Kannada Cinema: ಮಾಟ-ಮಂತ್ರದ ವಿರುದ್ಧ ದೈವಿಕ ಶಕ್ತಿಯ ಹೋರಾಟವನ್ನು ಚಿತ್ರಿಸುವ ಚಿತ್ರವು 1981 ರಲ್ಲಿ ಬಿಡುಗಡೆಯಾಯಿತು. ದುಷ್ಟ ಮಂತ್ರವಾದಿಯ ವಿರುದ್ಧ ನಾಯಕನ ಹೋರಾಟ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳು ಭಯಾನಕವಾಗಿವೆ.
ಮಾಟ, ಮಂತ್ರ-ತಂತ್ರ ಇದೆಯಾ ಎಂಬುದರ ಬಗ್ಗೆ ಎಲ್ಲರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಆದ್ರೂ ಈ ಮಾಟ ಮಂತ್ರ ವರ್ಸಸ್ ದೈವಿಕ ಶಕ್ತಿ ಎಂಬ ಕಥೆಯಡಿಯಲ್ಲಿ ಹಲವು ಸಿನಿಮಾಗಳು ಬಂದಿವೆ. ಕೇವಲ ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಈ ರೀತಿ ಕಥೆಯನ್ನಾಧರಿಸಿದ ಸಿನಿಮಾಗಳಿವೆ. ಮಾಟ, ಮಂತ್ರ ದುಷ್ಟನ ಕೈವಶವಾದ್ರೆ ಏನಾಗುತ್ತೆ ಎಂಬುದರ ಮೇಲೆ ಕನ್ನಡದಲ್ಲಿ ಸಿನಿಮಾವೊಂದಿದೆ. ಈ ಸಿನಿಮಾ ನೋಡಲು ಕೊಂಚ ಧೈರ್ಯ ಬೇಕೇ ಬೇಕು.
26
1981ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ನಿಮ್ಮನ್ನು ಸೈಕ್ ಮಾಡುತ್ತದೆ. ಎಚ್.ವಿ.ಸುಬ್ಬರಾವ್ ಅವರ ಕತೆಗೆ ಮಣಿಮುರುಗನ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಹೀರೋನ ಪಾತ್ರದಷ್ಟೇ ವಿಲನ್ ರೋಲ್‌ಗೆ ತೂಕವಿತ್ತು. ದುಷ್ಟ ಮಂತ್ರವಾದಿಯಾಗಿ ನಟ ಸುಂದರ ಕೃಷ್ಣ ಅರಸ್ ನಟಿಸಿದ್ದರು. ಸುಂದರ ಕೃಷ್ಣ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ವಿಶೇಷವಾಗಿ ಕಾಣುತ್ತದೆ.
36
ನಾವು ಹೇಳುತ್ತಿರೋದು ಶ್ರೀನಾಥ್ ಮತ್ತು ಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ನಟಿಸಿದ ಚಿತ್ರ ಏಟು ಎದರೇಟು. ಮಾಟ, ಮಂತ್ರ-ತಂತ್ರಗಳನ್ನು ಕೈವಶ ಮಾಡಿಕೊಂಡ ಮಂತ್ರವಾದಿ ಗ್ರಾಮವೊಂದಕ್ಕೆ ಬಂದು ತನ್ನದೇ ಆದ ಆದಿಪತ್ಯ ಸ್ಥಾಪಿಸಿಕೊಂಡಿರುತ್ತಾನೆ. ಮಂತ್ರವಾದಿ ಉಗ್ರಯ್ಯನಾಗಿ ಸುಂದರ ಕೃಷ್ಣ ಅರಸ್ ನಟಿಸಿದ್ದಾರೆ. ಈ ಗ್ರಾಮದಲ್ಲಿ ತನ್ನ ಮನೆ ಮುಂದೆ ಯಾರು ಚಪ್ಪಲಿ ಹಾಕಿಕೊಂಡು ಧರಿಸಬಾರದು ಎಂಬ ನಿಯಮವನ್ನು ಮಾಡಿರುತ್ತಾನೆ. ಚಪ್ಪಲಿ ಧರಿಸಿ ಓಡಾಡಿದ್ರೆ ತನ್ನ ಮಂತ್ರ ಶಕ್ತಿಗಳಿಂದ ಶಿಕ್ಷೆ ನೀಡುತ್ತಿರುತ್ತಾನೆ. ಇದೇ ರೀತಿ ಹಲವು ಕಾನೂನುಗಳನ್ನು ಮಾಡಿಕೊಂಡು, ಮುಗ್ಧ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುತ್ತಾನೆ.
ನಾಯಕ ನಟ ಶ್ರೀನಾಥ್ ವಿದೇಶದಲ್ಲಿ ಓದಿಕೊಂಡು ಬಂದಿರುತ್ತಾನೆ. ಉಗ್ರಯ್ಯನ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಮಾತು ಕಳೆದುಕೊಂಡು ಮೂಗನಾಗುತ್ತಾನೆ. ಉಗ್ರಯ್ಯನನ್ನು ಸೋಲಿಸಲು ಆಂಜನೇಯನ ಮೊರೆ ಹೋಗುತ್ತಾನೆ. ಆಂಜನೇಯನಿಂದ ಶಕ್ತಿ ಪಡೆದುಕೊಂಡ ಶ್ರೀನಾಥ್ ಗ್ರಾಮಕ್ಕೆ ಹಿಂದಿರುಗಿ ಉಗ್ರಯ್ಯನನ್ನು ತಂತ್ರ ವಿದ್ಯೆಯಲ್ಲಿ ಸೋಲಿಸುತ್ತಾನೆ. ನಂತರ ಆತನಲ್ಲಿರುವ ತಂತ್ರವಿದ್ಯೆಗಳನ್ನು ನಾಶಗೊಳಿಸಿ ಉಗ್ರಯ್ಯನನ್ನು ಗ್ರಾಮದಿಂದ ಹೊರ ಹಾಕುತ್ತಾನೆ.
56
ಇದಾದ ನಂತರ ಶ್ರೀನಾಥ್ ಸಹ ಪೊಲೀಸ್ ಅಧಿಕಾರಿಯಾಗಿ ಗ್ರಾಮದಿಂದ ಪಟ್ಟಣಕ್ಕೆ ಶಿಫ್ಟ್ ಆಗುತ್ತಾನೆ. ತನ್ನೆಲ್ಲಾ ಶಕ್ತಿ ಕಳೆದುಕೊಂಡು ಗ್ರಾಮದಿಂದ ಹೊರದೂಡಲ್ಪಟ್ದ ಉಗ್ರಯ್ಯ, ಮತ್ತೆ ತಂತ್ರಗಳನ್ನು ತನ್ನ ಕೈವಶ ಮಾಡಿಕೊಳ್ಳಲು ವಿವಿಧ ಪೂಜೆಗಳನ್ನು ಮಾಡುತ್ತಾನೆ. ಉಗ್ರಯ್ಯ ಮಾಡುವ ಭಯಾನಕ ಪೂಜೆಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ.
66
ಭಯಾನಕ ಪೂಜೆಗಳಿಂದ ಶಕ್ತಿವಂತನಾಗುವ ಉಗ್ರಯ್ಯ, ಮತ್ತೆ ಹೀರೋ ವಾಸವಾಗಿರುವ ಮನೆಗೆ ಬರುತ್ತಾನೆ. ಚಿತ್ರದ ಕೊನೆಯ 15 ನಿಮಿಷಗಳು ನಿಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಇನ್ನು ಚಿತ್ರದ ಆರಂಭದಲ್ಲಿ ಮುದ್ದಾಗಿ ಕಾಣಿಸಿಕೊಳ್ಳವ ಲಕ್ಷ್ಮೀ ಅವರು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಿಮ್ಮ ಎದೆಬಡಿತವನ್ನು ಹೆಚ್ಚಿಸುತ್ತಾರೆ. ಏಟು ಎದರೇಟು ಸಿನಿಮಾ ಯುಟ್ಯೂಬ್‌ನಲ್ಲಿ ಲಭ್ಯವಿದೆ.