ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ಟಿದ್ರೊಮ್ಮೆ ರಿಷಬ್!

Published : Apr 04, 2025, 04:52 PM ISTUpdated : Apr 04, 2025, 04:53 PM IST

ರಶ್ಮಿಕಾ ಮಂದಣ್ಣ. ಕನ್ನಡದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು, ತೆಲುಗಿನ ನಂತರ ಇದೀಗ ಬಾಲಿವುಡ್‌ನಲ್ಲಿ ಮೆರೆಯುತ್ತಿರುವ ನಟಿ. ಆದರೆ, ಕಾಂಟ್ರೋವರ್ಸಿ ಅನ್ನೋದು ಇವಳಿಗಿರುವ ಮತ್ತೊಂದು ಹೆಸರು. ಇವಳಿಗೊಮ್ಮೆ ರಿಷಭ್ ಶೆಟ್ಟಿ ಹೇಗೆ ಪಾಠ ಕಲಿಸಿದ್ರು ಗೊತ್ತಾ? 

PREV
19
ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ಟಿದ್ರೊಮ್ಮೆ ರಿಷಬ್!

 ಬೆಂಗಳೂರಿನಲ್ಲಿ ಓದುತ್ತಿದ್ದ ಸಾಧಾರಣ ಹುಡುಗಿಯನ್ನು ಕರೆದು ಅವಕಾಶ ಕೊಟ್ಟು, ಅವಳಲ್ಲಿ ಹುದುಗಿದ್ದ ಟ್ಯಾಲೆಂಟ್ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದ ಸಿನಿಮಾ ರಿಷಬ್ ನಿರ್ದೇಶನ, ರಕ್ಷಿತ್ ಹೀರೋ ಆಗಿದ್ದ 'ಕಿರಿಕ್ ಪಾರ್ಟಿ'. ಈ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಎಂಬ ಕೊಡಗಿನ ಸುಂದರಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಕರುನಾಡ ಕ್ರಶ್ ಆಗಿ ಬಿಟ್ಟರು. ಕಿರಿಕ್ ಪಾರ್ಟಿಯಲ್ಲಿನ ಈ ಕರುನಾಡ ಕ್ರಶ್ ಸ್ಟೈಲ್, ಸ್ಮೈಲು ಎಲ್ಲವನ್ನೂ ಜನ ಮನಸಾರೆ ಮೆಚ್ಚಿಕೊಂಡಿದ್ದರು. ಈ ಸಿನಿಮಾದ ಕೀರ್ತಿ ನಂತರ ಸಾಲು ಸಾಲು ಸಿನಿಮಾಗಳು ರಶ್ಮಿಕಾರಿಗೆ ಸಿಕ್ಕವು. 

29

 ಬೇರೆ ಭಾಷೆಗಳಿಂದಲೂ ಆಫರ್ಸ್ ಬಂದವು ಇದು ಇವರ ಲಕ್. ತೆಲುಗಿನಲ್ಲಿ ವಿಜಯ ದೇವರಕೊಂಡ ಜೊತೆಗಿನ 'ಗೀತ ಗೋವಿಂದಂ'ನಲ್ಲಿ ಕಿಸ್ಸಿಂಗ್ ಸೀನ್‌ನಿಂದಲೇ  ಹಿಟ್ ಆಗಿದ್ದೇ ತಡ ಈಕೆ ಸೌತ್ ಇಂಡಿಯನ್ ಕ್ರಶ್ ಆಗಿ ಬದಲಾದರು. ನಂತರ ಬಾಲಿವುಡ್‌ ಸಿನಿಮಾಗಳಲ್ಲೂ ಆಫರ್ಸ್ ಬರಲು ಶುರುವಾಯಿತು. ಇಷ್ಟರೊಳಗೆ ಕಿರಿಕ್ ಪಾರ್ಟಿ ಹೀರೋ ಕಂ ಪ್ರೊಡ್ಯೂಸರ್ ರಕ್ಷಿತ್ ಶೆಟ್ಟಿ ಜೊತೆ ಪ್ರೇಮವೂ ಸಹ ಮೊಳೆತಿತ್ತು. ರಿಂಗ್ ಸಹ ಬದಲಾಯಿಸಿಕೊಂಡಿದ್ದರು. ಅದರೆ, ಬ್ರೇಕ್ ಅಪ್ ಆಗಿದ್ದು ಎಲ್ಲಿರಿಗೂ ಗೊತ್ತು ಬಿಡಿ.

ಮುಂದೂಡಿದ್ರಾ ರಿಷಬ್ ಶೆಟ್ಟಿ ಕಾಂತಾರಾ 1 ಬಿಡುಗಡೆ ? ಚಿತ್ರತಂಡದಿಂದ ಮಹತ್ವದ ಅಪ್‌ಡೇಟ್

39

 ಬಿಟ್ಹಾಕಿ. ಇವೆಲ್ಲವೂ ಹಳೇ ಕಥೆ.  ಅವರ ಖಾಸಗಿ ವಿಚಾರದಲ್ಯಾಕೆ ನಾವು ಇಣಕೋದು? ಆದರೂ, ಏನೇ ಅನ್ನಿ, ಎಷ್ಟೇ ಕಹಿ ಮನಸ್ಸಲ್ಲಿದ್ದರೂ ತಮ್ಮ ಮೊದಲ ಸಿನಿಮಾದ ಬಗ್ಗೆ ಎಲ್ಲರೂ ಕೃತಜ್ಞರಾಗಿರುತ್ತಾರೆ. ರಶ್ಮಿಕಾ ಮಾತ್ರ ಒಮ್ಮೆ 'ಕರ್ಲಿ ಟೇಲ್ಸ್' ಯೂಟ್ಯೂಬ್ ಚಾನೆಲ್‌ಗೆ (YouTube Channel) ನೀಡಿದ ಸಂದರ್ಶನದಲ್ಲಿ ತನ್ನ ಮೊದಲ ಸಿನಿಮಾದ ಹೆಸರು ಹೇಳಲೂ ಇಷ್ಟ ಪಡಲಿಲ್ಲ.

ಈ ಕನ್ನಡದ ಬಿಗ್ ಸ್ಟಾರ್ಸ್‌ 'ಹೀರೋ' ಆಗಿ ಎಂಟ್ರಿ ಕೊಟ್ಟಿದ್ದು ಎಷ್ಟನೇ ವಯಸ್ಸಿಗೆ ಗೊತ್ತಾ? ನೋಡಿ..

49

ಕೋಟ್ ಸನ್ನೆ ಮಾಡಿ, ಸಿನಿಮಾ ಹೆಸರು ಹೇಳದೇ ವ್ಯಂಗ್ಯವಾಡಿದರು. ಕಾಲೇಜಿನಲ್ಲಿ ಓದುತ್ತಿರುವಾಗಲೇ 'ಕಿರಿಕ್ ಪಾರ್ಟಿ' ತಂಡ ನನ್ನ ಹಿಂದೆ ದುಂಬಾಲು ಬಿದ್ದು, ನಟಿಸುವಂತೆ ಕೇಳಿಕೊಂಡಿದ್ದರೆಂದು ಹೇಳಿ ಕೊಂಡಿದ್ದರು. ಈ ಸಂದರ್ಶನಕ್ಕೆ  ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾದಾಗ ತಮ್ಮ ಮಾತನ್ನು ತಿರುಚಲಾಗಿದೆ ಎಂದು ಫೀಲಿಂಗ್‌ನಲ್ಲಿ ಲೆಟರ್ ಬರೆದು ಸೋಷಿಯಲ್ ಮೀಡಿಯಾದಲ್ಲಿ (Social Media) ರಶ್ಮಿಕಾ ಪ್ರಕಟಿಸಿ, ತಮ್ಮನ್ನು ತಾವು ಸಮರ್ಥಿಸಿಕೊಂಡರು. 

59

 ಇದಾದ ಕೆಲವು ದಿನಗಳಲ್ಲೇ ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ' ಭಾರತೀಯ ಸಿನಿ ಇತಿಹಾಸದಲ್ಲಿಯೇ ಕಂಡು ಕೇಳರಿಯದಷ್ಟು ಹೆಸರು ಮಾಡಿತು. ಬಾಲಿವುಡ್, ಸೌತ್‌ ಇಂಡಿಯನ್‌ ಇಂಡಸ್ಟ್ರಿಯವರೆಲ್ಲ (South Cine Industry) ಸಿನಿಮಾವನ್ನು ಹಾಡಿ ಹೊಗಳಿದರು. ಆದರೆ ತಮಗೆ ಮೊದಲನೇ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ದೇಶಕನ ಸಿನಿಮಾದ ಬಗ್ಗೆ ರಶ್ಮಿಕಾ ಕಮಕ್ ಕಿಮಕ್ ಹೇಳಲಿಲ್ಲ ಎನ್ನೋದು ಕನ್ನಡಿಗರ ನೋವು. ಈ ಬಗ್ಗೆ ಕೇಳಿದಾಗ ರಿಷಬ್‌, ತುಂಬಾ ಸಹಜವಾಗಿಯೇ ಉತ್ತರಿಸಿದರು. ಅಪ್ಪಿತಪ್ಪಿ ರಶ್ಮಿಕಾ ಎಂಬ ನಟಿಯ ಬಗ್ಗೆ ಒಂದೇ ಒಂದು ನೆಗಟಿವ್ ಕಮೆಂಟ್ ಮಾಡಲಿಲ್ಲ.

ಕಾಂತಾರ ಚಾಪ್ಟರ್-1 ಚಿತ್ರೀಕರಣದ ಎಕ್ಸ್​​ಕ್ಲೂಸಿವ್ ಕಹಾನಿ; ಪ್ರೀಕ್ಚೆಲ್​​ ರಿಲೀಸ್​​ ಗುಟ್ಟು ರಟ್ಟು ಮಾಡಿದ ರಿಷಬ್!

69

ಆದರೆ ರಶ್ಮಿಕಾ ಯಾವಾಗ ಕಿರಿಕ್ ಪಾರ್ಟಿ ಬಗ್ಗೆ ಕೇವಲವಾಗಿ ಮಾತನಾಡಿದರೂ, ರಿಷಬ್‌ ಸಹ ಆಕೆಯ ಸ್ಟೈಲಲ್ಲೇ (Style) ಆಕೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದರು. ಗುಲ್ಟಿ ಡಾಟ್ ಕಾಮ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಹೆಸರು ಹೇಳದೇ ಆಕೆಯ ಸ್ಟೈಲಲ್ಲೇ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದರು. 
 

79

 ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ ನಾಲ್ವರಲ್ಲಿ ಯಾರಿಷ್ಟ? ಯಾರೊಟ್ಟಿಗೆ ನಟಿಸಲು ಆಸಕ್ತಿ ಇದೆ ಎಂದು ಕೇಳಿದ್ದಕ್ಕೆ, 'ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೀನಿ. ನೀವು ಹೇಳಿದ ಹೆಸರಲ್ಲಿ ಈ ತರಹದ (ರಶ್ಮಿಕಾ ರೀತಿಯೆ ಕೋಟ್ ಸನ್ನೆ ಮಾಡಿ ತೋರಿಸಿ) ನಟಿಯರು ನನಗೆ ಇಷ್ಟ ಇಲ್ಲ' ಅಂತ ರಿಷಬ್ ಹೇಳಿದ್ದರು.

89

 ಅಷ್ಟೇ ಅಲ್ಲ, 'ಸಮಂತಾ ಹಾಗೂ ಸಾಯಿ ಪಲ್ಲವಿ ಅಭಿನಯ ಬಹಳ ಇಷ್ಟವೆಂದೂ ರಿಷಭ್ ಶೆಟ್ಟಿ ಹೇಳಿದ್ದರು. ಸಮಂತಾಗೆ ಹುಷಾರಿಲ್ಲವೆಂದು ತಿಳಿದಾಗ ಹೇಗೆ ಫೀಲ್ ಆಯಿತೆಂದು ಕೇಳಿದ್ದಕ್ಕೆ, 'ಬಹಳ ಬೇಸರವಾಯಿತೆಂದೂ ಹೇಳಿದ್ದಲ್ಲದೇ ಬೇಗ ಹುಷಾರಾಗಲೆಂದು ಶುಭ ಹಾರೈಸಿದ್ದರು. 

99

 ಒಟ್ಟಾರೆ ರಿಷಭ್ ಸ್ಟೈಲಿಗೆ ಸೋಷಿಯಲ್ ಮೀಡಿಯಾ ಫುಲ್ ಫಿದಾ ಆಗಿ, ಆ ವೀಡಿಯೋ ತುಣುಕು ಹರಿದಾಡಿದ್ದೇ ಹರಿದಾಡಿದ್ದು. ಬಹಳಷ್ಟು ದಿನಗಳು ಟ್ರೋಲ್ ಪೇಜುಗಳಿಗೆ ಒಳ್ಳೇಯ ಆಹಾರ ಸಿಕ್ಕಂತಾಗಿತ್ತು.

Read more Photos on
click me!

Recommended Stories