ವಿವಾದದ ಸುಳಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಮೊದಲ ಸಿನಿಮಾ; ನಿರ್ದೇಶಕನಿಗೇ ಗೇಟ್ ಪಾಸ್ ಕೊಟ್ರಾ!?

Published : Nov 03, 2026, 11:04 AM IST

ಆಯುಷ್ ಉಪೇಂದ್ರ ನಟನೆಯ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗಾಗಲೇ 40% ಶೂಟಿಂಗ್ ಕೂಡ ಮುಗಿದಿದೆ. ಕಾಶ್ಮೀರ, ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದ ನಿರ್ದೇಶಕರಿಗೆ ಬರಸಿಡಿಲು ಬಡಿದಂತೆ ಅವರನ್ನು ಬದಲಾಯಿಸಿರುವ ಸುದ್ದಿ ಸಿಕ್ಕಿದೆ ಎನ್ನಲಾಗಿದೆ. ಏನಿದು ವಿವಾದ? ನೋಡಿ..

PREV
17

ಕನ್ನಡದ ರಿಯಲ್ ಸ್ಟಾರ್ ನಟ ಉಪೇಂದ್ರ ಮಗ ಆಯುಷ್ ಉಪೇಂದ್ರ (Ayush Upendra) ನಟನೆಯ ಇನ್ನೂ ಹೆಸರಿಡದ ಮೊಟ್ಟಮೊದಲ ಸಿನಿಮಾ ಸೆಟ್ಟೇರಿದ್ದು ಬಹುತೇಕರಿಗೆ ಗೊತ್ತೇ ಇದೆ. ಈ ಸಿನಿಮಾ ಶೂಟಿಂಗ್ ಶುರುವಾಗಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಈ ಚಿತ್ರದಿಂದ ನಿರ್ದೇಶಕ ಪುರುಷೋತ್ತಮ್ (Purushottham C) ಅವರಿಗೆ ಗೇಟ್‌ಪಾಸ್ ನೀಡಲಾಗಿದೆ ಎಂಬ ಸುದ್ದಿ ಬಂದಿದೆ. ಇದೀಗ, ಆಯುಷ್ ಮೊಟ್ಟಮೊದಲ ಸಿನಿಮಾ ಈ ಮೂಲಕ ವಿವಾದದ ಹಂತ ತಲುಪುವ ಲಕ್ಷಣ ಗೋಚರಿಸುತ್ತಿದೆ. ಹಾಗಿದ್ರೆ ಏನಾಗ್ತಿದೆ ಅಲ್ಲಿ?

27

ಸಿಕ್ಕಿರುವ ಮಾಹಿತಿ ಪ್ರಕಾರ, ಆಯುಷ್ ಉಪೇಂದ್ರ ನಟನೆಯ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈಗಾಗಲೇ 40% ಶೂಟಿಂಗ್ ಕೂಡ ಮುಗಿದಿದೆ. ಕಾಶ್ಮೀರ, ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದ ನಿರ್ದೇಶಕರು ಮುಂದಿನ ಶೂಟಿಂಗ್‌ ಮಾಡುವ ಪ್ಲಾನ್‌ನಲ್ಲಿ ನಿರತರಾಗಿದ್ದಂತೆ ಅವರಿಗೆ ಬರಸಿಡಿಲು ಬಡಿದಂತೆ ಅವರನ್ನು ಬದಲಾಯಿಸಿರುವ ಸುದ್ದಿ ಸಿಕ್ಕಿದೆ ಎನ್ನಲಾಗಿದೆ.

37

ಕಾಶ್ಮೀರದಲ್ಲೇ ಚಿತ್ರದ ಮುಹೂರ್ತ ಮುಗಿಸಿ ಆಕ್ಷನ್ ಸೀಕ್ವೆನ್ಸ್ ಶೂಟ್ ಮುಗಿಸಿರುವ ನಿರ್ದೇಶಕರು ಮುಂದಿನ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವಾಗಲೇ ಈ ಚಿತ್ರದ ನಿರ್ಮಾಪಕರು ನಿರ್ದೇಶಕ ಪುರುಷೋತ್ತಮ ಅವರ ಬದಲಿಗೆ ಬೇರೊಬ್ಬರು ನಿರ್ದೇಶಕರನ್ನು ಹುಡುಕಿಕೊಂಡು ಅವರಿಂದ ಮುಂದಿನ ಶೂಟಿಂಗ್ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

47

ಈ ಸುದ್ದಿ ತಿಳಿದ ಚಿತ್ರದ ನಿರ್ದೇಶಕರಾದ 'ಪುರುಷೋತ್ತಮ್ ಅವರು ಈ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಮಾತನ್ನಾಡಿರುವ ನಿರ್ದೇಶಕ ಪುರುಷೋತ್ತಮ್ ಅವರು 'ನನಗೆ ಏನೂ ಕಾರಣ ಹೇಳದೇ ಏಕಾಏಕಿ ನನ್ನನ್ನು ಈ ಚಿತ್ರದಿಂದ ಹೊರಹಾಕಿದ್ದಾರೆ. ನಿರ್ಮಾಪಕರ ನಡೆಗೆ ನನಗೆ ತೀವ್ರ ಬೇಸರವಾಗಿದೆ' ಎಂದಿದ್ದಾರೆ.

57

ಚಿತ್ರದ ನಿರ್ಮಾಪಕರ ನಡೆಗೆ ಬೇಸರಗೊಂಡಿರುವ ಆಯುಷ್ ನಟನೆಯ ಮುಂಬರುವ ಚಿತ್ರದ ನಿರ್ದೇಶಕ ಪುರುಷೋತ್ತಮ್, ಇದೀಗ ಚಿತ್ರತಂಡದ ವಿರುದ್ದ ಫಿಲ್ಮ್ ಚೇಂಬರ್‌ಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

67

ಅಂದಹಾಗೆ, ಆಯುಷ್ ಅಭಿನಯದ ಮೊಟ್ಟಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಅವರು ಈ ಮೊದಲು 2010ರಲ್ಲಿ ಯಶ್ ನಟನೆಯ 'ಮೊದಲಾ ಸಲ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

77

ಆಗ ಅವರ ಹೆಸರು ಪುರುಷೋತ್ತಮ್ ಸಿ. ಸೋಮನಾಥಪುರ ಎಂದು ಫೇಮಸ್ ಆಗಿತ್ತು. ಇದೀಗ ಮತ್ತೆ ಸಿನಿಮಾ ನಿರ್ದೇಶನಕ್ಕೆ ತೊಡಗಿರುವ ಅವರಿಗೆ ಈ ಆತಂಕ ಎದುರಾಗಿದೆ. ವಿವಾದದ ಹಂತ ತಲುಪಿರುವ ಈ ಸಂಗತಿ ಮುಂದೇನು ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories