ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಇಂದು ಎರಡನೇ ವಿವಾಹ ವಾರ್ಷಿಕೋತ್ಸ ಆಚರಿಸಿಕೊಳ್ಳುತ್ತಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ಮತ್ತು ಪುತ್ರನ ಜೊತೆ ಬೀಚ್ ಬಳಿ ನಿಂತುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಪುತ್ರನನ್ನು ಆಟವಾಡಿಸುತ್ತಿದ್ದಾರೆ.
'ಎರಡು ವರ್ಷಗಳ togetherness. ನೀನು ನನ್ನ ಜೀವನವನ್ನು ಕಂಪ್ಲೀಟ್ ಮಾಡುತ್ತೀಯಾ ಲವ್' ಎಂದು ಪತ್ನಿಗೆ ಹೇಳಿದ್ದಾರೆ. ಮಗನಿಗೆ ಲವ್ ಯು ಮಗನೇ ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ರೇವತಿ ನಿಖಿಲ್ ಹೆಗಲೆ ಮೇಲೆ ಮಲಗಿಕೊಂಡು ಪ್ರಕೃತಿ ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ನೀವು ಬೆಸ್ಟ್ ಕಪಲ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅದಕ್ಕೂ ಮುನ್ನ ನಿಖಿಲ್ ಹಸಿರು ಬಣ್ಣದ ಜೀಪ್ ಖರೀದಿಸಿದ್ದಾರೆ. ಜೀಪ್ ಮೇಲೆ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಔಟ್‌ಫಿಟ್ ಧರಿಸಿ ಫೋಸ್ ಕೊಟ್ಟಿದ್ದಾರೆ.
ಏಪ್ರಿಲ್ 19, 2020ರಲ್ಲಿ ನಿಖಿಲ್ ಮತ್ತು ರೇವತಿ ಬಿಡದಿ ಫಾರ್ಮ್‌ಹೌಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೆಪ್ಟೆಂಬರ್ 24,2021ರಲ್ಲಿ ಪುತ್ರನನ್ನು ಬರ ಮಾಡಿಕೊಂಡರು.
ರೈಡರ್ ಚಿತ್ರದ ಯಶಸ್ಸಿನ ನಂತರ ನಿಖಿಲ್ ಯದುವೀರ್ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಇದರ ಜೊತೆಗೆ ರಾಜಕೀಯ ಕೆಲಸ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.