Anniversary Selfie: ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ ಮಾಡುತ್ತಿರುವಾಗ ಯಶ್ ತುಂಟಾಟ ಹೇಗಿತ್ತು ನೋಡಿ!

Suvarna News   | Asianet News
Published : Dec 10, 2021, 03:24 PM IST

ಸರಳವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಯಶ್ ಮತ್ತು ರಾಧಿಕಾ. ಪ್ರತಿ ವರ್ಷವೂ ವಿಶೇಷ ಹೀಗಾಗಿ ಈ ವರ್ಷ ಎಲ್ಲಿದ್ರಿ ಎಂದ ನೆಟ್ಟಿಗರು.... 

PREV
17
Anniversary Selfie: ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ ಮಾಡುತ್ತಿರುವಾಗ ಯಶ್ ತುಂಟಾಟ ಹೇಗಿತ್ತು ನೋಡಿ!

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಲೈಫ್‌ನಲ್ಲಿ ಸೆಲೆಬ್ರೇಟ್ ಮಾಡುವ ತಿಂಗಳು ಅಂದ್ರೆ ಡಿಸೆಂಬರ್. ಪುತ್ರಿ ಹುಟ್ಟು ಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ  ಇದೇ ತಿಂಗಳು ಬರುತ್ತದೆ. 

27

ಡಿಸೆಂಬರ್ 9ರಂದು ಯಶ್ (Yash) ಮತ್ತು ರಾಧಿಕಾ ವಿವಾಹವಾದ ದಿನ. ಪ್ರತಿ ವರ್ಷವೂ ಇಬ್ಬರು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. 
 

37

ಪತಿ ಜೊತೆ ಕಡಲ ತೀರದಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡ ರಾಧಿಕಾ ಪತಿಯನ್ನು ಹೊಗಳಿ ಬರೆದುಕೊಂಡು ಸ್ವೀಟ್‌ಹಾರ್ಟ್‌ ಎಂದು ಕರೆದಿದ್ದರು. 

47

ಇಬ್ಬರು  ಫ್ಲೋಟಿಂಗ್ ಬೋಟ್‌ನಲ್ಲಿ ಡಿನ್ನರ್ ಮಾಡಿದ್ದಾರೆ. ಈ ವೇಳೆ ರಾಧಿಕಾ ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. 

57

'ಫೋಟೋ ಕ್ಲಿಕ್ ಮಾಡುವುದಕ್ಕೆ ನಾನು ಹಾಕುವ ಪರಿಶ್ರಮ. ಈಗಲಾದರೂ ಗೊತ್ತಾಯಿತಾ ಟಾಸ್ಕ್‌ ಮಾಸ್ಟರ್ ಯಾರು ಎಂದು?' ಎಂದು ಬರೆದುಕೊಂಡಿದ್ದಾರೆ.
 

67

'Why are men so difficult when it comes to picture anyway' ಎಂದು Radhika Pandit ಬರೆದುಕೊಂಡಿದ್ದಾರೆ. ಈ ವಿಚಾರವನ್ನು ಬಹುತೇಕ ಹೆಣ್ಣು ಮಕ್ಕಳು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. 
 

77

ಒಂದು ಫೋಟೋದಲ್ಲಿ ಯಶ್ ಮುಖವನ್ನು ಟವಲ್‌ನಿಂದ ಮುಚ್ಚಿಕೊಂಡಿದ್ದಾರೆ, ಮತ್ತೊಂದರಲ್ಲಿ ರಾಧಿಕಾ ಕ್ಲಿಕ್ ಮಾಡುವಾಗ ಇಣುಕಿ ನೋಡಿದ್ದಾರೆ.

Read more Photos on
click me!

Recommended Stories