ಕನ್ನಡ ಚಿತ್ರರಂಗದ ಬ್ಯೂಟಿ, ಈಗ ಬರುತ್ತಿರುವ ಯಂಗ್ ನಾಯಕ ನಾಯಕಿಯರ ಪ್ರೀತಿಯ ಮಮ್ಮಿ ತಾರ ಅನುರಾಧ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.
'ಚುಕ್ಕಿಯ ಮೂಗುತಿ' ಚಿತ್ರದಲ್ಲಿ ನಟಿ ತಾರಾ ಅಭಿನಯಿಸುತ್ತಿದ್ದು ಚಿತ್ರಕಥೆ ಅದ್ಭುತವಾಗಿದೆ ನನ್ನ ಪಾತ್ರ ಡಿಫರೆಂಟ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ನಾಲ್ಕು ಹೆಣ್ಣುಮಕ್ಕಳ ಸುತ್ತ ನಡೆಯುವ ಕಥೆ ಇದಾಗಿದ್ದು, ತಾರಾ ಅವರಿಗೆ ಈ ಚಿತ್ರದಲ್ಲೂ ರಂಗಾಯಣ ರಘು ಅವರು ಜೋಡಿಯಾಗಿದ್ದಾರೆ.
'ಚುಕ್ಕಿಯ ಮೂಗುತಿ' ಚಿತ್ರದ ನಿರ್ದೇಶಕಿ, ನಿರ್ಮಾಪಕಿ ಆಗಿರುವುದು ವಸ್ತ್ರ ವಿನ್ಯಾಸಕಿ ದೇವಿಕಾ. ಮತ್ತೊಂದು ವಿಶೇಷ ಏನೆಂದರೆ ಅವರೇ ಕಥೆ ಬರೆದಿರುವುದು.
ದೇವಿಕಾ ತುಂಬಾ ಒಳ್ಳೆಯ ನಿರ್ದೇಶಕರು ಅವರ ಸಿನಿಮಾದಲ್ಲಿ ಕೆಲಸ ಮಾಡು ಖುಷಿ ಆಯ್ತು ನನಗೆ. ನನ್ನ ಪಾತ್ರ ಒಂದು ರೀತಿ ಚೆನ್ನಾಗಿದೆ ಎಂದು ತಾರಾ ಹೇಳಿದ್ದಾರೆ.