Udupi: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ Shubha Poonja!

Suvarna News   | Asianet News
Published : Jan 05, 2022, 03:50 PM IST

ಸರಳವಾಗಿ ಹುಟ್ಟೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ನಟಿ ಶುಭಾ ಪೂಂಜಾ ಮತ್ತು ಸುಮಂತ್. 

PREV
17
Udupi: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ Shubha Poonja!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಬಿಗ್ ಬಾಸ್ ಸ್ಪರ್ಧಿ ಶುಭಾ ಪೂಂಜಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

27

ಶುಭಾ ಪೂಂಜಾ (Shubha Poonja) ಅವರ ಹುಟ್ಟೂರು ಉಡುಪಿಯಲ್ಲಿ, ಉದ್ಯಮಿ ಸುಮಂತ್ (Sumanth) ಅವರ ಜೊತೆ ಮದುವೆಯಾಗಿದ್ದಾರೆ. 

37

ವೃತ್ತಿಯಲ್ಲಿ ಸುಮಂತ್ ಉದ್ಯಮಿಯಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆ ಕಾರ್ಯಕ್ರಮದಲ್ಲಿ ಶುಭಾ ಅವರನ್ನು ಭೇಟಿ ಆಗಿದ್ದು ಎನ್ನಲಾಗಿದೆ. 

47

ಆರೇಂಜ್‌ ಬಣ್ಣದ ಸೀರೆಯಲ್ಲಿ ಶುಭಾ ಹಾಗೂ ರೇಶ್ಮೆ ಪಂಚೆಯಲ್ಲಿ ಸುಮಂತ್ ಮಿಂಚುತ್ತಿದ್ದಾರೆ. MCM ಫೋಟೋಗ್ರಫಿ ಅವರು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. 

57

ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭಾ ಮತ್ತು ಸುಮಂತ್ ಬೆಂಗಳೂರಿನಲ್ಲಿ ಆಪ್ತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ. ಅದರೆ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಾಗುತ್ತಿರುವ ಕಾರಣ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 

67

ಬಿಗ್ ಬಾಸ್‌ ಸೀಸನ್‌-8 ರಿಂದ ಹೊರ ಬಂದಾಗಿನಿಂದಲೂ ಶುಭಾ ಮದುವೆ ಪ್ಲ್ಯಾನ್ ಮಾಡುತ್ತಿದ್ದರು. ಡಿಸೆಂಬರ್‌ ತಿಂಗಳಲ್ಲಿ ದಿನಾಂಕವೂ ಫಿಕ್ಸ್ ಮಾಡಿದ್ದರು. ಆದರೆ ಎಲ್ಲರಿಗೂ ಸರ್ಪ್ರೈಸ್‌ ಕೊಟ್ಟು, ಹೊಸ ವರ್ಷದ ಮೊದಲ ವಾರದಲ್ಲಿಯೇ ಹಸೆಮಣೆ ಏರಿದ್ದಾರೆ.

77

ಹಲವು ವರ್ಷಗಳಿಂದ ಸುಮಂತ್ ಮತ್ತು ಶುಭಾ ಪೂಂಜಾ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories