Mr & Mrs ರಾಮಾಚಾರಿ ಚಿತ್ರದ ಕಸ್ತೂರಿ- ಸುವರ್ಣ ನೆನಪಿದ್ಯಾ? ಈಗ ಹೇಗಿದ್ದಾರೆ ನೋಡಿ..

First Published | Apr 21, 2023, 1:47 PM IST

ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿದ್ದಾರೆ ಕನ್ನಡ ಚಿತ್ರರಂಗದ ಅವಳಿ ಸಹೋದರಿಯರು. ವೈರಲ್ ಅಯ್ತು ಟ್ವಿನ್‌ ಫೋಟೋಗಳು....

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿರುವ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿಅವಳಿ ಸಹೋದರಿಯರು ಅಭಿನಯಿಸಿದ್ದಾರೆ. 

ಕಸ್ತೂರಿ ಸುವರ್ಣ ಎಂದು ಕನ್ನಡ ಚಿತ್ರರಂಗದಕ್ಕೆ ಪರಿಚಯವಾದ ಈ ಸುಂದರಿಯರು ಈಗ ಸೋಷಿಯಲ್ ಮೀಡಿಯಾ ಸ್ಟಾರ್ಸ್‌ ಆಗಿ ಮಿಂಚುತ್ತಿದ್ದಾರೆ. 

Tap to resize

ಅಧಿವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಇವರಿಬ್ಬರ ಹೆಸರು. ಚಿಕ್ಕ ವಯಸ್ಸಿನಲ್ಲಿ ಒಂದೇ ತರಹ ಡ್ರೆಸ್ ಹಾಕುವುದು ಸಾಮಾನ್ಯ ಆದರೆ ಇವ್ರು ಈಗಲೂ ಆ ಸ್ಟೈಲ್‌ನ ಫಾಲೋ ಮಾಡುತ್ತಾರೆ. 

ರಾಮಾಚಾರಿ ಹಿಟ್ ಆದ ಮೇಲೆ ಇಬ್ಬರೂ ತುಂಬಾ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಅನೇಕ ಜಾಹೀರಾತು ಹಾಗೂ ಫೋಟೋ ಶೂಟ್‌ಗಳಲ್ಲಿ ಭಾಗಿಯಾಗಿದ್ದಾರೆ. 

ಕನ್ನಡಿಗಳ ಜೊತೆಗಿರುವೆ. ನಮ್ಮ ಸಿನಿಮಾದಲ್ಲಿರುವ ಮುದ್ದಾ ಕಸ್ತೂರಿ ಮತ್ತು ಸುವರ್ಣ. ಪ್ರಪಂಚದಲ್ಲಿ ಒಬ್ಬರನ್ನು 7 ಜನ ಇರ್ತಾರೆ ಹೌದಾ? ಎಂದು ರಾಧಿಕಾ ಪಂಡಿತ್ ಇವರಿಬ್ಬರ ಫೋಟೋ ಅಪ್ಲೋಡ್ ಮಾಡಿ ಬರೆದುಕೊಂಡಿದ್ದರು.

ಗೂಗಲ್ ಪ್ರಕಾರ ಇವರಿಬ್ಬರು ಹುಟ್ಟಿದ್ದು ಸೆಪ್ಟೆಂಬ್ 1, 1990ರಲ್ಲಿ. ಹೈದರಾಬಾದ್‌ನಲ್ಲಿ ಸ್ಕೂಲಿಂಗ್ ಮುಗಿಸಿ ಮಂಗಳೂರಿನಲ್ಲಿ ಕಾಲೇಜ್‌ಗೆ ಸೇರಿಕೊಂಡರು.

 ಇಬ್ಬರೂ ಐಟಿ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿ ಆನಂತರ ತಮ್ಮ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ ಇಬ್ಬರಿಗೂ ಡ್ಯಾನ್ಸ್‌ ಅಂದ್ರೆ ತುಂಬಾನೇ ಇಷ್ಟ. 

Latest Videos

click me!