ಅವಳಿ ಮಕ್ಕಳ ಜೊತೆ ಅಮೂಲ್ಯ ಕ್ಯೂಟ್‌ ಪೋಸ್‌; ಫೋಟೋ ವೈರಲ್!

First Published | Jun 13, 2022, 12:44 PM IST

ನಾಲ್ಕು ತಿಂಗಳ ನಂತರ ಮಕ್ಕಳ ಕ್ಯೂಟ್‌ ಫೋಟೋ ಹಂಚಿಕೊಂಡ ನಟಿ ಅಮೂಲ್ಯ. ಅಭಿಮಾನಿಗಳಿಂದ ಲವ್‌ ಸಿಂಬಲ್ ಸುರಿ ಮಳೆ...

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಜಗದೀಶ್ ಮಾರ್ಚ್‌ 1, 2022ರಂದು ಅವಳಿ ಗಂಡು ಮಕ್ಕಳನ್ನು ಕುಟುಂಬಕ್ಕೆ ಬರ ಮಾಡಿಕೊಂಡರು. 

ಅವಳಿ ಮಕ್ಕಳ ಎಂಟ್ರಿ ನಂತರ ಅಮೂಲ್ಯ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಕಂದಮ್ಮ ಆರೋಗ್ಯವನ್ನು ಆಗಾಗ ವಿಚಾರಿಸುತ್ತಿರುತ್ತಾರೆ.

Tap to resize

ಹೀಗಾಗಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಪಾದ ಹಿಡಿದು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 'Blessed' ಎಂದು ಬರೆದುಕೊಂಡಿದ್ದಾರೆ. 

ಕೆಲವು ದಿನಗಳ ಹಿಂದೆ ಅವಳಿ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮೂರು ಸಲ ನಟಿ ಅಮೂಲ್ಯಗೆ ಬೇಬಿ ಶವರ್ ಮಾಡಲಾಗಿತ್ತು. ಅಲ್ಲದೆ ಮೂರು ಥೀಮ್‌ನಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. 

2017ರಲ್ಲಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇಬ್ಬರೂ ಸಖತ್ ಆಕ್ಟೀವ್ ಆಗಿದ್ದಾರೆ. 

Latest Videos

click me!