Dhruva Sarja ಹುಟ್ಟುಹಬ್ಬ: ಮಾರ್ಟಿನ್ ಪೋಸ್ಟರ್ ರಿಲೀಸ್, ಅಭಿಮಾನಿಗಳ ಭೇಟಿ ಇಲ್ಲ

Published : Oct 06, 2022, 09:58 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮನೆಯಲ್ಲಿ ಪುಟ್ಟ ಕಂದಮ್ಮ ಇರುವ ಕಾರಣ ಅಭಿಮಾನಿಗಳ ಭೇಟಿಗೆ ಬ್ರೇಕ್.

PREV
16
Dhruva Sarja ಹುಟ್ಟುಹಬ್ಬ: ಮಾರ್ಟಿನ್ ಪೋಸ್ಟರ್ ರಿಲೀಸ್, ಅಭಿಮಾನಿಗಳ ಭೇಟಿ ಇಲ್ಲ

ಇಂದು ಧ್ರುವ ಸರ್ಜಾ ಜನ್ಮದಿನ. ಆದರೆ ಈ ಬಾರಿಯೂ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಕಳೆದ ವಾರವಷ್ಟೇ ಮಗಳನ್ನು ಬರಮಾಡಿಕೊಂಡ ಖುಷಿಯಲ್ಲಿದ್ದಾರೆ

26

ಈ ವರ್ಷ ಹುಟ್ಟುಹಬ್ಬದ ದಿನ ಮಗಳು ಹಾಗೂ ಪತ್ನಿ ಜೊತೆ ಆಸ್ಪತ್ರೆಯಲ್ಲೇ ಇರಲು ನಿರ್ಧರಿಸಿದ್ದಾರೆ. ಹಾಗಾಗಿ ಅಭಿಮಾನಿಗಳನ್ನು ಈ ವರ್ಷವೂ ಪ್ರಿನ್ಸ್‌ನ ಭೇಟಿ ಮಾಡಲಾಗುವುದಿಲ್ಲ.

36

‘ಪತ್ನಿ ಮತ್ತು ಮಗಳ ಜೊತೆ ಆಸ್ಪತ್ರೆಯಲ್ಲಿ ಇರಬೇಕಾದ ಕಾರಣದಿಂದ ನನ್ನ ವಿಐಪಿಗಳಿಗೆ ಸಿಗಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಧ್ರುವ ತಿಳಿಸಿದ್ದಾರೆ.

46

 ಅವರ ಹುಟ್ಟುಹಬ್ಬದ ಪ್ರಯುಕ್ತ ‘ಮಾರ್ಟಿನ್‌’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಉದಯ್‌ ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ಎ ಪಿ ಅರ್ಜುನ್‌ ನಿರ್ದೇಶಿಸುತ್ತಿದ್ದಾರೆ. 

56

ಪ್ರೇಮ್‌ ನಿರ್ದೇಶನದ, ಕೆವಿಎನ್‌ ನಿರ್ಮಾಣದ ಚಿತ್ರದ ಟೈಟಲ್‌ ಟೀಸರ್‌ ಅ.20ರಂದು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಪೋಸ್ಟರ್ ಲುಕ್ ಸಖತ್ ಡಿಫರೆಂಟ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

66

ಕೋವಿಡ್‌ ಭಾರತವನ್ನು ಆಕ್ರಮಿಸಿದ ವರ್ಷದಿಂದ ಧ್ರುವ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಅಣ್ಣ ಚಿರಂಜೀವಿ ಇಲ್ಲದ ನೋವಿನಲ್ಲಿ ಭೇಟಿ ಮಾಡುವುದೇ ಬೇಡ ಎಂದು ನಿರ್ಧಾರ ಮಾಡಿದ್ದರು. ಆದರೆ ಫ್ಯಾನ್ಸ್‌ ಒತ್ತಾಯಕ್ಕೆ ಒಂದು ಸಲ ಮನೆ ಬಳಿಯೇ ಭೇಟಿ ಮಾಡಿದ್ದರು.

Read more Photos on
click me!

Recommended Stories