ಕನ್ನಡ ಚಿತ್ರರಂಗದಲ್ಲಿ ಅತೀ ಕಡಿಮೆ ಕಾಲಾವಧಿ ಬದುಕಿದ ಸ್ಟಾರ್ ನಟಿಯರು

First Published Apr 30, 2024, 8:15 PM IST

ಕನ್ನಡ ಸಿನಿಮಾದಲ್ಲಿ ಸಾವಿರಾರು ನಾಯಕಿಯರು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿ ಕಣ್ಮರೆಯಾಗಿದ್ದಾರೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವಾಗಲೇ ಶಾಶ್ವತವಾಗಿ ಜೀವನದ ಪಯಣವನ್ನೇ ಮುಗಿಸಿದ ನಟಿಯರು ಯಾರು ಗೊತ್ತಾ? ಇಲ್ಲಿದೆ ನೋಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಕಡಿಮೆ ಕಾಲಾವಧಿ ಬದುಕಿದ ನಟಿಯರ ಪಟ್ಟಿ...
 

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧಿ ಪಡೆದಿದ್ದ ನಟಿ ಸೌಂದರ್ಯ. ಹೆಸರಿಗೆ ತಕ್ಕಂತೆ ಸುಂದರಿಯಾಗಿದ್ದ ಸೌಂದರ್ಯ (Soundarya) ಉತ್ತುಂಗದಲ್ಲಿರುವಾಗಲೇ ರಾಜಕೀಯ ಸಮಾವೇಶಕ್ಕೆ ವಿಮಾನದಲ್ಲಿ ತೆರಳುವಾಗ ವಿಮಾನ ಅಪಘಾತವಾಗಿ ದಾರುಣ ಸಾವನ್ನಪ್ಪಿದ್ದರು. ಅವರ ದೇಹದ ಗುರುತೂ ಸಿಗದಂತೆ ಸುಟ್ಟು ಬೂದಿಯಾಗಿದ್ದರು. ಕೇವಲ 32 ವರ್ಷಕ್ಕೆ (1972-2004) ಜೀವನ ಮುಗಿಸಿದ್ದಾರೆ. 
 

ಕನ್ನಡ ಸಿನಿಮಾಗಳಾದ ಸಿರಿವಂತ, ವರ್ಷ, ಮರ್ಮ, ಉಗ್ರಗಾಮಿ, ವೀರ ಪರಂಪರೆ ಹಾಗೂ 6 ವರ್ಷಗಳ ಕಾಲ ಕಿರುತೆರೆಯಲ್ಲಿ ಸುಮಾರು 35ಕ್ಕೂ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಹೇಮಶ್ರೀ (Actress Hemashree) ಪತಿಯ ಜೊತೆಗೆ ಪ್ರವಾಸಕ್ಕೆಂದು ತೆರಳಿ ನಿಗೂಢವಾಗಿ ಸಾವನ್ನಪ್ಪಿ ಬೆಂಗಳೂರಿಗೆ ಮೃತದೇಹವಾಗಿ ವಾಪಸಾಗಿದ್ದರು. ಇವರು ತಮ್ಮ 30 ವರ್ಷಕ್ಕೆ ಕೊನೆಯುಸಿರೆಳೆದಿದ್ದಾರೆ.
 

ದಕ್ಷಿಣ ಭಾರತದ ಸಿನಿಮಾದಲ್ಲಿ ಐಟಂ ಡ್ಯಾನ್ಸರ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ (Silk Smitha) ಭಾರಿ ಬೇಡಿಕೆ ನಟಿಯಾಗಿದ್ದರು. ಯಾವುದೇ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಡ್ಯಾನ್ಸ್ ಇದ್ದರೆ, ಅದನ್ನು ನೋಡಲೆಂದೇ ಜನರು ಥಿಯೇಟರ್‌ಗೆ ಹೋಗುತ್ತಿದ್ದರು. ಆದರೆ, 1996ರಲ್ಲಿ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದರು.
 

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 4ನೇ ಸೀಸನ್ ಗೆದ್ದು ಬೆಳಕಿಗೆ ಬಂದಿದ್ದ ಮೆಬಿನಾ ಮೈಕಲ್ (Mebina Michael)  ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು. ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದು, ಮಾಡಲಿಂಗ್‌ನಲ್ಲೂ ಪ್ರಸಿದ್ಧಿಯಾಗಿದ್ದರು. ಆದರೆ, 2020ರಲ್ಲಿ ನಡೆದ ಕಾರು ಅಪಘಾತದಲ್ಲಿ ಮೆಬಿನಾ 23 ವರ್ಷಕ್ಕೆ ಮೃತಪಟ್ಟರು.
 

ಭಾರತೀಯ ಸೌಂದರ್ಯ ಸ್ಪರ್ಧಿ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ನಿವೇದಿತಾ ಜೈನ್ (Nivedita Jain) ಅತಿಕಡಿಮೆ ಕಾಲಾವಧಿ ಬದುಕಿದ ಸ್ಟಾರ್ ನಟಿಯಾಗಿದ್ದಾರೆ. ಇವರು (9 ಜೂನ್ 1979 - 10 ಜೂನ್ 1998) ಕೇವಲ 19 ವರ್ಷಕ್ಕೆ ತಮ್ಮ ಜೀವಿತವನ್ನೇ ಕೊನೆಗೊಳಿಸಿದರು. ಕೇವಲ 2 ವರ್ಷದಲ್ಲಿ 12 ಚಿತ್ರಗಳಲ್ಲಿ ನಟಿಸಿದ್ದರು. ಶಿವರಂಜಿನಿ, ಸೂತ್ರಧಾರ, ಪ್ರೇಮ ರಾಗ ಹಾಡು ಗೆಳತಿ, ಬಾಳಿನ ದಾರಿ, ಬಾಳಿದ ಮನೆ, ಅಮೃತ ವರ್ಷಿಣಿ, ನೀ ಮುಡಿದಾ ಮಲ್ಲಿಗೆ ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
 

ಕನ್ನಡ ಚಿತ್ರರಂಗದಲ್ಲಿ 1970ರಿಂದ 1980ರ ಅವಧಿಯಲ್ಲಿ ತುಮಕೂರು ಮೂಲದ ಮಂಜುಳಾ (Manjula) ಅತ್ಯಂತ ಹೆಚ್ಚು ಸಕ್ರಿಯವಾಗಿದ್ದ ನಟಿಯಾಗಿದ್ದರು. ಸುಮಾರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ, ಇವರು 1986ರಲ್ಲಿ (32ನೇ ವಯಸ್ಸಿನಲ್ಲಿ) ತಮ್ಮ ಮನೆಯಲ್ಲಿ ಸಂಭವಿಸಿದ ಗ್ಯಾಸ್ ಸ್ಟವ್ ಸ್ಪೋಟದಲ್ಲಿ ನಿಧನ ಹೊಂದಿದ್ದಾರೆ.
 

ಕನ್ನಡ ಸಿನಿಮಾ ಇಂಡಸ್ಟ್ರಿಯು ಅಂಬೆಗಾಲಿಟ್ಟು ನಡೆಯಲು ಆರಂಭಿಸಿದ್ದ (ಕಪ್ಪು-ಬಿಳುಪಿನ ಅವಧಿ) ಕಾಲದಲ್ಲಿ ಅದ್ಭುತ ಮ್ಯಾನರಿಸಂ ಮೂಲಕ ನಟಿಸಿ ಮನರಂಜಿಸಿದ ನಟಿ ಕಲ್ಪನಾ (Kalpana). ಕನ್ನಡ ಚಿತ್ರರಂಗ ಕಂಡ ಅಪರೂಪದ ತಾರೆ ಕಲ್ಪನಾ 'ಮಿನುಗು ತಾರೆ' ಎಂದೇ ಖ್ಯಾತಿ ಹೊಂದಿದ್ದರು. ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಪ್ರೇಮ ಪಾಶಕ್ಕೆ ಸಿಲುಕಿ, 1997ರಲ್ಲಿ ಸಂಕೇಶ್ವರದ ಮನೆಯಲ್ಲಿ (36 ವರ್ಷಕ್ಕೆ) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
 

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ 1960-1970ರ ದಶಕದಲ್ಲಿ ನಟಿ ಚಂದ್ರಕಲಾ (Chandrakala) ಬಹು ಬೇಡಿಕೆಯ ನಟಿಯಾಗಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಮತ್ತು ರಾಜೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ, ಚಂದ್ರಕಲಾ ಅವರು 1999ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ಕ್ಯಾನ್ಸರ್ ಖಾಯಿಲೆಯಿಂದ ಅಕಾಲಿಕವಾಗಿ ನಿಧನರಾದರು.
 

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಾ ಕುಮಟಾ (Padma Kumta) ನಾಲ್ಕು ದಶಕಗಳ ಕಾಲ ಸಿನಿಮಾದಲ್ಲಿ ಸಕ್ರಿಯವಾಗಿದ್ದರು. ಇವರ ಚೋಮನದುಡಿ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೆ, ಪದ್ಮಾ ಅವರು 2017ರಂದು ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದು ತಮ್ಮ 58ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾದರು.
 

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯಗೊಂಡಿದ್ದ ಜಯಶ್ರೀ ರಾಮಯ್ಯ (Jayashree Ramaiah) 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕನ್ನಡದ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು 31 ವರ್ಷಕ್ಕೆ ಜೀವನ ಕೊನೆಗೊಳಿಸಿದ್ದಾರೆ.

click me!