ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ವೇತಾ ಸಿಂಪಲ್ ನಟಿ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ಶ್ವೇತಾ ದೊಡ್ಡ ಸಿನಿಮಾಗೆ ಮುಂದಾಗಿದ್ದಾರೆ.
26
ಹೊಂಬಾಳೆ ಫಿಲ್ಮ ನಿರ್ಮಾಣ ಮಾಡುತ್ತಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಜಗ್ಗೇಶ್ ಜೊತೆ ಶ್ವೇತಾ ಶ್ರೀವಾಸ್ತವ್ ಅಭಿನಯಿಸುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
36
'ನನ್ನ ಜೀವನಕ್ಕೆ ನನ್ನ ಮಗಳು ಬಂದ ಕ್ಷಣದಿಂದ ನನ್ನ ಜೀವನದಲ್ಲಿ ಸಿಹಿ ಸುದ್ದಿ ತರುತ್ತಿದ್ದಾಳೆ. ಹೊಂಬಾಳೆ ತಂಡದಿಂದ ಕರೆ ಬಂದಾಗ ಆತಂಕದಲ್ಲಿದ್ದೆ' ಎಂದು ಖಾಸಗಿ ಸಂದರ್ಶನದಲ್ಲಿ ಶ್ವೇತಾ ಮಾತನಾಡಿದ್ದಾರೆ.
46
'ತಾಯಿತನವನ್ನು ಎಂಜಾಯ್ ಮಾಡುತ್ತಿದ್ದ ಕಾರಣ ಸಿನಿಮಾ ರಂಗದಿಂದ ದೂರ ಉಳಿದುಬಿಟ್ಟಿದ್ದೆ. ಸಿನಿಮಾ ಕಥೆ ಹೇಳಿ ಸಖತ್ ಖುಷಿ ಪಟ್ಟಿರುವೆ ಕಾಮಿಡಿ ಮತ್ತು ಮೆಸೇಜ್ ಎರಡೂ ಇದೆ'
56
ಅಯ್ಯಂಗಾರಿ ಗಾಯಕಿಯಾಗಿ ಸಿಂಪಲ್ ಹಂಬಲ್ ಫ್ಯಾಮಿಲಿ ಲುಕ್ ಇರುವ ಹುಡುಗಿ ನಾನು. ನನ್ನ ಜೊತೆ ಇಬ್ಬರು ನಾಯಕಿಯರು ಸೆಲೆಕ್ಟ್ ಅಗಿದ್ದು ಜಗ್ಗೇಶ್ ಸರ್ ನಾನೇ ಬೇಕು ಎಂದು ಹೇಳಿದರಂತೆ.
66
ಆರಂಭದಿಂದಲ್ಲೂ ಸಿಂಪಲ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುವೆ ಹೀಗಾಗಿ ಈ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಸಿನಿಮಾದಲ್ಲಿ ಬ್ರಹ್ಮಚಾರಿಗಳು ಅಂತ ಮೆನ್ಶನ್ ಮಾಡಿದ್ದಾರೆ ಹೀಗಾಗಿ ಕ್ಯಾರಿಯಾಸಿಟಿ ಮಸ್ತ್ ಆಗಿದೆ.