ರಾಧಿಕಾ ಪಂಡಿತ್ (Radhika Pandit) ಸೋಶಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಮ್ನಲ್ಲಿ (Instagram) ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಸಹೋದರನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಹಳ ದಿನಗಳ ಬಳಿಕ ನನ್ನ ಚಿಕ್ಕಮ್ಮಂದಿರು ಹಾಗೂ ತಾಯಿಯ ಸಹೋದರಿಯರನ್ನ ಕಸಿನ್ ಮದುವೆಯಲ್ಲಿ ಭೇಟಿಯಾದೆ. ಸಂತಸದ ಕ್ಷಣಗಳನ್ನ ನಾವು ಕಳೆದ್ವಿ ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ರಾಧಿಕಾ, ಯಶ್ (Yash) ಮಕ್ಕಳಾದ ಆಯ್ರಾ (Ayra) ಹಾಗೂ ಯಥರ್ವ್ (Yatharv) ಕೂಡ ಪಾಲ್ಗೊಂಡಿದ್ದರು. ರಾಧಿಕಾ ಪಂಡಿತ್ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದರೆ, ಯಶ್ ಕಪ್ಪು ಬಣ್ಣದ ಕುರ್ತಾ ತೊಟ್ಟಿದ್ದರು. ಮಕ್ಕಳು ಆಯ್ರಾ ಮತ್ತು ಯಥರ್ವ್‌ಗೆ ಹಳದಿ ಬಣ್ಣದ ದಿರಿಸುಗಳನ್ನು ಉಡಿಸಲಾಗಿದೆ.
ರಾಧಿಕಾ ಪಂಡಿತ್ ಅವರು ಮಕ್ಕಳು ವಿಮಾನದಲ್ಲಿ ಸಂಚರಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರಯಾಣದ ವೇಳೆ ರಾಧಿಕಾ ಪಂಡಿತ್ ಅವರು ಮಕ್ಕಳಿಗೆ ಪುಸ್ತಕ ನೀಡಿದ್ದು, 'ಇನ್ ಫ್ಲೈಟ್ ಎಂಟರ್‌ಟೇನ್‌ಮೆಂಟ್' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಕೂಡ ಆಗಿದೆ.
ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ಅಮೂಲ್ಯ ಸೀಮಂತ ಪಾರ್ಟಿಯಲ್ಲಿ (Amulya Baby Shower) ಭಾಗವಹಿಸಿದ್ದರು. ಮಾತ್ರವಲ್ಲದೇ ಅವರು ಧರಿಸಿದ್ದ ಮ್ಯಾಕ್ಸಿ ಡ್ರೆಸ್ (Maxi Dress) ಎಲ್ಲರ ಗಮನ ಸೆಳೆದಿತ್ತು. ಸದರ ಬೆಲೆ ಬರೋಬ್ಬರಿ 9999ರೂ.
ಇನ್ನು 2016ರಲ್ಲಿ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್ ಒಂದು ಬ್ರೇಕ್ ಪಡೆದುಕೊಂಡರು. ಆ ಬಳಿಕ 2019ರಲ್ಲಿ ತೆರೆಗೆ ಬಂದ 'ಆದಿ ಲಕ್ಷ್ಮೀ ಪುರಾಣ' ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ.