ಕನ್ನಡ ಚಿತ್ರರಂಗದ ಸುಂದರಿ ನಟಿ ಅನು ಪ್ರಭಾಕರ್ ಮತ್ತು ತೆರೆ ಮೇಲೆ ಮಿಂಚುವ ಖಡಕ್ ಕಾಪ್ ಕಮ್ ಮಾಡಲ್ ರಘು ಮುಖರ್ಜಿ ಅವರ ಮುದ್ದಿನ ಮಗಳು ನಂದನಾ.
ನಂದನಾ ಪ್ರಭಾಕರ್ ಮುಖರ್ಜಿಗೆ ಈಗ ಮೂರು ವರ್ಷ ಎಂಟು ತಿಂಗಳು. ಫೋಷಕರು ಮತ್ತು ಸ್ನೇಹಿತೆಯರ ಜೊತೆ ಮೊದಲ ಸಫಾರಿ ಎಂಜಾಯ್ ಮಾಡಿದ್ದಾರೆ.
ಬಂಡಿಪುರ ಅರಣ್ಯದಲ್ಲಿ ಮೊದಲ ಜೀಪ್ ಸವಾರಿ ಮಾಡಿದ ನಂತರ ಫೋಟೋಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಚಿರತೆ ಮತ್ತು ನರಿ ಫೋಟೋ ಹಂಚಿಕೊಂಡಿದ್ದಾರೆ.
'ನಂದನಾಳ ಮೊದಲನೇ ಸಫಾರಿ ಅನುಭವ. ತನ್ನ ವಯಸ್ಸಿಗೆ ಮೀರಿದ ತಾಳ್ಮೆ ತೋರಿಸಿದ ನಮ್ಮ ಮಗಳು' ಎಂದು ಅನು ಪ್ರಭಾಕರ್ ಬರೆದುಕೊಂಡಿದ್ದಾರೆ.
2021ರಲ್ಲಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಗೌರವಾನ್ವಿತ ರಾಯಭಾರಿಗಳಾಗಿದ್ದಾರೆ.
ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದು ಹೇಗೆ, ಯಾವ ಸ್ಕೀಮ್ ಹೇಗೆ ವರ್ಕ್ ಆಗುತ್ತದೆ ಹಾಗೂ ಮೃಗಾಲಯಗಳನ್ನು ಉಳಿಸುವುದಕ್ಕೆ ಸಾರ್ವಜನಿಕರು ಯಾವ ರೀತಿ ಸಹಕರಿಸಬಹುದು ಎಂಬ ಮಹತ್ವ ಸಾರಲಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜಡ್ಜ್ ಆಗಿ ಅನು ಪ್ರಭಾಕರ್ ಕಾಣಿಸಿಕೊಂಡಾಗ ನಂದನಾ ಅಮ್ಮನಿಗೆ ಸ್ಪೆಷಲ್ ಗಿಫ್ಟ್ ಹಿಡಿದುಕೊಂಡು ವೇದಿಕೆ ಮೇಲೆ ಮೊದಲ ಸಲ ಕಾಣಿಸಿಕೊಂಡಿದ್ದಳು.
ನಂದನಾ ಪ್ರಭಾಕರ್ ಮುಖರ್ಜಿ ಕೂಡ ಸೆಲೆಬ್ರಿಟಿ ಕಿಡ್‌ಗಳ ಪಟ್ಟಿ ಸೇರಿಕೊಂಡಿದಾಳೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಂದನಾ ಬೇಬಿ ನಂದು ಆಗಿ ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ.