Meghana Rajನ ಭೇಟಿ ಮಾಡಿದ ಮಲಯಾಳಂ ನಟಿ Ahaana Krishna!

Suvarna News   | Asianet News
Published : Jan 04, 2022, 03:13 PM IST

ಮಲಯಾಳಂ ನಟ ಕೃಷ್ಣ ಕುಮಾರ್ ಕುಟುಂಬ ಬೆಂಗಳೂರಿಗೆ ಆಗಮಿಸಿ ಮೇಘನಾ ರಾಜ್‌ರನ್ನು ಭೇಟಿ ಮಾಡಿದ್ದಾರೆ.   

PREV
17
Meghana Rajನ ಭೇಟಿ ಮಾಡಿದ ಮಲಯಾಳಂ ನಟಿ Ahaana Krishna!

ಕನ್ನಡ ಚಿತ್ರರಂಗದ (Sandalwood) ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ (Meghana Raj) ಮತ್ತು ರಾಯನ್ ರಾಜ್‌ ಸರ್ಜಾ ನಿವಾಸಕ್ಕೆ ಸ್ಪೆಷಲ್ ಅತಿಥಿಗಳು ಆಗಮಿಸಿದ್ದಾರೆ. 

27

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಕೃಷ್ಣಕುಮಾರ್ (Krishna Kumar) ಅವರ ಪತ್ನಿ ಸಿಂಧು, ಪುತ್ರಿ ನಟಿ ಆಹಾನ ಕೃಷ್ಣ ಮತ್ತು ಹನ್ಸಿಕಾ ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ.

37

ಮೇಘನಾ ರಾಜ್‌ ಮತ್ತು ಅಹಾನ ಕೃಷ್ಣ (Ahaana Krishna) ಹಲವು ವರ್ಷಗಳಿಂದ ಸ್ನೇಹಿತರು, ಹೀಗಾಗಿ ಕೇರಳದಿಂದ (Kerala) ಬೆಂಗಳೂರಿನ ಬಂದ ತಕ್ಷಣ ಮೇಘನಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. 

47

ಮನೆಯಲ್ಲಿರುವ ಜ್ಯೂನಿಯರ್ ಸಿಂಬಾ ರಾಯನ್ ರಾಜ್‌ ಸರ್ಜಾನನ್ನು (Raayan Raj Sarja) ಎತ್ತಿಕೊಂಡು ಮುದ್ದಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ ಆಹಾನ. 

57

'ನಿಮ್ಮನ್ನು ಭೇಟಿ ಮಾಡಿದ್ದು ತುಂಬಾನೇ ಸಂತೋಷವಾಯ್ತು. ಗುಡ್‌ ವೈಬ್ಸ್‌ (Good Vibes) ಮಾತ್ರ. ನಿಮ್ಮ ತಾಯಿ ಸಿಂಧು ಕೃಷ್ಣ ನಿಜವಾದ ರಾಕ್‌ಸ್ಟಾರ್' ಎಂದು ಮೇಘನಾ ಬರೆದುಕೊಂಡಿದ್ದಾರೆ. 

67

'ಮೇಘನಾ ನಿಮ್ಮನ್ನು, ರಾಯನ್ ರಾಜ್‌ ಮತ್ತು ನಿಮ್ಮ ಪೋಷಕರ ಜೊತೆ  ಸಮಯ ಕಳೆದು ಸಂತೋಷವಾಗಿದೆ. ಮತ್ತೆ ಭೇಟಿ ಆಗುವುದಕ್ಕೆ ಕಾಯುತ್ತಿರುವೆ' ಎಂದು ಅಹಾನ ಕಾಮೆಂಟ್ ಮಾಡಿದ್ದಾರೆ. 

77

ಮೇಘನಾ ರಾಜ್ ಕನ್ನಡ ಮಾತ್ರವಲ್ಲದೆ ಅನೇಖ ಮಲಯಾಳಂ (Mollywood) ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೂಗಲ್ ಕೊಟ್ಟ ಮಾಹಿತಿ ಪ್ರಕಾರ 21 ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories