ಇಂದು ಡಾ ರಾಜ್‌ಕುಮಾರ್‌ ಅವರ 94ನೇ ಜನ್ಮದಿನ!

Published : Apr 24, 2023, 09:00 AM IST

ವರನಟ,  ನಟ ಸಾರ್ವಭೌಮ ರಾಜ್‌ಕುಮಾರ್ ಅವರ 94ನೇ ಜನ್ಮ ದಿನ ಆಚರಣೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಅಭಿಮಾನಿಗಳು ತೀರ್ಮಾನಿಸಿದ್ದಾರೆ. 

PREV
16
ಇಂದು ಡಾ ರಾಜ್‌ಕುಮಾರ್‌ ಅವರ 94ನೇ ಜನ್ಮದಿನ!

ಕನ್ನಡ ಚಿತ್ರರಂಗದ ಬಂಗಾರದ ಮನುಷ್ಯ, ನಟ ಸಾರ್ವಭೌಮ ಡಾ ರಾಜ್‌ಕುಮಾರ್‌ ಅವರು ಜನ್ಮ ದಿನದ ಸಂಭ್ರಮ ಆಗಮಿಸಿದೆ. ಇಂದು (ಏಪ್ರಿಲ್‌ 24) ರಾಜ್‌ ಅವರ 94ನೇ ಹುಟ್ಟು ಹಬ್ಬ.

26

ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು, ಸಿನಿಮಾ ಪ್ರೇಮಿಗಳು ಡಾ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸುವ ತಯಾರಿ ಮಾಡಿಕೊಂಡಿದ್ದಾರೆ. 
 

36

ಉಚಿತ ಆರೋಗ್ಯ ಶಿಬಿರ, ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳಿಂದ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಾರಥ್ಯದಲ್ಲಿ ನಡೆಯಲಿವೆ.

46

ಇನ್ನೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್‌ಕುಮಾರ್‌ ಸ್ಮಾರಕದ ಬಳಿಗೆ ರಾಜ್‌ ಅವರ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ ಸಲ್ಲಿಸಲಿದ್ದಾರೆ. 

56

 ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ವರನಟ ಡಾ ರಾಜ್‌ಕುಮಾರ್‌ ಅವರ ಸ್ಮಾರಕ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲಿದ್ದಾರೆ. 

66

ಇನ್ನೂ ಎಂದಿನಂತೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್‌ಕುಮಾರ್‌ ಸ್ಮಾರಕವನ್ನು ಹೂವುಗಳಿಂದ ಅಲಂಕರಿಸಲಿದ್ದಾರೆ.ಇಂದು ಹೆಚ್ಚಿನ ಜನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲಿದ್ದಾರೆ.

Read more Photos on
click me!

Recommended Stories