನಿಮಾ ಕಟ್ಟಿಕೊಡಲಿದೆ.
26
ಕಿರಣ್ ರಾಜ್ ರೇಸ್ ಜಾಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುರಾಜ್ ಶೆಟ್ಟಿ ನಿರ್ದೇಶಕರು. ಭಾರತಿ ಸತ್ಯನಾರಾಯಣ ನಿರ್ಮಾಪಕಿ. ಖ್ಯಾತ ಕಥೆಗಾರ ವಿಕಾಸ್ ನೇಗಿಲೋಣಿ, ಎ ಸತೀಶ್, ಬ್ಲಿಂಕ್ ನಿರ್ದೇಶಕ ಶ್ರೀನಿಧಿ ಬೆಂಗಳೂರು ಚಿತ್ರಕಥೆ ಬರೆಯುತ್ತಿದ್ದಾರೆ.
36
ವಿಶೇಷವೆಂದರೆ, ಈ ಸಿನಿಮಾಗೆ ಉತ್ತಮ ಬರಹಗಾರರ ತಂಡ ಜೊತೆಯಾಗಿರುವುದು. 'ಬ್ಲಿಂಕ್' ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಿರ್ದೇಶಕ ಶ್ರೀನಿಧಿ ಬೆಂಗಳೂರು 'ಜಾಕಿ 42' ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಜೊತೆಯಾಗಿದ್ದಾರೆ.
46
'ಕನ್ನಡತಿ' ಧಾರಾವಾಹಿಗೆ ಚಿತ್ರಕಥೆ ಬರೆದಿದ್ದ ವಿಕಾಸ್ ನೇಗಿಲೋಣಿ ಕೂಡ ಸ್ಕ್ರಿಪ್ಟ್ ಬರಹಗಾರರ ಟೀಮ್‌ನಲ್ಲಿದ್ದಾರೆ. ರಾಘವೇಂದ್ರ ಬಿ ಕೋಲಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಭಾರತಿ ನಾರಾಯಣ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
56
ಮೇ 15ರಂದು ‘ಜಾಕಿ 42’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಬೆಂಗಳೂರು, ಮೈಸೂರು ಹಾಗೂ ವಿದೇಶದಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ.
66
ಟೈಟಲ್ ಪೋಸ್ಟರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗಿದೆ. ಕಿರಣ್ ರಾಜ್ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಟ್ಟುಕೊಡಲಿದೆ.