ಟ್ರಿಪ್‌ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!

First Published | Jan 4, 2022, 2:24 PM IST

ಹಿತಾ ಪ್ರವಾಸದ ಫೋಟೋಗಳನ್ನು ನೋಡಿ ಪ್ರೇರಣೆಗೊಂಡ ಹೆಣ್ಣುಮಕ್ಕಳು. ನೀವು ಹೆಚ್ಚು ಸಿನಿಮಾ ಮಾಡಬೇಕು ಎಂದ ಫಾಲೋವರ್ಸ್.... 
 

ಕನ್ನಡ ಚಿತ್ರರಂಗದ (Sandalwood) ಶ್ರೇಷ್ಠ ನಟ ಚಂದ್ರಶೇಖರ್ ಉರ್ಫ್ ಸಹಿ ಕಹಿ ಚಂದ್ರು (Sihi Kahi Chandru) ಮತ್ತು ಗೀತಾ ಅವರ ಮುದ್ದಿನ ಹಿರಿಯ ಪುತ್ರಿ ಹಿತಾ. 

ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಅಗಿರುವ ಹಿತಾ ಚಂದ್ರಶೇಖರ್ ಕೆಲವು ದಿನಗಳ ಹಿಂದೆ ರಾಜಸ್ಥಾನದ ಜೈಪುರಕ್ಕೆ ಸೋಲೋ ಟ್ರಿಪ್‌ ಮಾಡಿದ್ದರು. 

Tap to resize

ಜೈಪುರ್‌ (Jaipur) ಹೇಗಿದೆ ಅಲ್ಲಿನ ಆಹಾರ ಯಾವ ರೀತಿ ಇದೆ ಅರಮನೆಗಳನ್ನು ಹೇಗೆಲ್ಲಾ ಅಲಂಕಾರ ಮಾಡಿದ್ದಾರೆ, ಎಂದು ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದಾರೆ. 

ಜೈಪುರ್ ಸೋಲೋ ಟ್ರಿಪ್‌ನಲ್ಲಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಪತಿ ಕಿರಣ್ (Kiran Srinivas) ಸರ್ಪ್ರೈಸ್ ನೀಡಿದ್ದಾರೆ. 

ಜೈಪುರ್ ಟ್ರಿಪ್‌ ನಂತರ ಮುಂಬೈಗೆ (Mumbai) ಆಗಮಿಸಿ ಕೆಲಸದಲ್ಲಿ ಬ್ಯುಸಿಯಾದ ಹಿತಾ ಹೊಸ ವರ್ಷಕ್ಕೆ ಗೋವಾ ಟ್ರಿಪ್ ಮಾಡಿದ್ದಾರೆ. 
 

 ಹೊಸ ವರ್ಷವನ್ನು ಪತಿ ಕಿರಣ್‌ ಜೊತೆ ಗೋವಾದಲ್ಲಿ (Goa) ಆಚರಿಸಿದ್ದಾರೆ. ಇಬ್ಬರೂ ಡ್ಯಾನ್ಸ್‌ ಮಾಡುತ್ತಾ ಪಾರ್ಟಿ ಮಾಡುತ್ತಾ 2022 ಅನ್ನು ಬರ ಮಾಡಿಕೊಂಡಿದ್ದಾರೆ. 
 

ಹಿತಾ ತುಂಬಾನೇ ಬೋಲ್ಡ್‌ ಹುಡುಗಿ, ಇತ್ತೀಚಿಗೆ ಅವರ ಡ್ರೆಸಿಂಗ್ ಸ್ಟೈಲ್ (Fashion Style) ತುಂಬಾನೇ ಬದಲಾಗಿದೆ. ವಿಭಿನ್ನ ಶೈಲಿಯ ಫ್ಯಾಷನ್‌ ಸ್ಟೇಟ್ಮೆಂಟ್‌ ಕೊಟ್ಟು ಹೆಣ್ಣು ಮಕ್ಕಳಿಗೆ ಹತ್ತಿರವಾಗುತ್ತಿದ್ದಾರೆ. 
 

2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಹಿತಾ ಮುಂದಿನ ಸಿನಿಮಾ ತುರ್ತು ನಿರ್ಗಮನ (Thurthu Nirgamana) ಬಿಡುಗಡೆಗೆ ಸಿದ್ಧವಾಗಿದೆ. 
 

ನಾವು ಜೀವನದಲ್ಲಿ ಎಷ್ಟು ಗ್ರೇಟ್‌ಫುಲ್ ಆಗಿರಬೇಕು, ಯಾಕೆ ಸದಾ ಪಾಸಿಟಿವ್ ಆಗಿರಬೇಕು ಎಂದು ಹೀಗೆ affirmationsಗಳನ್ನು ಹಂಚಿಕೊಂಡು ಅನೇಕರಿಗೆ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

Latest Videos

click me!