ಕೈ ತುಂಬಾ ಬಳೆ, ದೊಡ್ಡ ಮೂಗುತಿ; ನಟಿ Sruthi Hariharan ಹೊಸ ಸೀರೆ ಲುಕ್ ವೈರಲ್!

Suvarna News   | Asianet News
Published : Mar 01, 2022, 12:15 PM ISTUpdated : Mar 01, 2022, 05:29 PM IST

ಕೆಂಪು ಸೀರೆಯಲ್ಲಿ ಮಿಂಚಿದ 'ನಾತಿಚರಾಮಿ' ನಟಿ ಶ್ರುತಿ. ಅಪರೂಪಕ್ಕೆ ಅವಕಾಶ ಸಿಕ್ಕರೆ ಬಿಡದೇ ಹೀಗೆಯೇ ರೆಡಿಯಾಗಿ....

PREV
17
ಕೈ ತುಂಬಾ ಬಳೆ, ದೊಡ್ಡ ಮೂಗುತಿ; ನಟಿ Sruthi Hariharan ಹೊಸ ಸೀರೆ ಲುಕ್ ವೈರಲ್!

ಲೂಸಿಯಾ (Lucia) ಚಿತ್ರದ ಮೂಲಕ ಶ್ವೇತಾ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲಾವಿದೆ ಶ್ರುತಿ ಹರಿಹರನ್ (Sruthi Harikaran) ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. 

27

ಪಿಂಕ್ ಸೀರೆ (Saree), ಹಸಿರು ಬಣ್ಣದ ಬ್ಲೌಸ್ (Blouse) ಕೈ ತುಂಬಾ ಬಳೆ, ಕೂದಲಿಗೆ ವಿಭಿನ್ನವಾಗಿರುವ ಹೂ ಮುಡಿದುಕೊಂಡು ಶ್ರುತಿ ಮಿಂಚುತ್ತಿದ್ದಾರೆ. 

37

ಚಿತ್ರರಂಗವನ್ನು ರೂಲ್ ಮಾಡುವಾಗ ಶ್ರುತಿ ಮೂಗುತಿ (Nose Pin) ಸುಂದರಿ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದರು. ಈಗಲೂ ಕೂಡ ಅದರಂತೆ ತುಂಬಾನೇ ಟ್ರೆಡಿಷನಲ್ ಆಗಿರುವ (Traditional) ಮೂಗುಬೊಟ್ಟು (Nose Ring) ಧರಿಸಿದ್ದಾರೆ. 

47

ರಾಜೀ ಡಿಸೈನ್ ಮಾಡಿರುವ ಈ ಬ್ಲೌಸ್‌ಗೆ ಮೆಹೇಂದಿ ಸ್ಟೋರಿ ಕಿರಣ್‌ನವರು ಆಭರಣ ನೀಡಿದ್ದಾರೆ. ಬ್ಲ್ಯಾಕ್ ಪೆಪ್ಪರ್ ವೆಡ್ಡಿಂಗ್‌ನವರು ಈ ಫೋಟೋ ಕ್ಲಿಕ್ ಮಾಡಿದ್ದಾರೆ. 

57

ಹಲವು ವರ್ಷಗಳ ನಂತರ ಶ್ರುತಿ ಈ ಲುಕ್‌ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಮನೆ ಮಗಳಂತೆ ರೆಡಿಯಾಗುವ ಶ್ರುತಿನ ಮಿಸ್ ಮಾಡಿಕೊಳ್ಳುತ್ತಿದ್ವಿ ಎಂದು ಕಾಮೆಂಟ್ ಮಾಡಿದ್ದಾರೆ. 

67

 ಮದರ್‌ವುಡ್ ಎಂಜಾಯ್ ಮಾಡುತ್ತಲೇ, ಚಿತ್ರಕಥೆಗಳನ್ನು ಕೇಳಿರುವ ಶ್ರುತಿ ಎರಡು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 2020ರಲ್ಲಿ ಬಿಡುಗಡೆಯಾದ ಆಧ್ಯಾ (Aadhya) ಸಿನಿಮಾದಲ್ಲಿ ಶ್ರುತಿ ನಟಿಸಿದ್ದರು.

77

ಸಾಲುಗಾರ ಮತ್ತು ಸ್ಟ್ರಾಬೆರಿ ಸಿನಿಮಾದ ಚಿತ್ರೀಕರಣವನ್ನು ಶ್ರುತಿ ಮುಗಿಸಿದ್ದಾರೆ. ಧನಂಜಯ್‌ ಜೊತೆ ನಟಿಸುತ್ತಿರುವ ಹೆಡ್‌ಬುಶ್‌ (Headbush) ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.

Read more Photos on
click me!

Recommended Stories