ಮಳೆ ಬಂದ್ರೂ ಸೆಕೆ ನಿಲ್ಲದ್ದಕ್ಕೆ ಆಶಿಕಾ ರಂಗನಾಥ್ ಬೋಲ್ಡ್ ಬ್ಲ್ಯಾಕ್ ಡ್ರೆಸ್ ಲುಕ್ಕೇ ಕಾರಣವಂತೆ!

Published : May 21, 2024, 03:41 PM IST

ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಸೀರಿಸ್ ಒಂದನ್ನು ಅಪ್ ಲೋಡ್ ಮಾಡಿದ್ದು, ಬ್ಲ್ಯಾಕ್ ಬಾಡಿ ಹಗ್ಗಿಂಗ್ ಸೂಟ್ ನಲ್ಲಿ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.   

PREV
17
ಮಳೆ ಬಂದ್ರೂ ಸೆಕೆ ನಿಲ್ಲದ್ದಕ್ಕೆ ಆಶಿಕಾ ರಂಗನಾಥ್ ಬೋಲ್ಡ್ ಬ್ಲ್ಯಾಕ್ ಡ್ರೆಸ್ ಲುಕ್ಕೇ ಕಾರಣವಂತೆ!

ಸ್ಯಾಂಡಲ್ ವುಡ್ ಚುಟು ಚುಟು ಬೆಡಗಿ ಅಂತಾನೆ ಫೇಮಸ್ ಆಗಿರುವ ನಟಿ ಆಶಿಕಾ ರಂಗನಾಥ್ (Ashika Ranganath) ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕವೇ ಇಂಟರ್ನೆಟ್ ನಲ್ಲಿ ಬಿಸಿ ಹೆಚ್ಚಿಸಿದ್ದಾರೆ. ಈ ಫೋಟೋಗಳಿಗೆ ಇಂಟರ್ನೆಟ್ ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 
 

27

ಕಪ್ಪು ಬಣ್ಣದ ಥೈ ಹೈ ಸ್ಲಿಟ್ ಇರುವ ಬಾಡಿ ಹಗ್ಗಿಂಗ್ ಸೂಟ್ ಧರಿಸಿ, ಸಖತ್ ಬೋಲ್ಡ್ ಲುಕ್ ನಲ್ಲಿ ವಿವಿಧ ಮಾದಕ ಭಂಗಿಯಲ್ಲಿ ಪೋಸ್ ನೀಡಿರುವ ಆಶಿಕಾ Time to set the screen on fire ಎಂದು ಬರೆದುಕೊಂಡಿದ್ದಾರೆ. 
 

37

ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಆಶಿಕಾ ರಂಗನಾಥ್ ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ ಶೂಟ್ ನಿಂದಾನೇ ಸುದ್ದಿಯಲ್ಲಿರುತ್ತಾರೆ. ಮಾಡರ್ನ್ ಹಾಗೂ ಟ್ರೆಡಿಶನರ್ ವೇರ್ ಎರಡಕ್ಕೂ ಸೈ ಎನಿಸುತ್ತಾರೆ ಆಶಿಕಾ. 
 

47

ಚೇರ್ ಮೇಲೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿರುವ ಆಶಿಕಾ ಸ್ಟೈಲ್ ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಇಷ್ಟು ಜೋರಾಗಿ ಮಳೆ ಬಂದ್ರುನೂ ಇಷ್ಟು ಸೆಕೆ ಯಾಕೆ ಅಂತಾ ನಿಮ್ಮ ಫೋಟೊ ನೋಡಿದ ಮೇಲೆ ಗೊತ್ತಾಯ್ತು ಅಂದಿದ್ದಾರೆ. ಇನ್ನೂ ಕೆಲವರು ಇವತ್ತು ಪಡ್ಡೆ ಹೈಕಳಿಗೆ ನಿದ್ದೆ ಇಲ್ಲ ಎಂದಿದ್ದಾರೆ. 
 

57

ಇನ್ನೂ ಹೆಚ್ಚಿನ ಜನರು ಫೈರ್ ಇಮೋಜಿಯನ್ನು ಶೇರ್ ಮಾಡಿದ್ದು, ಮತ್ತೆ ಕೆಲವರು ಬಾಂಬ್  ಎಂದರೆ ಇನ್ನೊಬ್ಬರು ಪದಗಳಿಲ್ಲ ಬರೆಯಲು..ಕವಿತೆ ಸಾಲದು ನಿನ್ನ ಹೊಗಳಲು.. ಇನ್ನು ಏನಿದೆ ನಾ ಹೇಳಲು..ಎಂದೆಲ್ಲಾ ಹೇಳಿದ್ದಾರೆ. ಇಷ್ಟೊಂದು ಬೋಲ್ಡ್ ಅದ್ರೆ ಕಷ್ಟ ಮೇಡಂ ಎಂದು ಸಹ ಹೇಳಿದ್ದಾರೆ. 
 

67

ಇನ್ನೂ ಆಶಿಕಾ ಫೋಟೋಗಳಿಗೆ ನೆಗೆಟಿವ್ ಕಾಮೆಂಟ್ (negative comment) ಕೂಡ ಬಂದಿದ್ದು, ಈ ರೀಲ್ಸ್‌ನಿಂದ ಜನರಿಗೆ ಏನು ಸಂದೇಶ ಸಾರುತ್ತದೆ? ಇದು ಅಕ್ಷರಶಃ ಕಾಮಪ್ರಚೋದಕ ಅಲ್ಲವೇ? ಇದ್ರಲ್ಲಿ ಸಮಾಜಕ್ಕೆ ಏನಾದ್ರೂ ಉಪಯೋಗ ಇದೀಯ? ತುಂಡು ಬಟ್ಟೆಗಳನ್ನು ಉಟ್ಟು ಈ ರೀತಿ ಸೋಶಿಯಲ್ ಮೀಡಿಯಾ likes ಅನಿವಾರ್ಯವೇ? ಎಂದು ಆಶಿಕಾರನ್ನು ಪ್ರಶ್ನಿಸಿದ್ದಾರೆ. 
 

77

ಸದ್ಯ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ಆಶಿಕಾ ಅಭಿನಯದ O2 ಸಿನಿಮಾ ಜನರನ್ನು ಚಿತ್ರರಂಗದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇನ್ನು ಈ ಬ್ಯೂಟಿ ಕನ್ನಡದಲ್ಲಿ ಗತವೈಭವ, ತೆಲುಗಿನಲ್ಲಿ ವಿಶ್ವಂಭರ ಸಿನಿಮಾಗಳಲ್ಲಿ ನಟಿಸಲಿದ್ದಾರೆ. 
 

Read more Photos on
click me!

Recommended Stories