ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ ಕೆರೆಬೇಟೆ ಸಿನಿಮಾ ಈಗ OTT ಅಲ್ಲಿ ಲಭ್ಯ!

Published : May 03, 2025, 04:01 PM ISTUpdated : May 05, 2025, 12:13 PM IST

ಕನ್ನಡದಲ್ಲಿ ತೆರೆ ಕಂಡು ಸಾಕಷ್ಟು ಜನರ ಮನಸ್ಸು ಗೆದ್ದಿದ್ದ ʼಕೆರೆಬೇಟೆʼ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ. 

PREV
16
ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ ಕೆರೆಬೇಟೆ ಸಿನಿಮಾ ಈಗ OTT ಅಲ್ಲಿ ಲಭ್ಯ!

ಬಿಂದು ಶಿವರಾಮ್‌, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್‌ ಗೌರಿ ಶಂಕರ್‌ ಸಂಪತ್‌ ಮೈತ್ರೇಯ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜ್‌ಗುರು ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.  
 

26

ಮಲೆನಾಡು ಸೊಗಡಿನ, ಹಚ್ಚ ಹಸಿರು ಪರಿಸರವುಳ್ಳ ಕಥೆ ಈ ಸಿನಿಮಾದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಕಥೆ ಇಲ್ಲಿದೆ. ಯಾರಿಗೂ ಕ್ಯಾರೇ ಎನ್ನದ ಹೀರೋ ಹುಲಿಮನೆ ನಾಗನಿಗೆ ಮೀನಾ ಮೇಲೆ ಲವ್‌ ಆಗುತ್ತದೆ. ಈ ಲವ್‌ ವಿಚಾರ ಗೊತ್ತಾದರೆ, ದೊಡ್ಡ ರಾದ್ಧಾಂತ ಆಗುವುದು. ಆಮೇಲೆ ಏನಾಗುತ್ತದೆ ಎಂದು ಸಿನಿಮಾದಲ್ಲಿ ನೋಡಿ ತಿಳಿದುಕೊಳ್ಳಬೇಕು. 

36

ಇಲ್ಲಿ ಹೀರೋನಿಗೆ ಎರಡು ಶೇಡ್‌ ಇದೆ. ಇನ್ನು ಕ್ಲೈಮ್ಯಾಕ್ಸ್‌ ಕೂಡ ಸಖತ್‌ ಆಗಿದೆ. ಸಾಕಷ್ಟು ಕುತೂಹಲಗಳು ಇಲ್ಲಿವೆ. ಈ ಸಿನಿಮಾವನ್ನು ಅನೇಕರು ನೋಡಿ ಇಷ್ಟಪಟ್ಟಿದ್ದಾರೆ. 

46

ಶಿವಮೊಗ್ಗದ ಸೊರಬ, ಸಾಗರದಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆದಿದೆ. ಇನ್ನು ಗೋಪಾಲಕೃಷ್ಣ ದೇಶಪಾಂಡೆ ಕೂಡ ಸಖತ್‌ ಆಗಿ ನಟಿಸಿದ್ದಾರೆ. ಸಂಭಾಷಣೆ ಕೂಡ ಡಿಫರೆಂಟ್‌ ಆಗಿದೆ.

56


ಈ ಸಿನಿಮಾವನ್ನು ಕೆಲವರು ಥಿಯೇಟರ್‌ನಲ್ಲಿ ನೋಡೋದನ್ನು ಮಿಸ್‌ ಮಾಡಿಕೊಂಡಿದ್ದಾರೆ. ಆದರೆ ಈಗ ಸಿನಿಮಾ ಮಿಸ್‌ ಮಾಡಿಕೊಂಡವರಿಗೆ ಒಳ್ಳೆಯ ಅವಕಾಶ ಇದೆ. 

66

ಕೆರೆಬೇಟೆ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷದ ನಂತರ AMAZONE PRIME VIDEOS ಅಲ್ಲಿ ನಿನ್ನೆಯಿಂದ rental ನಲ್ಲಿ ಪ್ರಸಾರವಾಗುತ್ತಿದೆ, ನಿಮಗೆ ಮುಂಚೆಯೇ ತಿಳಿಸಿರುವಂತೆ ನಮ್ಮ ಸಿನಿಮಾದ ಎಲ್ಲಾ ಭಾಷೆಯ ಎಲ್ಲಾ ವಿಧದ ಪ್ರಸಾರದ ಹಕ್ಕನ್ನು ಹಿಂದಿಯ ಪ್ರತಿಷ್ಠಿತ , GOLD MINES ಸಂಸ್ಥೆ ಪಡೆದುಕೊಂಡಿತ್ತು.

Read more Photos on
click me!

Recommended Stories