Nithya Menon ಕೋಟಿಯಲ್ಲಿ ಸಂಭಾವನೆ ಪಡೆದ 'ಮೈನಾ' ಹೋಗಿದ್ದೆಲ್ಲಿಗೆ?

Suvarna News   | Asianet News
Published : Feb 25, 2022, 04:57 PM IST

ಕೋಟಿಯಲ್ಲಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ ಬಹುಭಾಷಾ ನಟಿ ನಿತ್ಯಾ ಮೆನನ್. ಯಾವ ಸಿನಿಮಾ ಕೈಯಲಿದೆ?

PREV
16
Nithya Menon ಕೋಟಿಯಲ್ಲಿ ಸಂಭಾವನೆ ಪಡೆದ 'ಮೈನಾ' ಹೋಗಿದ್ದೆಲ್ಲಿಗೆ?

2006ರಲ್ಲಿ 7 o'clock ಚಿತ್ರದ ಮೂಲಕ ಅನು ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಲಯಾಳಂ ಸುಂದರಿ ನಿತ್ಯಾ ಮೆನನ್ (Nithya Menon)

26

ಜೋಶ್, ಮೈನಾ ಮತ್ತು ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿರುವ ನಿತ್ಯಾ ಮೆನನ್ ಇತ್ತೀಚಿಗೆ  ಯಾವ ಸಿನಿಮಾಗಳಲ್ಲಿಯೂ ಅಭಿನಯಿಸಿಲ್ಲ. ಏಕೆಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

36

ಇಂಡಿಯಾ ಹೆರಾಲ್ಡ್‌ ಸುದ್ದಿ ಮಾಡಿರುವ ಪ್ರಕಾರ ನಿತ್ಯಾ ಮೆನನ್ ತಮ್ಮ ಒಂದು ಸಿನಿಮಾಗೆ 1 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮುಂದಿಟ್ಟಿದ್ದಾರಂತೆ. ಹೀಗಾಗಿ ಯಾವ ಆಫರ್‌ ಬರುತ್ತಿಲ್ಲ ಎನ್ನಲಾಗಿದೆ.

46

ಕೆಲವು ದಿನಗಳ ಹಿಂದೆ ಮುಡಿಂಜ ಇವನು ಪುಡಿ ಚಿತ್ರದ ಫೋಟೋ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಸುದೀಪ್‌ ನಟಿಸಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ನಿತ್ಯಾ ಡಿಮ್ಯಾಂಡ್ ಮಾಡಿರುವ ಸಂಭಾವನೆ ಚಿತ್ರಕ್ಕೆ ನೀಡಿಲ್ಲವಂತೆ.

56

ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮಾಡಿರುವ ಕಾರಣ ಸಂಭಾವನೆ ಇಷ್ಟು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಎರಡು ಸಿನಿಮಾ ಲೆಕ್ಕ ಆಗುತ್ತದೆ, ಎಂದು 1 ಕೋಟಿ ಕೇಳಿದ್ದಾರೆ.

66

ಕಿಚ್ಚ ಸುದೀಪ್‌ ಜೊತೆ ಕೋಟಿಗೊಬ್ಬ 3 ಸಿನಿಮಾ ನಂತರ ಕನ್ನಡದ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ನಮ್ಮ ಬೆಂಗಳೂರಿನ ಹುಡುಗಿ ಕನ್ನಡ ಸಿನಿಮಾರಂಗದಲ್ಲಿ ಇಲ್ಲ ಅಂದ್ರೆ ಬೇಸರ ಆಗುತ್ತದೆ, ಎಂದು ಇತ್ತೀಚಿಗೆ ಹಂಚಿಕೊಂಡ ಫೋಟೊಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories