ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಾಯಕಿ ಅಮೃತಾ ಐಯಂಗಾರ್ (amrutha iyengar) ಮತ್ತು ಮೋಹಕ ತಾರೆ ರಮ್ಯಾ ಭೇಟಿ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಅಮೃತಾ ರಮ್ಯಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಮೃತಾ ಕುಟುಂಬದ ಜೊತೆ ರಮ್ಯಾ ಸಮಯ ಕಳೆದಿದ್ದಾರೆ/
'ಕೊನೆಗೂ ಈ ಕ್ಷಣ ಬಂತು. ಒಂದೇ ಫೋಟೋದಲ್ಲಿ ನಮ್ಮ ಜೀವನದ ಇಬ್ಬರು ಮುಖ್ಯವಾದ ವ್ಯಕ್ತಿಗಳಿದ್ದಾರೆ. ತಾಯಿ ಮತ್ತು ನಟಿ ರಮ್ಯಾ ಅವರು. ಈ ಅದ್ಭುತ ಸಂಜೆ ಎಂದೂ ಮರೆಯಲಾರೆ' ಎಂದು ಅಮೃತಾ ಬರೆದುಕೊಂಡಿದ್ದಾರೆ.
'Amy ನಿಮ್ಮ ಮತ್ತು ನಿಮ್ಮ ಕುಟುಂಬದ ಜೊತೆ ಸಮಯ ಕಳೆದದ್ದು ತುಂಬಾನೇ ಖುಷಿ ಆಯ್ತು.ನಿಮ್ಮ ರಜೆ ದಿನಗಳನ್ನು ಎಂಜಾಯ್ ಮಾಡಿ. ನಿಮ್ಮ ಸ್ವೀಟ್ ಸ್ವೀಟ್ ತಾಯಿ, ಪ್ರಿಯಾಂಕಾ, ನಿತೇಶ್ ಮತ್ತು ಆಂಟಿ ಅವರಿಗೆ ನನ್ನ ತುಂಬು ಹೃದಯದ ಪ್ರೀತಿ' ಎಂದು ರಮ್ಯಾ ಕಾಮೆಂಟ್ ಮಾಡಿದ್ದಾರೆ.
ಅಮೃತಾ ಮತ್ತು ಕುಟುಂಬ ದುಬೈ ಪ್ರವಾಸ ಮಾಡುತ್ತಿದ್ದಾರೆ. ಲಾಂಗ್ vacation ಎಂಜಾಯ್ ಮಾಡುತ್ತಿರುವ ನಟಿ ರಮ್ಯಾ ಅವರನ್ನು ದುಬೈನಲ್ಲಿ ಭೇಟಿ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ತುಂಬಾನೇ ಆಕ್ಟೀವ್ ಆಗಿದ್ದಾರೆ. ಅಮೃತಾ ಹಂಚಿಕೊಂಡಿದ ಒಂದು ಫೋಟೋಗೆ ನೀನು ಸೇಮ್ ಕರೀನಾ ಕಪೂರ್ ರೀತಿ ಇದ್ದೀರಾ ನೀವು ನಮ್ಮ ಕನ್ನಡದ ಕರೀನಾ ಕಪೂರ್ ಎಂದು ಹೇಳಿದ್ದರಂತೆ.
ಇತ್ತೀಚಿಗೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅಮೃತಾ ನಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಸರ್ ಮತ್ತು ನಟಿ ರಮ್ಯಾ ಎಂದು ಹೇಳಿಕೊಂಡಿದ್ದರು.