ಸ್ಯಾಂಡಲ್ ವುಡ್ ಗೆ ಅನುಶ್ರೀ ಕಂ ಬ್ಯಾಕ್ ಮಾಡುತ್ತಿದ್ದಾರೆ. ಜನಪ್ರಿಯ ಕಾರ್ಯಕ್ರಮ ಸರಿಗಮಪ ಕನ್ನಡದ ನಿರೂಪಕಿಯಾಗಿರುವ ಅನುಶ್ರೀ ಹೊಸ ಪ್ರಾಜೆಕ್ಟ್ ಒಂದನ್ನು ಒಪ್ಪಿಕೊಂಡಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದ ಮಮ್ಮಿ ಮತ್ತು ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ್ ಗರಡಿಯಲ್ಲಿ ಪಳಗಿರುವ ಪ್ರಭಾಕರನ್ ನಿರ್ದೇಶನದ ಸಿನಿಮಾದಲ್ಲಿ ಅನುಶ್ರೀ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
Anushree
ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳು ಈ ಚಿತ್ರದಲ್ಲಿ ಇರಲಿವೆ. ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಯತ್ನ ಇದಾಗಲಿದೆ ಎನ್ನುವುದು ಚಿತ್ರತಂಡದ ಮಾತು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ..
ದಕ್ಷಿಣ ಕನ್ನಡ ಮೂಲದ ಹುಡುಗಿ ಅನುಶ್ರೀ ನಿರೂಪಕಿಯಾಗಿ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡರು. ‘ಭೂಮಿ ತಾಯಿ’, 2012ರ ‘ಬೆಳ್ಳಿ ಕಿರಣ’, 2015ರಲ್ಲಿ ಬಿಡುಗಡೆಯಾದ ‘ಬೆಂಕಿಪಟ್ಣ’, ‘ರಿಂಗ್ ಮಾಸ್ಟರ್’, ‘ಉತ್ತಮ ವಿಲನ್’, ‘ಮಾದ ಮತ್ತು ಮಾನಸಿ’, ‘ಉಪ್ಪು ಹುಳಿ ಖಾರ’ ಸಿನಿಮಾಗಳಲ್ಲಿ ಅನುಶ್ರೀ ಪಾತ್ರ ನಿರ್ವಹಿಸಿದ್ದಾರೆ.
ಸಣ್ಣ ಗ್ಯಾಪ್ ನಂತರ ಅನುಶ್ರೀ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಿಂಗ್ ಮಾಸ್ಟರ್ ಚಿತ್ರದಲ್ಲಿ ಕಲಾವಿದ ಅರುಣ್ ಸಾಗರ್ ಜತೆ ಕಾಣಿಸಿಕೊಂಡಿದ್ದರು.
ಕೇವಲ ನಿರೂಪಕಿ ಮಾತ್ರವಲ್ಲದೆ ಅನುಶ್ರೀ ತಮ್ಮದೇ ಯೂಟ್ಯೂಬ್ ವಾಹಿನಿ ಮೂಲಕವೂ ವಿಶಿಷ್ಟ ಕಾರ್ಯಕ್ರಮಗಳನ್ನು, ಸಂದರ್ಶನಗಳನ್ನು ನೀಡಿಕೊಂಡು ಬಂದವರು.