ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’ ಸಿನಿಮಾದ ಶೂಟಿಂಗ್ ಹೇಗೆ ನಡೆಯುತ್ತಿದೆ ಎಂಬ ಗ್ಲಿಂಪ್ಸ್ ಅನ್ನು ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಚಿತ್ರತಂಡದ ಬಿಗಿ ಬಂದೋಬಸ್ತ್ ಗಮನ ಸೆಳೆದಿದೆ.
26
ಸಿನಿಮಾದ ಯಾವೊಂದು ಅಂಶವೂ ಹೊರ ಜಗತ್ತಿಗೆ ತಿಳಿಯದಂತೆ ಸೆಟ್‌ನ ಒಳಬರುವ ಪ್ರತಿಯೊಬ್ಬರನ್ನೂ ಸಂಪೂರ್ಣ ತಪಾಸಣೆ ಮೊಬೈಲ್ ಅಥವಾ ಕ್ಯಾಮರಾ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಒಳಗೆ ಬಿಡಲಾಗುತ್ತಿದೆ.
36
ಅಲ್ಲದೇ ಬಿಲ್ಲ ರಂಗ ಬಾಷ ಚಿತ್ರೀಕರಣದ ಭಾಗವಾಗಿರುವ ಪ್ರತಿಯೊಬ್ಬ ತಂತ್ರಜ್ಞರಿಗೂ ಐಡಿ ಕಾರ್ಡ್ ನೀಡಲಾಗಿದ್ದು, ಒಳ ಹೋಗಲು ಈ ಗುರುತಿನ ಕಾರ್ಡ್ ಕಡ್ಡಾಯ.
ಸುದೀಪ್, ಅನೂಪ್ ಭಂಡಾರಿ ಶೂಟಿಂಗ್‌ಗೆ ಎಂಟ್ರಿ ಕೊಡುತ್ತಿರುವ ಕ್ಷಣಗಳನ್ನೂ ಸೆರೆ ಹಿಡಿಯಲಾಗಿದೆ. ಈಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಬಿಲ್ಲ ರಂಗ ಬಾಷ’ ಶೂಟಿಂಗ್ ನಡೆಯುತ್ತಿದೆ.
56
ನಿರ್ದೇಶಕ ಅನೂಪ್ ಭಂಡಾರಿ, ನಮ್ಮ ನಿರೀಕ್ಷೆಯಂತೆ ಸಿನಿಮಾ ಸೆಟ್ಟೇರುತ್ತಿದೆ. ಮೊದಲ ಹಂತದಲ್ಲಿ ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲಿದ್ದೇವೆ. ಇದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿದ್ದೇವೆ.
66
ನಂತರ ಸಣ್ಣ ಬ್ರೇಕ್ ತೆಗೆದುಕೊಂಡು ಮುಂದಿನ ಹಂತದ ಚಿತ್ರೀಕರಣಕ್ಕೆ ರೆಡಿಯಾಗುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಸಿದ್ಧಗೊಳಿಸಲಾಗಿರುವ ಸೆಟ್‌ನಲ್ಲಿ ಚಿತ್ರೀಕರಣ ಆರಂಭವಾಗಿದೆ.