ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್‌ಗೆ ಗಂಡನಿಂದ ಕಿರುಕುಳ; ಏನಿದು ಲವ್ ಜಿಹಾದ್?

First Published | Oct 6, 2022, 5:05 PM IST

ಆಕಾಶ ದೀಪ ಧಾರಾವಾಹಿ ನಟಿ ಬಾಳಲ್ಲಿ ಬಿರುಕು. ಮದುವೆ ಆಗಿದೆ ಅಂತ ಹೇಳಂಗಿಲ್ಲ ಬಿಡಂಗಿಲ್ಲ...ಏನಿದು ಹೊಸ ಕಥೆ?

ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ ದಿವ್ಯಾ ಶ್ರೀಧರ್‌ ಪತಿ ಆರ್ನವ್ ಉರ್ಫ್ ಅಮ್ಜದ್​ಖಾನ್‌ರಿಂದ ಕಿರುಕುಳಕ್ಕೆ ಒಳಗಾಗಿರುವುದರ ಬಗ್ಗೆ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ.

ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ದಿವ್ಯಾ ಶ್ರೀಧರ್‌ಗೆ ಆರ್ನವ್  ಪರಿಚಯ ಆಗಿದೆ. ಅಮ್ಜದ್ ​ಖಾನ್ ಎಂದು ನಿಜವಾದ ಹೆಸರು ಹೇಳದೆ ಆರ್ನವ್ ಎಂದು ಸುಳ್ಳು ಹೇಳಿದ್ದಾನೆ.

Tap to resize

'ನನಗೆ ಅಮ್ಜದ್​ ಖಾನ್‌ಗೂ ಮದುವೆ ಆಗಿದೆ. ಆದರೆ ಎಲ್ಲೂ ಹೇಳಿಕೊಳ್ಳ ಬೇಡಿ ಗೌಪ್ಯವಾಗಿ ಇಡಬೇಕು ಎಂದು ಬೆದರಿಕೆ ಹಾಕಿದ್ದಾರೆ' ಎಂದು ವಿಡಿಯೋದಲ್ಲಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಆರ್ನವ್ ನನಗೆ ತುಂಬಾ ಹಿಂಸೆ ಕೊಡುತ್ತಿದ್ದಾನೆ . ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವಿಚಾರದಲ್ಲಿ ಹಲವು ಬಾರಿ ನನ್ನ ಮೇಲೆ ಹಲ್ಲೆ ಆಗಿದೆ ಎಂದಿದ್ದಾರೆ ದಿವ್ಯಾ.

 ಅಮ್ಜದ್ ಖಾನ್  ಇತ್ತೀಚೆಗೆ ಮದುವೆಯಾಗಿದ್ದೇವೆ 2017ರಿಂದ ನಾನು ಮತ್ತು ಅರ್ನವ್‌ ಇಬ್ಬರೂ ಲಿವಿಂಗ್ ಟು ಗೆದರ್‌ ಇದ್ದೇವು. 5 ವರ್ಷದಿಂದ ನಾವು ಒಟ್ಟಿಗೆ ಇದ್ದೇವೆ'

'ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‌ಡೌನ್‌ ಟೈಂನಲ್ಲಿ ಅವನಿಗೆ ಏನೂ ಕಲಸ ಇರಲಿಲ್ಲ.'

 'ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್‌ ಕೊಡಿಸಿ 30 ಸಾವಿರದಂತೆ ಲೋನ್‌ ಕಟ್ಟಿದ್ದೇನೆ ಅವನಿಗೆ ಕೆಲಸವಿಲ್ಲದಿದ್ದರೂ ನಾನೇ ಸಾಕಿದ್ದೇನೆ ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೀನಿ' ಎಂದು ವಿಡಿಯೋದಲ್ಲಿ ದಿವ್ಯಾ ಮಾತನಾಡಿದ್ದಾರೆ.

Latest Videos

click me!