ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ; ಮದುವೆ ಫೋಟೋಗಳು ವೈರಲ್!

Published : May 20, 2022, 04:43 PM IST

ನಟ ಆದಿ ಪಿನಿಸೆಟ್ಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ನಟಿ ನಿಕ್ಕಿ ಗಲ್ರಾನಿ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸುಂದರಿ.

PREV
16
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ; ಮದುವೆ ಫೋಟೋಗಳು ವೈರಲ್!

ಅಜಿತ್, ಜಂಬೂ ಸವಾರಿ ಸಿನಿಮಾ ಮೂಲಕ 2014ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಕ್ಕಿ ಗಲ್ರಾನಿ ಮತ್ತು ತೆಲುಗು ನಟ ಆದಿ ಪಿನಿಸೆಟ್ಟಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

26

ಬುಧವಾರ ಚೆನ್ನೈನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

36

 'ಪ್ರೀತಿ ಆಚರಣೆ. ನಮ್ಮ ಆಪ್ತರು ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ಮದುವೆಯಾಗುವು ಜೀವನ ಪೂರ್ತಿ ಮರೆಯಲಾಗದ ಕ್ಷಣ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ' ಎಂದು ನಿಕ್ಕಿ ಬರೆದುಕೊಂಡಿದ್ದಾರೆ. 

46

ಗೋಲ್ಡ್‌ ಬಣ್ಣದ ಸೀರೆಗೆ ಕೇಸರಿ ಬಣ್ಣದ ಬ್ಲೌಸ್‌ ಧರಿಸಿದ್ದಾರೆ ನಿಕ್ಕಿ. ಆದಿ ಕೂಡ ಗೋಲ್ಡ್‌ ಕಮ್ ಕ್ರೀಮ್‌ ಬಣ್ಣದಲ್ಲಿರುವ ರೇಶ್ಮೆ ಪಂಚೆಯಲ್ಲಿ ಮಿಂಚಿದ್ದಾರೆ.

56

ಇವರಿಬ್ಬರ ಮದುವೆ ವಸ್ತ್ರವನ್ನು ಸಂಪೂರ್ಣವಾಗಿ ಡಿಸೈನ್ ಮಾಡಿರುವುದು ಚೆನ್ನೈನ ಪಾರ್ವತಿ ದಸಾರಿ ಅವರು. ತೆಲುಗು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ನೀರಜ್‌ ಅವರು ಸ್ಟೈಲಿಂಗ್ ಮಾಡಿದ್ದಾರೆ. 

66

ನಿಕ್ಕಿ ಮತ್ತು ಆದಿ ಡೇಟಿಂಗ್ ವಿಚಾರ ದೊಡ್ಡ ಸುದ್ದಿಯಾಗಿತ್ತು.  2020ರಲ್ಲಿ ಆದಿ ತಂದೆ ಹುಟ್ಟುಹಬ್ಬ ಆಚರಣೆಯಲ್ಲಿ ನಿಕ್ಕಿ ಭಾಗಿಯಾಗಿದ್ದರು ಅಂದೇ ಅಭಿಮಾನಿಗಳಿಗೆ ಸಣ್ಣ ಸುಳಿವು ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಇಬ್ಬರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

Read more Photos on
click me!

Recommended Stories