ನಟಿ ರಾಧಿಕಾ ಕುಮಾರಸ್ವಾಮಿ, ಅರ್ಜುನ್ ಸರ್ಜಾ(Arjun Sarja) ಹಾಗೂ ತೆಲುಗಿನ ಜೆಡಿ ಚಕ್ರವರ್ತಿ ಅಭಿನಯದ ‘ಒಪ್ಪಂದ’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ವರ್ಷಗಳ ಹಿಂದೆ ‘ಕಾಂಟ್ರಾಕ್ಟ್’ ಹೆಸರಿನಲ್ಲಿ ಸೆಟ್ಟೇರಿದ ಚಿತ್ರ ‘ಒಪ್ಪಂದ’ ಎಂದು ಹೆಸರು ಬದಲಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಈ ಚಿತ್ರದ ನಿರ್ದೇಶಕರು ಸಮೀರ್. ಬಹುಭಾಷೆಯಲ್ಲಿ ಈ ಚಿತ್ರ ಮೂಡಿ ಬರುತ್ತಿರುವ ಕಾರಣ ಚಿತ್ರದಲ್ಲೂ ಬೇರೆ ಬೇರೆ ಭಾಷೆಯ ಕಲಾವಿದರನ್ನು ಸಂಯೋಜನೆ ಮಾಡಲಾಗಿದೆ.
ಆಡಿಯೋ ಬಿಡುಗಡೆಗೆ (Audio Release)ನಟಿ ರಾಧಿಕಾ ಕುಮಾರಸ್ವಾಮಿ, ಅರ್ಜುನ್ ಸರ್ಜಾ ಹಾಗೂ ತೆಲುಗಿನ ಜೆಡಿ ಚಕ್ರವರ್ತಿ ಬಂದಿರಲಿಲ್ಲ. ನಿರ್ಮಾಪಕರಾದ ಕೆ ಮಂಜು, ರೆಹಮಾನ್, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯ ಗೌಡ, ಮೋಹಿನಿ ಚೌಧರಿ ಆಡಿಯೋ ಬಿಡುಗಡೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಾಡುಗಳ ಜತೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಿದ್ದು ವಿಶೇಷ. ‘ಚಿತ್ರವನ್ನು ತುಂಬಾ ಅದ್ದೂರಿಯಾಗಿ ಮಾಡಿದ್ದೇವೆ. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರಿಂದ ಚಿತ್ರಕ್ಕೆ ಯಾವುದರಲ್ಲೂ ಕೊರತೆ ಮಾಡಿಲ್ಲ. ನಾಲ್ಕು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ’ ಎಂದು ಸಮೀರ್ ಹೇಳಿಕೊಂಡರು.
ಚಿತ್ರಕ್ಕೆ ಸಂಗೀತ ನೀಡಿರುವುದು ಸುಭಾಷ್ ಆನಂದ್. ಹಾಡುಗಳು ಚೆನ್ನಾಗಿ ಮೂಡಿ ಬಂದಿದ್ದು, ಕೇಳುಗರಿಗೆ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ ಎಂಬುದು ಸಂಗೀತ ನಿರ್ದೇಶಕರ ನಂಬಿಕೆ. ಸೋನಿ ಚರಿಷ್ಟಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಮೀರ್ ಲಾಲ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರತಂಡದ ಮಾತಿನ ನಂತರ ಚಿತ್ರಕ್ಕೆ ಶುಭ ಕೋರಿದ ಅರ್ಜುನ್ ಸರ್ಜಾ ಅವರ ವಿಡಿಯೋ ಸಂದೇಶ ಪ್ರದರ್ಶನ ಮಾಡಲಾಯಿತು.
ಚಿತ್ರದಲ್ಲಿ ಆರು ಹಾಡುಗಳಿವೆ. ನೀವೆಲ್ಲಾ ಈಗ ನೋಡಿದಿರಿ. ಹಾಡುಗಳು ಉತ್ತಮವಾಗಿ ಮೂಡಿ ಬರಲು ಸಹಕಾರಿಯಾದ ಗೀತರಚನೆಕಾರರಿಗೆ, ಗಾಯಕ, ಗಾಯಕಿಯರಿಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಸುಭಾಷ್ ಆನಂದ್.
ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರಂತಹ ನಟರೊಂದಿಗೆ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ನನ್ನ ಧನ್ಯವಾದ ಎಂದರು ನಟಿ ಸೋನಿ ಚರಿಶ್ಟಾ.ಚಿತ್ರದ ಸಹ ನಿರ್ಮಾಪಕ ಶಶಿಧರ್ ಹಾಗೂ ಕಲಾವಿದ ದುಬೈ ರಫಿಕ್ ತಮ್ಮ ಅನುಭವ ಹಂಚಿಕೊಂಡರು.
ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.ಸಮೀರ್ ಅವರೆ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.