ಕಿರಣ್ ರಾಜ್ ನಟನೆಯ ‘ಬಡ್ಡೀಸ್’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಗುರು ತೇಜ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಭಾರತಿ ಶೆಟ್ಟಿ ನಿರ್ಮಿಸಿದ್ದಾರೆ.
ಕಾಲೇಜು, ಪ್ರೀತಿ- ಪ್ರೇಮ ಹಾಗೂ ಸ್ನೇಹದ ಸುತ್ತ ಸಾಗುವ ಕತೆ ಇದಾಗಿದೆ. ಈ ಕಾರಣಕ್ಕೆ ಚಿತ್ರಕ್ಕೆ ‘ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ’ ಎನ್ನುವ ಸಬ್ ಟೈಟಲ್ ಕೂಡ ಇಡಲಾಗಿದೆ.
‘ಕನ್ನಡತಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಕಿರಣ್ ಈ ಚಿತ್ರದ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸ್ನೇಹ ಸಂಬಂಧವೇ ಈ ಚಿತ್ರದ ಪ್ರಧಾನ ಅಂಶ.
ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಲಾಗಿದ್ದು, ಎಲ್ಲ ಯುವ ಮನಸ್ಸುಗಳಿಗೆ ಈ ಚಿತ್ರ ಹತ್ತಿರವಾಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅವರು ನಟಿಸಿದ್ದಾರೆ.
ಜ್ಯೂಡಾ ಸ್ಯಾಂಡಿ ಸಂಗೀತ, ನಿಭಾ ಶೆಟ್ಟಿಕ್ಯಾಮೆರಾ ಚಿತ್ರಕ್ಕಿದೆ. ಉಳಿದಂತೆ ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ಗಿರೀಶ್ ಜಟ್ಟಿ, ಉದಯ್ ಸೂರ್ಯ, ರೋಹನ್ ಸಾಯಿ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.