ಮಗು ಕಳೆದುಕೊಂಡ ನೋವಿಗೆ ಕೊರಗಿ ಕೊರಗಿ ಡಿಪ್ರೆಶನ್‌ಗೆ ಜಾರಿದ್ದೆ; ಆರೋಗ್ಯದ ಬಗ್ಗೆ ನಟಿ ಪ್ರೇಮಾ ಸ್ಪಷ್ಟನೆ

Published : Apr 19, 2024, 02:41 PM ISTUpdated : Apr 20, 2024, 11:32 AM IST

ಕಿರುತೆರೆಯಲ್ಲಿ  ಮಿಂಚುತ್ತಿರುವ ನಟಿ ಪ್ರೇಮಾ. ಅನಾರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್....

PREV
17
ಮಗು ಕಳೆದುಕೊಂಡ ನೋವಿಗೆ ಕೊರಗಿ ಕೊರಗಿ ಡಿಪ್ರೆಶನ್‌ಗೆ ಜಾರಿದ್ದೆ; ಆರೋಗ್ಯದ ಬಗ್ಗೆ ನಟಿ ಪ್ರೇಮಾ ಸ್ಪಷ್ಟನೆ

ಕನ್ನಡ ಚಿತ್ರರಂಗದ ಅದ್ಭುತ ನಟಿ ಪ್ರೇಮಾ ಹಲವು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಮಹಾನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿರುವ ಪ್ರೇಮಾ ಈಗಲೂ ಎವರ್‌ಗ್ರೀನ್. 

27

ಈಗ ಕಾಣಿಸಿಕೊಳ್ಳುತ್ತಿರುವ ಪ್ರೇಮಾ ಇಷ್ಟು ದಿನ ಎಲ್ಲಿದ್ದರು? ಏನು ಮಾಡುತ್ತಿದ್ದರು? ಹೇಗಿತ್ತು? ಆನಾರೋಗ್ಯ ಮತ್ತು ಡಿಪ್ರೆಶನ್‌ ಎಂದು ಹರಿದಾಡುತ್ತಿದ್ದ ಸುದ್ದಿಗೆ ಸ್ವತಃ ಪ್ರೇಮಾ ಸ್ಪಷ್ಟನೆ ಕೊಟ್ಟಿದ್ದಾರೆ. 

37

ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬಂತು. ನಾನು ನಿರೀಕ್ಷೆ ಮಾಡಿದ್ದು ನನಗೆ ಸಿಕ್ಕಿಲ್ಲ ಅಂದಾಗ ನಾನು ಡಿಪ್ರೆಶನ್‌ಗೆ ಜಾರಿದೆ ಅನ್ಸುತ್ತೆ. ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೆ ಆಗುತ್ತದೆ. 

47

ನನಗೆ ಅಬಾರ್ಷನ್ ಆಯ್ತು ಆಸ್ಪತ್ರೆಯಲ್ಲಿದ್ದೆ ಇದೇ ಕಾರಣ ಆಯ್ತು ನಾನು ಡಿಪ್ರೆಶನ್‌ಗೆ ಜಾರಲು. ಮಗಳು ಕಳೆದುಕೊಂಡೆ ಅನ್ನೋ ನೋವು ಇತ್ತು ಸೆಂಟಿಮೆಂಟ್ ಅನ್ನೋದು ಎಲ್ಲರಿಗೂ ಇರುತ್ತದೆ ಅದಕ್ಕೆ ಕೊರಗಿ ಕೊರಗಿ ನಾನು ಡಿಪ್ರೆಶನ್‌ಗೆ ಜಾರಿದೆ.

57

ಪ್ರೇಮಾಳಿಗೆ ಕ್ಯಾನ್ಸರ್ ಎಂದು ಹಬ್ಬಿಸಿದ್ದರು ...ತಂದೆ ತಾಯಿ ದೇವರ ಆಶೀರ್ವಾದಿಂದ ನಾನು ಬೇಗ ಅದರಿಂದ ಹೊರ ಬಂದಿರುವೆ. 25 ವರ್ಷಗಳಿಂದ ವೈದ್ಯರು ಪರಿಚಯ ಇದ್ದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡೆ. 

67

ಮನೆಯಲ್ಲಿದ್ದರೆ ಗುಣ ಆಗುವುದಿಲ್ಲ ಅನ್ನೋ ಕಾರಣಕ್ಕೆ ಹೊರ ಬರಲು ಬಂದೆ ಹೀಗಾಗಿ ಹೊರಗೆ ಕಾಣಿಸಿಕೊಳ್ಳಲು ಶುರು ಮಾಡಿದೆ' ಎಂದು ಪ್ರೇಮಾ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

77

'ನನಗೆ ಧ್ಯಾನ ತುಂಬಾ ಸಹಾಯ ಮಾಡಿತ್ತು. ನನ್ನ ಸ್ನೇಹಿತರು Osho ಸಂಸ್ಥೆಗೆ ಕರೆದುಕೊಂಡು ಹೋದರು ಆ ಸಮಯದಲ್ಲಿ ನಾನು ಆಶ್ರಮ ಸೇರಿಕೊಂಡೆ ಎಂದು ಅನೇಕರು ಹೇಳಲು ಶುರು ಮಾಡಿದ್ದರು. ನಾಲ್ಕು ದಿನ ಕ್ಯಾಂಪ್ ಮುಗಿಸಿಕೊಂಡು ಬಂದೆ ಈಗ ಮನೆಯಲ್ಲಿ ಯೋಗ ಮಾಡುವೆ' ಎಂದು ಪ್ರೇಮಾ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories