ಬೆಡ್‌ರೂಮ್‌ ಟಿವಿ ಸೆಟ್​ಟಾಪ್ ಬಾಕ್ಸ್ ಹಿಂದೆ ಕ್ಯಾಮೆರಾ; ಕಳ್ಳನನ್ನು ಹಿಡಿದ 'ಗೂಗ್ಲಿ' ನಟಿ

Published : Apr 18, 2024, 12:13 PM IST

ಅಬ್ಬಬ್ಬಾ! ನಟಿ ಮಣಿಯರು ಬರ್ತಾರೆ ಅಂತ ಸಿಸಿ ಕ್ಯಾಮೆರಾ ಹಾಕೋದಾ? ನಟಿ ಕೃತಿ ಕರಬಂಧ ಎಷ್ಟು ಶಾರ್ಪ್‌ ನೋಡಿ..... 

PREV
18
ಬೆಡ್‌ರೂಮ್‌ ಟಿವಿ ಸೆಟ್​ಟಾಪ್ ಬಾಕ್ಸ್ ಹಿಂದೆ ಕ್ಯಾಮೆರಾ; ಕಳ್ಳನನ್ನು ಹಿಡಿದ 'ಗೂಗ್ಲಿ' ನಟಿ

 ಗೂಗ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಕರಾಬಂಧ ಸದ್ಯ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

28

ಈ ಹಿಂದೆ ಕೃತಿ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾ ಚಿತ್ರೀಕರಣ ಮಾಡುವಾಗ ಉಳಿದುಕೊಂಡಿದ್ದ ರೂಮಿನಲ್ಲಿ ಸಿಸಿ ಕ್ಯಾಮೆರಾವನ್ನು ಕಂಡು ಶಾಕ್ ಆಗಿದ್ದರು. ಈ ಘಟನೆ ಮತ್ತೊಮ್ಮೆ ವೈರಲ್ ಆಗುತ್ತಿದೆ. 

38

ಕನ್ನಡ ಸಿನಿಮಾ ಶೂಟಿಂಗ್‌ ಸಮಯದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಈ ರೀತಿ ರಹಸ್ಯ ಕ್ಯಾಮೆರಾ ಇಡಲಾಗಿತ್ತು ಎಂದಿದ್ದಾರೆ. ಮಹಿಳೆಯರು ಹೊಸ ಸ್ಥಳಕ್ಕೆ ಹೋದಾಗ ಎಚ್ಚರ ವಹಿಸುವ ಅಗತ್ಯದ ಕುರಿತು ಹೇಳಿದ್ದಾರೆ ಕೃತಿ.

48

ಹೋಟೆಲ್‌ನಲ್ಲಿ ಅಡಗಿಸಿ ಇಟ್ಟಿದ್ದ ಕ್ಯಾಮೆರಾವನ್ನು ಅದೃಷ್ಟವಶಾತ್‌ ತಾವು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.ಇದೇ ವೇಳೆ  ಕ್ಯಾಮೆರಾ ಪತ್ತೆ ಹಚ್ಚಿರುವ ಬಗೆಯನ್ನೂ  ಅವರು ವಿವರಿಸಿದ್ದಾರೆ. 

58

ಇದನ್ನು ಕೃತಿ ಅವರ ಮಾತಿನಲ್ಲಿಯೇ ಕೇಳುವುದಾದರೆ, ‘ಕನ್ನಡ ಸಿನಿಮಾ ಶೂಟಿಂಗ್​ನ ಸಂದರ್ಭದ ಒಂದು ಘಟನೆ ನನಗೆ ಇನ್ನೂ ನೆನಪಿದೆ. ಹೋಟೆಲ್ ಬಾಯ್ ನಾನು ತಂಗಿದ್ದ ಕೊಠಡಿಯಲ್ಲಿ ಹಿಡನ್‌  ಕ್ಯಾಮೆರಾ (Hidden Camara) ಇಟ್ಟಿದ್ದ.

68

ಇಂಥ ಘಟನೆಗಳ ಬಗ್ಗೆ ನಾನು ಸಾಕಷ್ಟು ನೋಡಿದ್ದರಿಂದ ಎಲ್ಲಿಯೇ ಹೋಟೆಲ್‌ಗೆ ಹೋದರೂ ಮೊದಲು ನಾನು ಮತ್ತು ನನ್ನ ಸ್ಟಾಫ್​ಗಳು  ಎಲ್ಲವನ್ನೂ ಪರೀಕ್ಷೆ ಮಾಡುತ್ತೇವೆ. 

78

ಆದರೆ ಕೆಲವೊಮ್ಮೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಇಡುವುದರಿಂದ ಅರಿವಿಗೆ ಬರುವುದಿಲ್ಲ. ಆದರೆ ಈ ಹೋಟೆಲ್‌ನಲ್ಲಿ ಕ್ಯಾಮೆರಾ ಇಟ್ಟವ ಅಷ್ಟೊಂದು ಪ್ರೊಫೆಷನಲ್‌ ಆಗಿರಲಿಲ್ಲ ಅನಿಸತ್ತೆ. 

88

ಕಾಣುವಂತೆ  ಕ್ಯಾಮೆರಾ ಇಟ್ಟಿದ್ದ. . ಸೆಟ್​ಟಾಪ್ ಬಾಕ್ಸ್ ಹಿಂಭಾಗದಲ್ಲಿ ಆತ ಕ್ಯಾಮೆರಾ ಇಟ್ಟಿದ್ದ. ನಿಜಕ್ಕೂ ಇದು ಭಯಾನಕ ಅನುಭವ ಆಗಿತ್ತು’ ಎಂದಿದ್ದಾರೆ ಕೃತಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories