ನೀರೆಂದರೆ ಭಯ ಎನ್ನುತ್ತಿದ್ದ ನಟಿ ಈಗ ಸರ್ಫಿಂಗ್ ಕಲಿಯುತ್ತಿದ್ದಾರೆ; ಏನಿದು ಸ್ಟೋರಿ?

Published : May 20, 2022, 03:12 PM IST

 ಬಾನದಾರಿಯಲ್ಲಿ ರುಕ್ಮಿಣಿ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ. ಡಿಫರೆಂಟ್ ಪಾತ್ರ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

PREV
16
ನೀರೆಂದರೆ ಭಯ ಎನ್ನುತ್ತಿದ್ದ ನಟಿ ಈಗ ಸರ್ಫಿಂಗ್ ಕಲಿಯುತ್ತಿದ್ದಾರೆ; ಏನಿದು ಸ್ಟೋರಿ?

ಪ್ರೀತಮ್‌ ಗುಬ್ಬಿ ನಿರ್ದೇಶನದ, ಗಣೇಶ್‌ ನಟನೆಯ ‘ಬಾನದಾರಿಯಲ್ಲಿ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರುಕ್ಮಿಣಿ ಅವರು ಲೀಲಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

26

ಈ ಚಿತ್ರದಲ್ಲಿ ರುಕ್ಮಿಣಿ (Rukmini Vasanth) ಲೀಲಾ ಸ್ವಿಮ್ಮರ್ ಆಗಿರುವ ಕಾರಣ ರಿಯಲ್ ಲೈಫ್‌ನಲ್ಲಿ ಸರ್ಫಿಲಿಂಗ್ ಕಲಿಯುತ್ತಿದ್ದಾರೆ. ಮೊದಲ ಬಾರಿಗೆ ಪಾತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ. 

36

'ಆರಂಭದಲ್ಲಿ ತುಂಬಾ ಭಯ ಆಯ್ತು ಏಕೆಂದರೆ ಕಣ್ಣೆದ್ದರು ದೊಡ್ಡ ಸಮುದ್ರವಿದೆ, ಸರ್ಫಿಂಗ್ ಬೀಸಿಕ್‌ ಕಲಿತುಕೊಂಡು ನೀರಿನಲ್ಲಿ ನಿಂತರೆ ಎಲ್ಲವೂ ಕೂಲ್ ಆಗಿರುತ್ತದೆ' ಎಂದು ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

46

'ಅಲೆಗಳ ಜೊತೆ ಸರ್ಫಿಂಗ್ ಬೋರ್ಡ್‌ ಮೇಲೆ ನಿಂತುಕೊಂಡಾಗ ಅದೊಂದು exhilarating ಫೀಲಿಂಗ್' ಎಂದ ರುಕ್ಮಿಣಿ ಸರ್ಫಿಂಗ್ ಬೋರ್ಡ್‌ ಜತೆ ಎಂಟರ್‌ ಮತ್ತು ಎಕ್ಸಿಟ್ ಆಗುವುದನ್ನು ಕಲಿತಿದ್ದಾರೆ.

56

'ಲೀಲಾ ಪಾತ್ರಕ್ಕೆ ಸರ್ಫಿಂಗ್ ತುಂಬಾನೇ ಇಷ್ಟ. ಪ್ರತಿಯೊಂದ ದೃಶ್ಯ ರಿಯಲ್ ಆಗಿರಬೇಕೆಂದು ನಾನು ಸರ್ಫಿಂಗ್ ಕ್ಲಾಸ್ ಸೇರಿಕೊಂಡೆ. ಲೀಡಿಂಗ್ ಮ್ಯಾನ್ ಅಗಿ ಗಣೇಶ್ ಅವರು ಸಿನಿಮಾದಲ್ಲಿ ಸರ್ಫ್ ಮಾಡುತ್ತಾರೆ' ಎಂದಿದ್ದಾರೆ ರುಶ್ಮಿಣಿ.

66

 'ನಾನು ಸ್ವಿಮ್ಮಿಂಗ್ ಮಾಡುತ್ತೇನೆ ಆದರೆ ನೀರೆಂದರೆ ಭಯ ಏಕೆಂದರೆ ಕೆಲವು ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ಸ್ಕೂಬಾ ಡೈವಿಂಗ್ ಕರೆದೊಯ್ದಿದ್ದರು ಇದರಿಂದ ಫೋಬಿಯಾದಿಂದ ಹೊರ ಬರಲು ಸಾಧ್ಯವಾಯಿತ್ತು'

Read more Photos on
click me!

Recommended Stories