ಬರಗೂರು ರಾಮಚಂದ್ರಪ್ಪ ನಿರ್ದೇಶನದ ಕಸ್ತೂರ್ ಬಾ ಜೀವನಾಧಾರಿತ 'ತಾಯಿ ಕಸ್ತೂರ್ ಗಾಂಧಿ' ಚಿತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.
27
ತಾಯಿ ಕಸ್ತೂರ್ ಗಾಂಧಿ ಚಿತ್ರದಲ್ಲಿ ಪ್ರಿಯಾ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಫೋಟೋಶೂಟ್ ಮಾಡಿಸಿದ್ದಾರೆ.
37
ಹರೆಯ, ಮಧ್ಯ ಮಯಸ್ಸು ಹಾಗೂ ಇಳಿ ವಯಸ್ಸಿನ ಕಸ್ತೂರ್ ಬಾ ಪಾತ್ರಗಳನ್ನು ಹರಿಪ್ರಿಯಾ ರಿವೀಲ್ ಮಾಡಿದ್ದಾರೆ. ಫೋಟೋಗಳು ವೈರಲ್ ಆಗುತ್ತಿವೆ.
47
'ಬರಗೂರು ಅವರ ಕಸ್ತೂರ್ ಬಾ ವರ್ಸಸ್ ಗಾಂಧಿ' ಕೃತಿಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದೆ. ಆ ಕಾಲದಲ್ಲಿ ಕಸ್ತೂರಿ ಬಾ ಹೇಗಿದ್ದರು ಎಂದು ರೀಸರ್ಚ್ ಮಾಡಿ, ನನ್ನ ಪಾತ್ರದ ವಸ್ತ್ರ ವಿನ್ಯಾಸ ಲುಕ್ ರೂಪಿಸಲಾಗಿದೆ,' ಎಂದು ಹರಿಪ್ರಿಯಾ ಹೇಳಿದ್ದಾರೆ.
57
'ಗುಜರಾತಿ ಸ್ಟೈಲ್ ಸೀರೆ, ದೊಡ್ಡ ಕುಂಕುಮ ಇತ್ಯಾದಿಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕಸ್ತೂರ್ ಬಾ ಜೀವಿಸಿದ್ದ ಜಾಗಗಳಲ್ಲೇ ಶೂಟಿಂಗ್ ಮಾಡುವ ಪ್ಲಾನ್ ಇತ್ತು,' ಎಂಬದನ್ನೂ ಹರಿಪ್ರಿಯಾ ರಿವೀಲ್ ಮಾಡಿದ್ದಾರೆ.
67
'ಕೊರೋನಾ ವೈರಸ್ ಕಾರಣದಿಂದ ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಕಿಶೋರ್ ಅವರು ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,' ಎಂದಿದ್ದಾರೆ ಹರಿಪ್ರಿಯಾ.
77
ಚಿತ್ರ ಪೋಸ್ಟ್ ಪ್ರೊಡಕ್ಷನ್ (Post Production) ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.