ಸ್ಯಾಂಡಲ್ವುಡ್ನ ಸಿಂಪಲ್ ನಟಿ ಎಂದೇ ಕರೆಸಿಕೊಳ್ಳುವ ಶ್ವೇತಾ ಶ್ರೀವಾತ್ಸವ ಸಿನಿಮಾದಲ್ಲಿ ನಟಿಸುವ ಜೊತೆಗೆ ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನವರಸ ನಾಯಕ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಜತೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದುಕೊಂಡ ಶ್ವೇತಾ ಶ್ರೀವಾತ್ಸವ (Shwetha Srivatsav) ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿಯರಲ್ಲಿ ಒಬ್ಬರು. ವಾರದಲ್ಲಿ 2-3 ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಜೊತೆ ಸಂಪರ್ಕದಲ್ಲಿರುತ್ತಾರೆ.
26
ಇದೀಗ ಶ್ವೇತಾ ಶ್ರೀವಾತ್ಸವ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದು, ಅದನ್ನು ನೋಡಿದ ನೆಟ್ಟಿಗರು ನೀವು ನಿಜ ಜೀವದಲ್ಲಿಯೂ ಹೀರೋಯಿನ್ ಆಗಿದ್ದೀರಾ ಎಂದು ಶ್ಲಾಘಿಸಿದ್ದಾರೆ.
36
ಈ ಬಗ್ಗೆ ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ದಯೆ ಒಂದು ಆಯ್ಕೆಯಾಗಿದೆ. ದಯೆ ಯಾವಾಗಲೂ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಈ ವೇಳೆ ತನ್ನ ಹೊಸ ಯೋಜನೆ ಬಗ್ಗೆ ಹೇಳಿಕೊಂಡಿರುವ ಅವರು, ಹೊಸ ಯೋಜನೆ, ಹೊಸ ಸ್ನೇಹ, ಹೊಸ ಪ್ರಾರಂಭ ಎಂದು ಬರೆದು ತಿಳಿಸಿದ್ದಾರೆ.
46
ಜೊತೆಗೆ ಗೊರವನಹಳ್ಳಿ (Goravanahalli) ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ (Sri Mahalakshmi Temple) ಮಕ್ಕಳಿಗೆ ಅನ್ನದಾಸೋಹ ಮಾಡಿಸುತ್ತಿರುವ ಫೋಟೋಗಳನ್ನು ಶ್ವೇತಾ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ನಾನು ಹೊಸದೊಂದು ಯೋಜನೆಯನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
56
ಸದ್ಯ ಈ ಪೋಸ್ಟ್ ನೋಡಿದ ನೆಟ್ಟಿಗರು, ನೀವು ನಿಜ ಜೀವನದ ಹೀರೋಯಿನ್ ಮೇಡಂ. ಆಲ್ ದಿ ಬೆಸ್ಟ್, ಗುಡ್ ಲಕ್ ಅಂತೆಲ್ಲಾ ಕಮೆಂಟ್ ಮಾಡಿದ್ದು, ಅವರ ಕಾರ್ಯವನ್ನು ಪ್ರಶಂಸಿಸುತ್ತಿದ್ದಾರೆ. ವಿಶೇಷವಾಗಿ ಸ್ಯಾಂಡಲ್ವುಡ್ನಲ್ಲಿ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡ ಮೊದಲಿಗರು ಈ ಶ್ವೇತಾ ಶ್ರೀವಾತ್ಸವ.
66
ಇನ್ನು 'ರಾಘವೇಂದ್ರ ಸ್ಟೋರ್ಸ್' (Raghavendra Stores) ಚಿತ್ರದಲ್ಲಿ ಜಗ್ಗೇಶ್‌ಗೆ (Jaggesh) ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಳ್ಳುತ್ತಿದ್ದು, 'ಸಂತೋಷ್ ಚಿತ್ರದ ಕಥೆ ಹೇಳಿದಾಗ ಖುಷಿಯಾಯಿತು. ಬಹಳ ಒಳ್ಳೆಯ ಪಾತ್ರವಾದ್ದರಿಂದ ಒಪ್ಪಿಕೊಂಡೆ. ಈ ಸಿನಿಮಾದ ಆಫರ್ ನನಗೆ ಬಂದಾಗ ಅಚ್ಚರಿಗೊಳಗಾದೆ ಎಂದು ತಿಳಿಸಿದ್ದಾರೆ.