ಪಕ್ಕಾ ಬಾಲಿವುಡ್ ನಟಿಯಂತೆ ಕಾಣಿಸಿಕೊಂಡ Rashmika Mandanna ಕನ್ನಡಿಗರಿಂದ ಟ್ರೋಲ್?

First Published | Feb 28, 2022, 2:57 PM IST

ವೈರಲ್ ಆಗುತ್ತಿದೆ ರಶ್ಮಿಕಾ ಮಂದಣ್ಣ ಏರ್ಪೋರ್ಟ್‌ ಲುಕ್. ಏನಿದು ಫ್ಯಾಷನ್‌ ಎಂದವರಿದ್ದಾರೆ, ಟ್ರೋಲ್ ಮಾಡಿದವರು ಕೂಡ ಇದ್ದಾರೆ....

 ಕಿರಿಕ್ ಪಾರ್ಟಿ ಸುಂದರಿ ಸಾನ್ವಿ ಅಂದರೆ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಪರಾಜಿಗಳು ಕ್ಲಿಕ್ ಮಾಡಿರುವ ಫೋಟೋ ವೈರಲ್ ಆಗುತ್ತಿದೆ. 

ಗ್ರೇ ಫೇಡ್‌ ಬಣ್ಣದ ಬೆಲ್ ಬಾಟಮ್ ಜೀನ್ಸ್‌, ಬ್ಲ್ಯಾಕ್ ಕ್ರಾಪ್ ಟಾಪ್ ಜೊತೆ ಹಸಿರು ಬಣ್ಣದ ಟೀ-ಶರ್ಟ್‌ ಧರಿಸಿ ಇದಕ್ಕೆ ಮ್ಯಾಚ್ ಆಗುವಂತೆ ವೈಟ್ ಶೂ ಧರಿಸಿದ್ದಾರೆ.. 

Tap to resize

ಪ್ರತಿ ಸಲ ಕ್ಯಾಮೆರಾ ಎದುರು ಕಾಣಿಸಿಕೊಂಡಾಗ ರಶ್ಮಿಕಾ ಮಂದಣ್ಣ ಎರಡು ಬೆರಳುಗಳನ್ನು ಜೋಡಿಸಿ ಹಾರ್ಟ್‌ ಸಿಂಬಲ್ ತೋರಿಸುತ್ತಾರೆ, ಈ ಸಲವೂ ಅದೇ ಮಾಡಿದ್ದಾರೆ. 

ಫ್ಯಾಷನ್ ಲೋಕದಲ್ಲಿ ಏನೆಲ್ಲಾ ಟ್ರೆಂಡ್ ಆಗುತ್ತೆ ಅದನ್ನು ರಶ್ಮಿಕಾ ತಪ್ಪದೆ ಫಾಲೋ ಮಾಡುತ್ತಾರೆ. ಸಿನಿಮಾ ಮತ್ತು ಪ್ರಚಾರ ಹೊರತುಪಡಿಸಿ ರಶ್ಮಿಕಾ ಸದಾ ಟ್ರೆಂಡಿ ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 

ಪ್ರತಿ ಸಲ ರಶ್ಮಿಕಾ ಮಂದಣ್ಣ ಬಾಲಿವುಡ್‌ ನಟಿಯಂತೆ ಕಾಣಿಸಿಕೊಳ್ಳುತ್ತಾರೆ, ಕನ್ನಡಿಗರ ರೀತಿ ನಮಗೆ ಫೀಲ್ ಆಗುತ್ತಿಲ್ಲ ಇದೆಲ್ಲಾ ನಮ್ಮ ಸ್ಟೈಲ್ ಅಲ್ಲ ಎಂದಿದ್ದಾರೆ ನೆಟ್ಟಿಗರು.

ಪುಷ್ಪ ಹಿಟ್ ನಂತರ ಮಿಷನ್ ಮಜಲು ಮತ್ತು ಗುಡ್‌ಬೈ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಬೇರೆ ಯಾವ ಪ್ರಾಜೆಕ್ಟ್‌ಗಳನ್ನು ಅನೌನ್ಸ್‌ ಮಾಡಿಲ್ಲ. ಪುಷ್ಪ 2ಗೆ ಸಂಭಾವನೆ ಹೆಚ್ಚಿಗೆ ಡಿಮ್ಯಾಂಡ್ ಮಾಡಿದ್ದಾರೆ ಅಂತ ಮಾತ್ರ ಹೇಳಲಾಗಿದೆ.

Latest Videos

click me!