ನಾನು ಅಪ್ಪು ಅಂತಿಮ ದರ್ಶನ ಮಾಡಿದೆನೋ ಇಲ್ವೋ ಅನ್ನೋದು ಪುನೀತ್‌ ಕುಟುಂಬಕ್ಕೆ ಗೊತ್ತು: Radhika Pandit

Suvarna News   | Asianet News
Published : Nov 11, 2021, 11:27 AM ISTUpdated : Nov 11, 2021, 11:50 AM IST

ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳದ ಕಾರಣ ಟ್ರೋಲ್ ಆದ ನಟಿ ರಾಧಿಕಾ ಪಂಡಿತ್. ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುತ್ತಿರುವವರಿಗೆ ಉತ್ತರ ಕೊಟ್ಟಿದ್ದಾರೆ.

PREV
17
ನಾನು ಅಪ್ಪು ಅಂತಿಮ ದರ್ಶನ ಮಾಡಿದೆನೋ ಇಲ್ವೋ ಅನ್ನೋದು ಪುನೀತ್‌ ಕುಟುಂಬಕ್ಕೆ ಗೊತ್ತು: Radhika Pandit

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತು ಪುನೀತ್ ರಾಜ್‌ಕುಮಾರ್ ಒಟ್ಟಿಗೆ 'ಹುಡುಗರು' ಮತ್ತು 'ದೊಡ್ಮನೆ ಹುಡುಗ' ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಬ್ಬರ ಕುಟುಂಬವೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. 

27

ಪುನೀತ್ ಜೊತೆಗಿರುವ ಫೋಟೋ ಹಂಚಿಕೊಂಡು ರಾಧಿಕಾ ಈಗ ಈ ಸತ್ಯ ಒಪ್ಪಿಕೊಳ್ಳಲು ಆಗುತ್ತಿಲ್ಲ, ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಪೋಸ್ಟ್‌ಗೆ ನೆಗಟಿವ್ ಕಾಮೆಂಟ್ ಬರುತ್ತಿವೆ.

37

ನೆಗೆಟಿವ್ ಕಾಮೆಂಟ್‌ಗಳಿಗೆ (Negaitve Comments) ರಾಧಿಕಾ ಉತ್ತರ ನೀಡಿದ್ದಾರೆ. 'ಜೀವನದಲ್ಲಿ (Life) ಆದಷ್ಟು ಒಬ್ಬರ ಮೇಲೆ ಕೋಪ ಇದ್ದರೂ, ಪ್ರಿತಿ (Love) ಹಂಚಿ ತಾಳ್ಮೆ ಇರಲಿ,' ಎಂದಿದ್ದಾರೆ.

47

'ನಾನು ಅಂತಿಮ ದರ್ಶನ ಪಡೆದನೋ ಇಲ್ವೋ ಎಂಬುವುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದರೂ ಮಾತನಾಡುವ ಶಕ್ತಿ ನನಗಿರಲಿಲ್ಲ,' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

57

'ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಿರಲಿಲ್ಲ. ಅಪ್ಪು ಸರ್ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ,' ಎಂದು ಹೇಳಿದ್ದಾರೆ.

67

'ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾಗ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ,' ಎಂದು ಬರೆದುಕೊಂಡಿದ್ದಾರೆ.

77

ರಾಧಿಕಾ ಪಂಡಿತ್ ಅವರ ಮಾತುಗಳನ್ನು ಕೇಳಿ ಅಭಿಮಾನಿಗಳು ಶಾಂತವಾಗಿದ್ದಾರೆ. ನೀವು ಅಂಬಿ ನೋಡಲು ಬರಲಿಲ್ಲ, ಇದಕ್ಕೂ ಬಂದಿಲ್ಲ ಎಂದು ಬೇಸರವಾಗಿತ್ತು. ಹೀಗಾಗಿ ಈ ರೀತಿ ಮಾತನಾಡಿದ್ದಾರೆ, ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories