ವಿವಾದದ ನಂತರ ಹೊಸ ಫೋಟೋ ಶೇರ್ ಮಾಡಿದ ಸಪ್ತಮಿ ಗೌಡ… ಚಡ್ಡಿ ಹಾಕಿ ಸ್ಕೂಲ್ ಬಂದ್ಯಾ ಪುಟ್ಟಿ ಎಂದಿದ್ದು ಯಾರು?

First Published | Jul 31, 2024, 9:19 PM IST

ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟಿ ಸಪ್ತಮಿ ಗೌಡ ಇದೀಗ ಸುಮಾರು ಎರಡು ತಿಂಗಳ ಬಳಿಕ ತಮ್ಮ ಹೊಸ ಫೋಟೋ ಶೂಟ್ ಮೂಲಕ ಪ್ರತ್ಯಕ್ಷರಾಗಿದ್ದಾರೆ. 
 

ಕಾಂತಾರ ಸಿನಿಮಾದಲ್ಲಿ ಲೀಲಾ ಆಗಿ ಮಿಂಚಿ ಅಪಾರ ಅಭಿಮಾನಿಗಳನ್ನ ಪಡೆದ ನಟಿ ಸಪ್ತಮಿ ಗೌಡ (Sapthami Gowda), ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಇಲ್ಲಿವರೆಗೂ ನಟಿ, ನಟಿಯರ ಕ್ರಿಕೆಟ್ ಮತ್ತು ತೆಲುಗು ಶೂಟಿಂಗಲ್ಲಿ ಬ್ಯುಸಿಯಾಗಿದ್ದರು. 
 

ಕಳೆದ ತಿಂಗಳ ಆರಂಭದಲ್ಲಿ ತಮ್ಮ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದೋರಿಗೆ ಥ್ಯಾಂಕ್ಯೂ ಹೇಳಿ ಒಂದು ಪೋಸ್ಟ್ ಹಾಕಿದ್ದೇ ಕೊನೆ ಬಳಿಕ ಕಾಂಟ್ರೋವರ್ಸಿಗೆ ಸಿಲುಕಿ ನಟಿ, ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. 
 

Tap to resize

ಐವರಿ ಬಣ್ಣದ ಶಾರ್ಟ್ಸ್ ಮತ್ತು ಎಂಬ್ರಾಯಿಡರಿ ಇರುವ ಶರ್ಟ್ ಅದಕ್ಕೆ ಮ್ಯಾಚ್ ಆಗುವ ಸ್ನೀಕರ್ಸ್ ಧರಿಸಿ, ಕೈಯಲ್ಲೊಂದು ಪುಟ್ಟ ಕ್ಯಾಮೆರಾ ಹಿಡಿದು ಪೋಸ್ ಕೊಟ್ಟಿರುವ ಸಪ್ತಮಿಯನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 
 

ಸಪ್ತಮಿ ಗೌಡ, ಬೋಲ್ಡ್ ಮತ್ತು ಕ್ಯೂಟ್ ಆಗಿರುವ ಫೋಟೋಗಳನ್ನ ನೋಡಿ ಮತ್ತೊಬ್ಬ ಕನ್ನಡ ನಟಿ ಅರ್ಚನಾ ಕೊಟ್ಟಿಗೆ (Archana Kottige) ಯಾವ ಸೂಲ್ ಪುಟ್ಟಿ? ಸ್ಕೂಲ್ ಚಡ್ಡೀಲೆ ಬಂದುಬಿಟ್ಟಿದ್ಯಾ? ಎಂದು ಕಾಮೆಂಟ್ ಮಾಡಿದ್ದು, ಅದಕ್ಕೆ ಸಪ್ತಮಿ ಫೀಲ್ಡ್ ಟ್ರಿಪ್ ಇತ್ತು ಇವತ್ತು ಎಂದು ಉತ್ತರ ನೀಡಿದ್ದಾರೆ.  
 

ಇನ್ನು ಅಭಿಮಾನಿಗಳಂತೂ ಬರೋಬ್ಬರಿ ಎರಡು ತಿಂಗಳ ಬಳಿಕ ತಮ್ಮ ನೆಚ್ಚಿನ ನಟಿಯ ಫೋಟೋಗಳನ್ನ ನೋಡಿ ಖುಷಿ ಪಟ್ಟಿದ್ದು, ಸ್ಯಾಂಡಲ್ ವುಡ್ ಕ್ವೀನ್, (Sandalwood queen) ಯುವರಾಣಿ, ಕೊನೆಗೂ ಎರಡು ತಿಂಗಳ ಬಳಿಕ ನಿಮ್ಮನ್ನ ಹೀಗೆ ನೋಡೋ ಭಾಗ್ಯ ಸಿಕ್ಕಿತ್ತಲ್ಲಾ ಎಂದು ಹೇಳಿಕೊಂಡಿದ್ದಾರೆ. 
 

ಮತ್ತೊಬ್ರು ನಿಮ್ಮ ಸ್ಮೈಲ್ ಚೆನ್ನಾಗಿದೆ ಅಂದ್ರೆ, ಇನ್ನೊಬ್ರು ನಿಮ್ಮನ್ನ ಮದ್ವೆ ಆಗೋಕೆ ಪ್ರೊಸೀಜರ್ ಏನು ಅಂತಾನು ಕೇಳಿದ್ದಾರೆ, ಮತ್ತೊಬ್ಬರು ನಿಮ್ಮ ಜೊತೆ ಸೆಲ್ಫಿ ಬೇಕು ಅಂದ್ರೆ, ಇನ್ನೊಬ್ಬರು ಚಡ್ಡಿ ಗರ್ಲ್ ಆಗಿದ್ರೂ ನಿಮ್ಮ ಜಿಮ್ ಬಾಡಿ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು ನಮ್ಮ ಫಾರೆಸ್ಟ್ ಆಫೀಸರ್ ನ ನೋಡಿ ಸಖತ್ ಸ್ಟೈಲಿಶ್ ಆಗಿದ್ದಾರೆ ಎಂದಿದ್ದಾರೆ. 
 

ನ್ಯಾಷನಲ್ ಲೆವೆಲ್ ಸ್ವಿಮ್ಮರ್ (swimmer) ಆಗಿರುವ ಸಪ್ತಮಿ ಗೌಡ, 2020ರಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆದರೆ ಇವರಿಗೆ ನೇಮು ಫೇಮ್ ತಂದುಕೊಟ್ಟ ಸಿನಿಮಾ ಕಾಂತಾರಾ. ಈ ಸಿನಿಮಾದಲ್ಲಿನ ಫಾರೆಸ್ಟ್ ಆಫೀಸರ್ ಲೀಲಾ ಪಾತ್ರ ಇವತ್ತಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. 
 

ಇದಲ್ಲದೇ ದ ವ್ಯಾಕ್ಸಿನ್ ವಾರ್ ಸಿನಿಮಾ ಮೂಲಕ ಬಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದ ನಟಿ ಸಪ್ತಮಿ, ಬಳಿಕ ಯುವ ಸಿನಿಮಾ ಮೂಲಕ ಮತ್ತೆ ಕನ್ನಡಿಗರ ಮನ ಗೆದ್ದರು. ಇದೀಗ ನಿತಿನ್ ಸಿನಿಮಾ ಮೂಲಕ ತೆಲುಗು ಸಿನಿಮಾಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ ನಟಿ ಸಪ್ತಮಿ ಗೌಡ. 
 

Latest Videos

click me!