ಡಿಸೆಂಬರ್ 2ರಂದು ಮೂರು ವರ್ಷಕ್ಕೆ ಕಾಲಿಟ್ಟ ಜ್ಯೂನಿಯರ್ ಸಿಂಡ್ರೆಲಾ, ಸ್ಯಾಂಡಲ್‌ವುಡ್ ಸ್ಟಾರ್ ಕಿಡ್ ಐರಾ ಯಶ್ (Ayra Yash).
ಇನ್‌ಸ್ಡಾಗ್ರಾಂನಲ್ಲಿ ಮಗಳ ಜೊತೆಗಿರುವ ಫೋಟೋ ಹಂಚಿಕೊಂಡು ವಿಶೇಷವಾಗಿ ಶುಭ ಹಾರೈಸಿದ ಮಮ್ಮಿ ರಾಧಿಕಾ ಪಂಡಿತ್ (Radhika Pandit).
ಪ್ರತಿ ವರ್ಷವೂ ಐರಾ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವರ್ಷ ತಮ್ಮ ಹೊಸ ಮನೆಯಲ್ಲಿ ಆಪ್ತರ ಜೊತೆ ಆಚರಿಸಿದ್ದಾರೆ.
ಮೂರು ವರ್ಷದ ಐರಾ ಪಿಂಕ್ ಆಂಡ್ ಬ್ಲಾಕ್ ಥೀಮ್‌ನ ಫ್ರಾಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಇದು ಮಿಕ್ಕಿ ಮತ್ತು ಮಿನಿ ಮೌಸ್ ಥೀಮ್‌ನಲ್ಲಿ ಆಚರಣೆ ಮಾಡಲಾಗಿತ್ತು.
ಮನೆಯ ಒಂದು ಭಾಗವನ್ನು ಮಿನಿ ಮೌಸ್ ರೀತಿ ಅಲಂಕರಿಸಿಲಾಗಿತ್ತು. ಹಾಗೆ ಬರ್ತಡೇ ಪಾರ್ಟಿಗೆ ಆಗಮಿಸಿದ ಪುಟ್ಟ ಮಕ್ಕಳಿಗೆ ಮಿಕ್ಕಿ ಮೌಸ್ ರೀತಿ ಕ್ಯಾಪ್ ನೀಡಲಾಗಿತ್ತು.
ಕೆಜಿಎಫ್ ಗರುಡಾ ರಾಮ್, ಶ್ರೀಲೀಲಾ ಮತ್ತು ಅವರು ತಾಯಿ ಸೇರಿದಂತೆ ಹಲವು ಸಿನಿ ಆಪ್ತರು ಬರ್ತಡೇಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಯಶ್ ಸಹೋದರಿ ನಂದಿನಿ ಕೂಡ ಐರಾಳನ್ನು ಮುದ್ದು ಮಾಡುತ್ತಿರುವ ಫೋಟೋ ಹಾಗೂ ಅತ್ತಿಗೆ ರಾಧಿಕಾ ಜೊತೆ ಕ್ಲಿಕ್ ಮಾಡಿಕೊಂಡ ಫೋಟೋ ಹಂಚಿಕೊಂಡಿದ್ದಾರೆ.
Suvarna News