ಕೆಜಿಎಫ್ ಚಾಪ್ಟರ್ 1 ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಿಸ್ ಸುಪ್ರಾನ್ಯಾಷನಲ್ 2016 ಶ್ರೀನಿಧಿ ಶೆಟ್ಟಿ ಈಗ ಸಖತ್ ಬ್ಯುಸಿಯಾಗಿದ್ದಾರೆ.
ಕೆಜಿಎಫ್ 1 ಮತ್ತು 2ರ ರೀನಾ ದೇಸಾಯಿ ಉರ್ಫ್ ಶ್ರೀನಿಧಿ ಶೆಟ್ಟಿ ಟ್ರೆಡಿಷನಲ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಳ್ಳುತ್ತಾರೆ. ಆಗಾಗ ಪೋಟೋ ಅಪ್ಲೋಡ್ ಮಾಡುತ್ತಾರೆ.
ಇತ್ತೀಚಿಗೆ ರಾಜಾಜಿನಗರದಲ್ಲಿ ಇರುವ ಚಿನ್ನದ ಅಂಗಡಿ ಓಪನಿಂಗ್ ಕಾರ್ಯಕ್ರಮಕ್ಕೆ ಶ್ರೀನಿಧಿ ಶೆಟ್ಟಿ ವಿಶೇಷ ಅತಿಥಿಯಾಗಿ ಆಗಮಿಸಿ ಗ್ರಾಂಡ್ ಓಪನಿಂಗ್ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಿಂಕ್ ಬಣ್ಣದ ಸೀರೆ ಧರಿಸಿದ್ದಾರೆ. ಇದಕ್ಕೆ ಸುಮಾರು 100 ಗ್ರಾಂ ಇರುವ ಆಂಟಿಕ್ ಚಿನ್ನದರ ನೆಕ್‌ಲೇಸ್ ಧರಿಸಿದ್ದಾರೆ.
ಪಡ್ಡೆ ಹುಡುಗರಿಗೆ ಶ್ರೀನಿಧಿ ನೆಕ್‌ಲೇಸ್ ಮೇಲೆ ಕಣ್ಣು ಆದರೆ ಹೆಣ್ಣುಮಕ್ಕಳು ಕಿವಿ ಓಲೆ ಎಷ್ಟು ಗ್ರಾಂ ಇದೆ, ಕೈಯಲ್ಲಿರುವ ಉಂಗುರ ಯಾವ ಡಿಸೈನ್ ಎಂದು ಗಮನಿಸುತ್ತಿದ್ದಾರೆ.
ಇದೊಂದು ಸರ ನಮ್ಮ ಕೈಗೆ ಸಿಕ್ಕರೆ ಸ್ವಲ್ಪ ಸಾಲ ತೀರಿಸಬಹುದು ಹೇಗಾದ್ರೂ ಮಾಡಿ ಕದಿಬೇಕು ಎಂದು ನೆಟ್ಟಿಗರು ಕಾಮೆಂಟ್ಸ್‌ನಲ್ಲಿ ತಮಾಷೆ ಮಾಡಿದ್ದಾರೆ.
Vaishnavi Chandrashekar